ಅಭಿಪ್ರಾಯ / ಸಲಹೆಗಳು

ಅಕ್ರಮ ಕಳ್ಳಭಟ್ಟಿ ಸಾರಾಯಿ ಮಾರಾಟ ಪ್ರಕರಣ

 ಮಲ್ಲಂದೂರು ಪೊಲೀಸ್ ಠಾಣೆ.

ದಿನಾಂಕ:11-05-2022 ರಂದು ಮಲ್ಲಂದೂರು ಪೊಲೀಸ್ ಠಾಣಾ ಸರಹದ್ದಿನ ಮಾವಿನಕೂಲ್  ಗ್ರಾಮದ ವಾಸಿ ಶ್ರೀಮತಿ ಶೈಲಾ ಕೋಂ ಸುನೀಲ್ ಕುಮಾರ್ ಗ್ರಾಮದಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ಮದ್ಯ ಮಾರಾಟ ಮಾಡುತ್ತಿದ್ದು  ದಾಳಿ ವೇಳೆಯಲ್ಲಿ ಆರೋಪಿತಳು ತಪ್ಪಿಸಿಕೊಂಡು ಹೋಗಿದ್ದು, ಸುಮರು 2 ಲೀಟರ್ ಬಾಟಲಿಯಲ್ಲಿ ಸುಮಾರು 1 ಲೀಟರ್   ಕಳ್ಳಭಟ್ಟಿ ಸಾರಾಯಿಯನ್ನು ಅಮಾನತ್ತುಪಡಿಸಿಕೊಂಡಿದ್ದು, ಮದ್ಯದ ಅಂದಾಜು ಬೆಲೆ 300/- ರೂ ಗಳಾಗಿರುತ್ತೆ. ಆರೋಪಿತಳ ವಿರುದ್ದ ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಮಲ್ಲಂಧೂರು ಠಾಣಾ ಪಿಎಸ್ಐ ರವೀಶ್  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ

ಅಕ್ರಮ ಮದ್ಯ ಮಾರಾಟ ಪ್ರಕರಣ.

ಯಗಟಿ ಪೊಲೀಸ್ ಠಾಣೆ.

ದಿನಾಂಕ:10-05-2022 ರಂದು ಯಗಟಿ ಪೊಲೀಸ್ ಠಾಣಾ ಸರಹದ್ದಿನ ಕೆದಿಗೆರೆ ಗ್ರಾಮದಲ್ಲಿ ಗೌರಮ್ಮ ಕೊಂ ನಿಂಗಪ್ಪ ಕೆದಿಗೆರೆ ವಾಸಿ ಇವರು ತಮ್ಮ ಮುಂದೆ ಜಗುಲಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಅರೋಪಿತೆಯನ್ನು ವಶಕ್ಕೆ ಪಡೆದು ಅರೋಪಿತಳ ವಶದಲ್ಲಿ ಇದ್ದ 90 ಎಂ.ಎಲ್. ನ 40 ಮದ್ಯವನ್ನು ಅಮಾನತ್ತುಪಡಿಸಿಕೊಂಡಿದ್ದು, ಮದ್ಯದ ಅಂದಾಜು ಬೆಲೆ 1405/- ರೂ ಗಳಾಗಿರುತ್ತೆ. ಆರೋಪಿತಳ ವಿರುದ್ದ ಯಗಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಯಗಟಿ ಠಾಣಾ ಪಿಎಸ್ಐ ಶಶಿಕುಮಾರ್ ವೈ.ಎಸ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮಲ್ಲಂದೂರು ಪೊಲೀಸ್ ಠಾಣೆ.

ದಿನಾಂಕ:10-05-2022 ರಂದು ಮಲ್ಲಂದೂರು ಪೊಲೀಸ್ ಠಾಣಾ ಸರಹದ್ದಿನ ಹಾರ್ಜಿಹಳ್ಳಿ ಗ್ರಾಮದ ವಾಸಿ ಮಹೇಶ ಬಿನ್ ಮುತ್ತುರಾಜ್ ಇವನು ತಮ್ಮ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ತನ್ನ ಬಾಬ್ತು ಕೆಎ-18-ಸಿ-6791 ನಂಬರಿನ ಬೊಲೋರೊ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಮಲ್ಲಂದೂರು ಸರ್ಕಲ್ ಬಳಿ ವಾಹನವನ್ನು ತಪಾಸಣೆ ಮಾಡಿ, ಆರೋಪಿಯನ್ನು ವಶಕ್ಕೆ ಪಡೆದು ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 6 ರಟ್ಟಿನ ಬಾಕ್ಸ್ ನಲ್ಲಿ  90 ಎಂ.ಎಲ್. ನ 576 ಮದ್ಯವನ್ನು ಮತ್ತು ವಾಹನವನ್ನು ಅಮಾನತ್ತುಪಡಿಸಿಕೊಂಡಿದ್ದು, ಮದ್ಯದ ಅಂದಾಜು ಬೆಲೆ 16802/- ರೂ ಗಳಾಗಿರುತ್ತೆ. ಆರೋಪಿತನ ವಿರುದ್ದ ಯಗಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಮಲ್ಲಂಧೂರು ಠಾಣಾ ಪಿಎಸ್ಐ ರವೀಶ್  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಕ್ರಿಕೇಟ್ ಬೆಟ್ಟಿಂಗ್ ಜೂಜಾಟ ಪ್ರಕರಣ

