ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ

ಅಜ್ಜಂಫುರ ಪೊಲೀಸ್ ಠಾಣೆ

ದಿನಾಂಕ 10-11-2021 ರಂದು ಅಜ್ಜಂಪುರ ಪೊಲೀಸ್ ಠಾಣಾ ಸರಹದ್ದಿನ ಗಡಿಹಳ್ಳಿ ಗ್ರಾಮದ ಸುದರ್ಶನ್ ಹೋಟೇಲ್ ನಲ್ಲಿ ಸುದರ್ಶನ್ ಬಿನ್ ರಂಗನಾಥಪ್ಪ ರವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ವಶಕ್ಕೆ ಪಡೆದು ಆತನು ಅಕ್ರಮವಾಗಿ ಹೊಂದಿದ್ದ  59 ಟೆಟ್ರಾಪ್ಯಾಕ್ 6 ಲೀಟರ್ 660 ಎಂ.ಎಲ್. ಮದ್ಯವನ್ನು  ಅಂದಾಜು ಬೆಲೆ 2847/- ಹಾಗೂ 290 ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡು ಬಂದು ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಡಿ.ಸಿ.ಐ.ಬಿ ವಿಭಾಗದ ಪಿ.ಎಸ್.ಐ. ಕೆ. ಪದ್ದು  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ವಂಚನೆ ಪ್ರಕರಣ

ಸಿ.ಇ.ಎನ್. ಪೊಲೀಸ್ ಠಾಣೆ. 

ದಿನಾಂಕ 11-11-2021 ರಂದು ಪಿರ್ಯಾಧಿ ರವರು ನೀಡಿದ ದೂರಿನಲ್ಲಿ ಪಿರ್ಯಾದಿಯವರಿಗೆ ಪ್ರಾಂಕ್ ರಿಚಾರ್ಡ್ ಹ್ಯಾರಿ ( ಮೈಕ್) ಎಂಬ ವ್ಯಕ್ತಿ ಕ್ರಿಶ್ಚೀಯನ್ ಮ್ಯಾಟ್ರಿಮೊನಿಯಲ್ ಅಪ್ ನಲ್ಲಿ ಪರಿಚಯವಾಗಿ ಮದುವೆ ಪ್ರಸ್ತಾಪ ಮಾಡಿ, ಪಿರ್ಯಾದಿಯು  ಒಪ್ಪಿದ್ದು ಮೊಬೈಲ್ ನಲ್ಲಿ ಚಾಟ್ ಮಾಡುತ್ತಿದ್ದು ಪ್ರಾಂಕ್ ರಿಚಾರ್ಡ್ ಹ್ಯಾರಿ ನು ಪಿರ್ಯಾದಿಗೆ ದಿನಾಂಕ 04-11-2021 ರಂದು ಒಂದು ಗೋಲ್ಡ್ ನೆಕ್ಲೆಸ್ ಮತ್ತು ಕ್ಯಾಶ್ ಗಿಪ್ಟ್ ಕಳುಹಿಸಿರುವುದಾಗಿ ಕಸ್ಟಮ್ ಕ್ಲಿಯರ್ ಮಾಡಲು 55,000/-ರೂ ಗೂಗಲ್ ಪೇ ಮುಖಾಂತರ ಪಾವತಿಸಲು ಹೇಳಿ ಪಾವತಿಸಿದ್ದು, ನಂತರ 1,25,000/- ಪಾವತಿಸಲು ತಿಳಿಸಿದ್ದು, ಒಟ್ಟು ಪಿರ್ಯಾದಿಯವರಿಂದ 1,80,000/-ಹಣವನ್ನು ಪಡೆದು ಮೋಸ ಮಾಡಿರುವುದಾಗಿ ಮೋಸ ಮಾಡಿದ ಪ್ರಾಂಕ್ ರಿಚಾರ್ಡ್ ಹ್ಯಾರಿ ರವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಕೋರಿ ನೀಡಿದ ದೂರಿನ ಮೇರೆಗೆ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ನ.ರಾ.ಪುರ ಪೊಲೀಸ್

ದಿನಾಂಕ 11-11-2021 ರಂದು ಪಿರ್ಯಾದಿ ವಿ  ಶ್ರೀಮತಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ ಪಿರ್ಯಾದಿಯವರು ಮಡಬೂರು ಆಂಚೆ ಕಛೇರಿ ಯಲ್ಲಿ ಪೋಸ್ಟ್ ಮಾಸ್ಟರ್ ಕೆಲಸ ಮಾಡುತ್ತಿದ್ದು ದಿನಾಂಕ 10.11.2021 ರಂದು ಆಂಚೆ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸಿ ಎಂದಿನಂತೆ ಈ ದಿನ ಹೋಗಿ ನೋಡಲಾಗಿ ಅಂಚೆ ಕಛೇರಿಯ ಬೀರುವಿನಲ್ಲಿ ಇಟ್ಟಿದ್ದ 12,000/- ರೂ ವನ್ನು ಯಾರೋ ಕಳ್ಳರು  ಅಂಚೆ ಕಛೇರಿ ಹಂಚು ತೆಗೆದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಹಾಗೂ ಅಂಚೆ ಕಛೇರಿ ಪಕ್ಕದಲ್ಲಿ ಇದ್ದ ಈಶ್ವರಿ  ರವರ ಚಿಲ್ಲರೆ ಅಂಗಡಿ ಬೀಗ ಮುರಿದು ಯಾರೋ ಕಳ್ಳರು 10000/-ರೂ ನಗದು ಹಣವನ್ನು  ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ  ಕಳ್ಳರನ್ನು ಮತ್ತು ಕಳುವಾಗಿರುವ ನಗದನ್ನು ಪತ್ತೆ ಮಾಡಿ ಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ  ನ.ರಾ.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 11-11-2021 07:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080