ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ .

ಆಲ್ದೂರು   ಪೊಲೀಸ್ ಠಾಣೆ.

ದಿನಾಂಕ 11/06/2021 ರಂದು ನೆರಡಿ ಗ್ರಾಮದ ವಾಸಿಯಾದ  ರೇವಣ್ಣಗೌಡ  ಎಂಬುವವರು ತಮ್ಮ ದಿನಸಿ ಅಂಗಡಿಯ ಮುಂಭಾಗ  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು  ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ 90 ಎಂ.ಎಲ್.ನ  ವಿನ್ಡೊಸರ್ ಡಿಲಕ್ಸ್ ವಿಸ್ಕಿಯ 34 ಮದ್ಯದ ಪೌಚ್ಗಳಿದ್ದು, ಮದ್ಯದ ಅಂದಾಜು ಬೆಲೆ 1195/-ರೂ ಆಗಿದ್ದು ,ಆರೋಪಿತನಾದ ರೇವಣ್ಣಗೌಡನ ವಿರುದ್ದ ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ. ಲಿಂಗರಾಜು ಸಿ.ಎಂ.  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ 11/06/2021 ರಂದು ಲೋಕವಳ್ಳಿ ಗ್ರಾಮದ ಕೆಂಜಿಗೆ ರಸ್ತೆಯಲ್ಲಿರುವ ಸಪ್ತಗಿರಿ ಸ್ಟೋರ್ ಮುಂಭಾಗ ಶ್ರೀನಿವಾಸ ಬಿನ್ ಲೇಟ್ ನಾರಾಯಣಪ್ಪರವರು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು  ಆತನ ಬಳಿಯಿದ್ದ ರಟ್ಟಿನ ಬಾಕ್ಸ್ ಪರಿಶೀಲಿಸಲಾಗಿ ಒಟ್ಟು 4ಲೀಟರ್ 320 ಎಂ.ಎಲ್. ಮದ್ಯವಿದ್ದು, ಮದ್ಯದ ಅಂದಾಜು ಬೆಲೆ 2179/- ರೂ ಆಗಿದ್ದು ,ಆರೋಪಿತನಾದ ಶ್ರೀನಿವಾಸ ನ ವಿರುದ್ದ ಮೂಡಿಗೆರೆ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ. ರವಿ. ಜಿ.ಎ.  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಕೊವಿಡ್-19 ನಿಯಮ ಉಲ್ಲಂಘನೆ ಪ್ರಕರಣ

ಬಾಳೂರು   ಪೊಲೀಸ್ ಠಾಣೆ.

ದಿನಾಂಕ 11/06/2021 ರಂದು ಪಂಚಾಯ್ತಿ ಅಭಿವೃದ್ದಿ ಅಧಿಕಾರಿ, ಜಾವಳಿ ಗ್ರಾಮಪಂಚಾಯ್ತಿರವರು ನೀಡಿದ ದೂರಿನ ಸಾರಾಂಶವೇನೆಂದರೆ  ಮೇಗೂರು ಗ್ರಾಮದ ವಾಸಿಯಾದ ಸುಧಾಕರಗೌಡ ಬಿನ್ ರಾಮಪ್ಪಗೌಡ  ಮೇಗೂರು ಗ್ರಾಮದಲ್ಲಿ ಮೇಗೂರು ಹೋಂಸ್ಟೇ ನಡೆಸುತ್ತಿದ್ದು ,ಪ್ರಸ್ತುತ ಕರ್ನಾಟಕ ಸರ್ಕಾರವು ಕೊವಿಡ್-19 ಸಂಬಂಧ ಲಾಕ್ಡೌನ್ ಆದೇಶದ ಅನ್ವಯ  ಯಾವುದೇ ಹೋಂ ಸ್ಟೇ ಹಾಗೂ ರೆಸಾರ್ಟ್ ಗಳಿಗೆ ಯಾವುದೇ ಪ್ರವಾಸಿಗರನ್ನು ತೆಗೆದುಕೊಳ್ಳದಂತೆ ಆದೇಶ ಹೊರಡಿಸಿದ್ದರೂ ಸಹ ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿ ತಮ್ಮ ಹೋಂಸ್ಟೇಗಳ ಕೊಠಡಿಗಳಲ್ಲಿ 2-3 ದಿನಗಳಿಂದ ಪ್ರವಾಸಿಗರಿಗೆ ತಂಗಲು ಅವಕಾಶ ಮಾಡಿಕೊಟ್ಟಿದ್ದು ಸರ್ಕಾರವು ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿರುವ ಸುಧಾಕರಗೌಡರವರ  ವಿರುದ್ದ ಬಾಳೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಜೂಜಾಟ  ಪ್ರಕರಣ

