ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ ಪ್ರಕರಣ

ಲಕ್ಕವಳ್ಳ್ಳಿ  ಪೊಲೀಸ್ ಠಾಣೆ

ದಿನಾಂಕ:11/09/2021 ರಂದು 17.30 ಗಂಟೆ ಸಮಯದಲ್ಲಿ ಲಕ್ಕವಳ್ಳಿ ಠಾಣಾ ಸರಹದ್ದಿನ ಹರುವನಹಳ್ಳಿ ವಾಸಿ ಶಿವಕುಮಾರ್ ಇವರು ನೀಡಿದ ದೂರಿನಲ್ಲಿ ಪಿರ್ಯಾಧಿಯವರ ತಾಯಿ ಶ್ರೀಮತಿ ನಂಜಮ್ಮ ರವರು ಕಳೆದ 12 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ದಿನಾಂಕ 02/09/2021 ರಂದು 16.00 ಗಂಟೆ ಸಮಯದಲ್ಲಿ ಮನೆಯಿಂದ ಹೋದವರು ಈವರೆಗೂ ಮನೆಗೆ ಬಾರದೇ ಕಾಣೆಯಾಗಿದ್ದು,  ಇವರನ್ನು ಈವರೆಗೂ ಎಲ್ಲಾ ಕಡೆಗೂ ಹುಡುಕಿದರು ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ತನ್ನ ತಾಯಿ ಶ್ರೀಮತಿ ನಂಜಮ್ಮ ರವರನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ  ಲಕ್ಕವಳ್ಳಿ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಇಸ್ಪೀಟ್ ಜೂಜಾಟ ಪ್ರಕರಣ

ಸಖರಾಯಪಟ್ಟಣ ಪೊಲೀಸ್ ಠಾಣೆ

ದಿನಾಂಕ:10/09/2021 ರಂದು ಸಖರಾಯಪಟ್ಟಣ ಠಾಣಾ ಸರಹದ್ದಿನ ಗುಬ್ಬಿಹಳ್ಳಿ ತಾಂಡ್ಯದ ಸೇವಲಾಲ್ ದೇವಸ್ಥಾನದ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ 7 ಜನರು ಅಕ್ರಮವಾಗಿ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ  ಮಾಡಲಾಗಿ  4 ಜನ ಅರೋಪಿತರು ಸಿಕಿದ್ದು 3 ಜನ ತಪ್ಪಿಸಿಕೊಂಡು ಹೋಗಿದ್ದು, ಆರೋಪಿಗಳು ಜೂಜಾಟ ಆಡಲು ಉಪಯೋಗಿಸಿದ 52 ಇಸ್ಪೀಟ್ ಎಲೆಗಳು ಹಾಗೂ 610/- ರೂ ನಗದನ್ನು ಮತ್ತು ಒಂದು ಕಾರ್ಬನ್ ಬೇಸಿಕ್ ಹ್ಯಾಂಡ್ ಸೆಟ್ ಮತ್ತು ಇನ್ನೊಂದು ಸ್ಮಾರ್ಟ್ ಪೋನ್ ನನ್ನು ಅಮಾನತ್ತುಪಡಿಸಿಕೊಂಡು ಬಂದು  ಅರೋಪಿತರಾದ 1. ಅನಂದನಾಯ್ಕ ಬಿನ್ ಮಂಜಾನಾಯ್ಕ 2. ನಿಖಿಲ್ ನಾಯ್ಕ ಬಿನ್ ಗೋವಿಂದನಾಯ್ಕ 3. ದೀಪನಾಯ್ಕ ಬಿನ್ ಕಲ್ಲನಾಯ್ಕ 4. ರಾಜೇಶ್ ನಾಯ್ಕ ಬಿನ್ ಪರಮೇಶನಾಯ್ಕ 5. ಹೀರಾನಾಯ್ಕ ಬಿನ್ ಲಿಂಗಾನಾಯ್ಕ 6. ಲಕ್ಷ್ಮಣ ನಾಯ್ಕ ಬಿನ್ ಗೋವಿಂದನಾಯ್ಕ  7. ಅನಿಲ್ ಬಿನ್ ರಾಜಾನಾಯ್ಕ ರವರ ವಿರುದ್ದ  ಸಖರಾಯಪಟ್ಟಣ ಠಾಣೆಯಲ್ಲಿ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಹರೀಶ್ ಆರ್. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 11-09-2021 08:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080