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ;10-05-2022 ರಂದು ಅಜ್ಜಂಫುರ ಠಾಣಾ ಸರಹದ್ದಿನ ಗಡೀಹಳ್ಳಿ ಕಲ್ಲಾಫುರ- ಹೊಸೂರಿಗೆ ಹೋಗುವ ರಸ್ತೆ ಬಳಿ ಹೊಂಡದ ಬದಿಯಲ್ಲಿ ಐಪಿಎಲ್ ಕ್ರಿಕೆಟ್ ಮ್ಯಾಚ್ ಗೆ ಅಕ್ರಮವಾಗಿ ಬೆಟ್ಟಿಂಗ್ ಜೂಜಾಟ ಆಡುತ್ತಿದ್ದ 1. ಸಚ್ಚಿನ್ 2. ರಾಮು 3. ರಾಜಪ್ಪ ಇವರನ್ನು ವಶಕ್ಕೆ ಪಡೆದು ದಾಳಿ ವೇಳೆ  1. ಲೋಹಿತ್ @ ಸುಬ್ಬು 2. ಕುಮಾರ @ ಪೆಂಡ್ರಿ 3. ರಾಮ @ ಕುಂಟ 4. ಓಂಕಾರ(ಆನ್ನ) 5. ಸುದರ್ಶನ @ ಹೆಂಡ 6. ಹರೀಶ್ ಜಿ.ಎಂ. ರವರು ಓಡಿ ಹೋಗಿದ್ದು, ಆರೋಪಿತರು ಜೂಜಾಡಲು ಉಪಯೋಗಿಸಿದ 29,200/- ರೂ ನಗದು ಹಣ , ಒಂದು ಗ್ರೀನ್ ಎಜ್ ಕಿಂಗ್ ಸೈಜ್ ನೋಟ್  ಬುಕ್ , ಒಂದು ನೀಲಿ ಬಣ್ಣದ ಬಾಲ್ ಪೆನ್ನು ಅನ್ನು ಆಮಾನತ್ತು ಪಡಿಸಿಕೊಂಡು ಬಂದು ಅಜ್ಜಂಫುರ ಠಾಣೆಯಲ್ಲಿ ಅರೋಫಿತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಅಜ್ಜಂಪುರ ಠಾಣಾ ಪಿ,ಐ. ಲಿಂಗರಾಜ್  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ  ಪ್ರಕರಣ.

ಬಾಳೂರು ಪೊಲೀಸ್ ಠಾಣೆ.

ದಿನಾಂಕ 10-05-2022 ರಂದು ಅನಿಲ್ಲ ಹೆಚ್.ಎಸ್. ಬಿನ್ ಲೇಟ್ ಶಿವಯ್ಯ ,ಮಾವಿನ ಕಟ್ಟೆ ಹುಯಿಗೆರೆ, ಖಾಂಡ್ಯ ಹೋಬಳಿ ಚಿಕ್ಕಮಗಳೂರು ವಾಸಿ ರವರು ನೀಡಿದ ದೂರೇನೆಂದರೆ, ಪಿರ್ಯಾದುದಾರರ ಹೆಂಡತಿ ಅರ್ಚನಾ ತನ್ನ ಮೂಡಿಗೆರೆ ತಾಲ್ಲೋಕು, ಬಾಳೂರು ಹೋಬಳಿ ಹೊಸಂಪುರ ಗ್ರಾಮದ ಮನೆಯಿಂದ ದಿನಾಂಕ;01/05/2022 ರಂದು ಮಕ್ಕಳನ್ನು ಬಿಟ್ಟು ಮನೆಯಿಂದ ಹೋದವಳು, ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು ಈವರೆಗೂ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ಶ್ರೀಮತಿ ಅರ್ಚನಾ, 24 ವರ್ಷ, ಕೋಲುಮುಖ, ಗೋದಿ ಮೈಬಣ್ಣ , 4 ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾಗಿರುವ ಹೆಂಡತಿ ಶ್ರೀಮತಿ ಅರ್ಚನಾ ಇವಳನ್ನು  ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ  ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

 

ಇತ್ತೀಚಿನ ನವೀಕರಣ​ : 11-05-2022 06:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080