ತರೀಕೆರೆ  ಪೊಲೀಸ್ ಠಾಣೆ

ದಿನಾಂಕ 11/06/2021 ರಂದು ತರೀಕೆರೆ ಟೌನ್  ಗಾಳಿಹಳ್ಳಿ  ಕ್ರಾಸ್ ಮುಂದೆ ಭದ್ರಾ ಚಾನಲ್ ಮೇಲ್ದಂಡೆಯ  ಪಕ್ಕದ ಖಾಲಿ ಜಾಗದಲ್ಲಿ ಸುಮಾರು 4-5 ಜನರು  ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ಗಾಳಿಹಳ್ಳಿ ಕ್ರಾಸ್ ಮುಂದೆ ಭದ್ರಾ ಚಾನಲ್ ಮೇಲ್ದಂಡೆಯ ಪಕ್ಕದ ಖಾಲಿ ಜಾಗದಲ್ಲಿ ಅಕ್ರಮವಾಗಿ ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ 4 ಜನ ಆರೋಪಿಗಳ ಮೇಲೆ ದಾಳಿ ಮಾಡಿದ್ದು ಅದರಲ್ಲಿ 3 ಜನರನ್ನು ವಶಕ್ಕೆ ಪಡೆದಿದ್ದು , ಒಬ್ಬ ಆಸಾಮಿಯು ಓಡಿಹೋಗಿರುತ್ತಾನೆ. ಆರೋಪಿತರುಗಳ ವಶದಲ್ಲಿದ್ದ ಒಂದು ಹಳದಿ ಬಣ್ಣದ ಪ್ಲಾಸ್ಟಿಕ್ ಚೀಲ,52 ಇಸ್ಪೀಟ್ ಎಲೆಗಳು ಹಾಗೂ 6050 /-ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತರುಗಳ ವಿರುದ್ದ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ .ಪಿ.ಐ .ರಾಘವೇಂದ್ರ ಎನ್.ಕೆ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಜೂಜಾಟ  ಪ್ರಕರಣ

ಸಿ.ಇ.ಎನ್. ಪೊಲೀಸ್ ಠಾಣೆ

ದಿನಾಂಕ 11/06/2021 ರಂದು ತರೀಕೆರೆಯ ಕುಂಟಿನಮಡು ಗ್ರಾಮದಲ್ಲಿರುವ ಸರ್ಕಾರಿ ಕಾಡಿನಲ್ಲಿ ಮರದ ಕೆಳಗೆ ಕೆಲವು  ಜನರು ಸೇರಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ಕುಂಟಿನಮಡು ಗ್ರಾಮದಲ್ಲಿರುವ ಸರ್ಕಾರಿ ಕಾಡಿನಲ್ಲಿ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ್ಲ 13 ಜನರನ್ನು ವಶಕ್ಕೆ ಪಡೆದಿದ್ದು, 3 ಜನ ಆಸಾಮಿಗಳು ಓಡಿಹೋಗಿರುತ್ತಾರೆ. ಆರೋಪಿತರುಗಳ ವಶದಲ್ಲಿದ್ದ ಒಂದು ಹಳದಿ ಬಣ್ಣದ ಪ್ಲಾಸ್ಟಿಕ್ ಟಾರ್ಪಲ್, 52 ಇಸ್ಪೀಟ್ ಎಲೆಗಳು, 15 ವಿವಿಧ ಕಂಪೆನಿಯ ಮೊಬೈಲ್ಗಳು, ವಿವಿಧ ಕಂಪೆನಿಯ 3 ಮೋಟಾರ್ ಬೈಕ್ಗಳು  ಹಾಗೂ 42,500/-ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತರುಗಳ ವಿರುದ್ದ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ  .ಪಿ.ಐ ರಕ್ಷಿತ್.ಎ.ಕೆ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ

ಅಕ್ರಮ ಜೂಜಾಟ ಹಾಗೂ ಕೊವಿಡ್-19 ನಿಯಮ ಉಲ್ಲಂಘನೆ ಪ್ರಕರಣ

ಅಜ್ಜಂಪುರ  ಪೊಲೀಸ್ ಠಾಣೆ

ದಿನಾಂಕ 11/06/2021 ರಂದು ಅಜ್ಜಂಪುರದ ರೈಲ್ವೇ ನಿಲ್ದಾಣದ ಪಕ್ಕದಲ್ಲಿರುವ ಜಾಲಿ ಮರದ ಕೆಳಗೆ ಕೆಲವು  ಜನರು ಸೇರಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ಅಜ್ಜಂಪುರದ ರೈಲ್ವೇ ನಿಲ್ದಾಣದ ಪಕ್ಕದಲ್ಲಿರುವ ಜಾಲಿ ಮರದ ಕೆಳಗೆ 5-6 ಜನರು ಸೇರಿಕೊಂಡು ಕರ್ನಾಟಕ ಸರ್ಕಾರವು ಕೊವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ 2 ಕ್ಕಿಂತ ಹೆಚ್ಚು ಜನರು ಒಂದು ಕಡೆ ಸೇರದಂತೆ ಆದೇಶಮಾಡಿದ್ದರೂ ಸಹ ಅಕ್ರಮವಾಗಿ ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ್ಲ 5 ಜನರನ್ನು ವಶಕ್ಕೆ ಪಡೆದಿದ್ದು, ಅದರಲ್ಲಿ ಒಬ್ಬ ಆಸಾಮಿಯು ಓಡಿಹೋಗಿರುತ್ತಾನೆ. ಆರೋಪಿತರುಗಳ ವಶದಲ್ಲಿದ್ದ ಒಂದು ಹಳದಿ ಬಣ್ಣದ ಚೀಲ, 52 ಇಸ್ಪೀಟ್ ಎಲೆಗಳು ಹಾಗೂ 9,320 /-ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತರುಗಳ ವಿರುದ್ದ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ  ಪಿ.ಎಸ್.ಐ.ತಿಪ್ಪೇಶ್.ಡಿ.ವಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ

 

 

ಇತ್ತೀಚಿನ ನವೀಕರಣ​ : 25-06-2021 06:40 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080