ಅಭಿಪ್ರಾಯ / ಸಲಹೆಗಳು

ಅಕ್ರಮ  ಗೋ ಮಾಂಸ ಸಾಗಾಣಿಕೆ ಹಾಗೂ  ಮಾರಾಟ ಪ್ರಕರಣ

ಜಯಪುರ ಪೊಲೀಸ್ ಠಾಣೆ .

ದಿನಾಂಕ:11 /07/2021 ರಂದು ಕೊಗ್ರೆ ಗ್ರಾಮದಿಂದ ಮುಂದೆ ಅಬ್ಬಕಲ್ಲುವಿನ ತಿರುವಿನಲ್ಲಿ ಯಾರೋ ಅಕ್ರಮವಾಗಿ ವದನದ ಮಾಂಸವನ್ನು ಮಾರಾಟ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ದಾಳಿ ಮಾಡಲಾಗಿ ಯಾರೋ ನಾಲ್ಕು ಜನರು ಟಾರು ರಸ್ತೆಯ ಮೇಲೆ ನಿಂತಿದ್ದು ರಸ್ತೆಯ ಮೇಲೆ ಬೈಕ್ ಹಾಗೂ ಪ್ಲಾಸ್ಟಿಕ್ ಪ್ಯಾಕೆಟ್ ಗಳು ಬಿದ್ದಿದ್ದು ಪಂಚರ ಸಮಕ್ಷಮ ಪರಶೀಲಿಸಲಾಗಿ  3 ಪ್ಲಾಸ್ಟಿಕ್ ಪ್ಯಾಕ್ ಗಳಲ್ಲಿ ದನದ ಮಾಂಸ ಹಾಗೂ  ಒಂದು ಪ್ಲಾಸ್ಟಿಕ್ ಚೀಲದಲ್ಲಿ 12 ಪ್ಯಾಕೆಟ್ಗಳಿದ್ದು ಪ್ರತಿ ಪ್ಯಾಕೆಟ್ ನಲ್ಲಿ ಒಂದು ಕೆ.ಜಿ.ಯಷ್ಟು ದನದ ಮಾಂಸವಿದ್ದು , ಬೈಕ್ ಪರಿಶೀಲಿಸಲಾಗಿ ಕೆ-18 ಇಜಿ-4062 ನಂಬರಿನ ಹಿರೋ ಹೊಂಡಾ ಕಂಪೆನಿಯ ಸ್ಪ್ಲೆಂಡರ್  ಬೈಕ್  ಅಗಿದ್ದು ,ಸದರಿ ಮಾಂಸವನ್ನು ಹಾಗೂ ಬೈಕ್ ನ್ನು ಅಮಾನತ್ತುಪಡಿಸಿಕೊಂಡಿರುತ್ತೆ. ಆರೋಪಿತರ ವಿರುದ್ದ ಜಯಪುರ ಪೊಲೀಸ್ ಠಾಣೆಯಲ್ಲಿ  ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ. ಜ್ಯೋತಿ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಮನುಷ್ಯ ಕಾಣೆ ಪ್ರಕರಣ .

ಕಡೂರು ಪೊಲೀಸ್ ಠಾಣೆ

ದಿನಾಂಕ 11-07-2021 ರಂದು ಕಡೂರು ಠಾಣಾ ಸರಹದ್ದಿನ ತುರುವನಹಳ್ಳಿ ಗ್ರಾಮದ ವಾಸಿ ಭೈರೇಶ ರವರು ನೀಡಿದ ದೂರಿನಲ್ಲಿ ಪಿರ್ಯಾಧಿಯವರ  ತಂಗಿಯಾದ ಭಾರತಿ, 46 ವರ್ಷ ಇವರು ಅವಿವಾಹಿತೆಯಾಗಿದ್ದು , ಎದುರು  ಮನೆಯಲ್ಲಿನ ತನ್ನ ಅಜ್ಜಿಯೊಂದಿಗೆ ವಾಸವಾಗಿದ್ದು ಊಟ ತಿಂಡಿಯನ್ನು ಪಿರ್ಯಾಧುದಾರರೇ ನೀಡುತ್ತಿದ್ದು ,ದಿನಾಂಕ  07-07-2021 ರಂದು ಸಂಜೆ ಭಾರತಿಯವರು ಮನೆಯಲ್ಲಿ ಕಾಣದೆ ಇದ್ದುದ್ದರಿಂದ  ಸ್ನೇಹಿತರು ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಲಾಗಿ  ಇದುವರೆಗೂ ಪತ್ತೆಯಾಗಿರುವುದಿಲ್ಲ  .ಆದ್ದರಿಂದ ಕಾಣೆಯಾಗಿರುವ ನನ್ನ ತಂಗಿಯನ್ನು   ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ  ಮೇರೆಗೆ ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 12-07-2021 06:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080