ಅಭಿಪ್ರಾಯ / ಸಲಹೆಗಳು

ಕಳ್ಳತನ  ಪ್ರಕರಣ

ಕಡೂರು ಪೊಲೀಸ್ ಠಾಣೆ.

 ದಿನಾಂಕ:12-01-2022 ರಂದು ಕಡೂರು ಠಾಣಾ ಸರಹದ್ದಿನ ಕಡೂರು ಟೌನ್ ವಾಸಿ ಎಂ.ವಿ. ಕವಿರಾಜ್  ರವರು ನೀಡಿದ ದೂರಿನಲ್ಲಿ ದಿನಾಂಕ 10-01-2022 ರಂದು ಕುಟುಂಬ ಸಮೇತ ಮನೆಗೆ ಬೀಗ ಹಾಕಿಕೊಂಡು  ಮಂತ್ರಾಲಯಕ್ಕೆ ಹೋಗಿದ್ದು, ಈ ದಿನ ವಾಪಾಸ್ಸು ಬಂದು  ನೋಡಿದಾಗ ಯಾರೋ ಕಳ್ಳರು ಮನೆಯ ಮುಂಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು  ಮನೆಯ ವಾಲ್ ಡ್ರುಪ್ ನಲ್ಲಿ ಇಟ್ಟಿದ್ದ ಚಿನ್ನದ 118 ಗ್ರಾಂ ತೂಕದ ವಿವಿಧ ಅಭರಣಗಳನ್ನು ಮತ್ತು 1,18,000/- ರೂ ನಗದು ಹಣವನ್ನು ಒಟ್ಟು  ಸೇರಿ 6,11,000/- ರೂ ಗಳ ಗಳ ಸ್ವತ್ತನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ವಸ್ತುಗಳನ್ನು ಮತ್ತು ನಗದನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ತರೀಕರೆ ಪೊಲೀಸ್ ಠಾಣೆ.

 ದಿನಾಂಕ;12-01-2022 ರಂದು ತರೀಕೆರೆ ಪಟ್ಟಣದ ವಾಸಿ ಪಿರ್ಯಾದಿ ಧನಂಜಯಮೂರ್ತಿ ರವರು ನೀಡಿದ ದೂರಿನಲ್ಲಿ ಪಿರ್ಯಾದಿಯವರ ದಿನಾಂಕ 10-01-2022 ರಂದು ಸ್ವಂತ ಊರಿಗೆ ಮನೆಯನ್ನು ಬೀಗ ಹಾಕಿಕೊಂಡು ಹೋಗಿದ್ದು ದಿನಾಂಕ 12-01-2022 ರಂಧು ವಾಪಸ್ಸು ಬಂದು  ನೋಡಿದಾಗ ಯಾರೋ ಕಳ್ಳರು ಮನೆಯ ಒಂದನೇ ಅಂತಸ್ತಿನ ಮನೆಯ ಹಿಂಭಾಗದ ಡೋರಿನ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು  ಮನೆಯನಲ್ಲಿ ಇಟ್ಟಿದ್ದ ಗಾಡ್ರೇಜ್ ಬೀರುವಿನಿಂದ 272 ಗ್ರಾಂ ತೂಕದ ಚಿನ್ನದ ಅಭರಣಗಳನ್ನು ಮತ್ತು 810 ಗ್ರಾಂ ತೂಕದ ವಿವಿಧ ಬೆಳ್ಳಿಯ ವಸ್ತುಗಳನ್ನು ಅಂದಾಜು 11,20,400/-ರೂ ಗಳ ಸ್ವತ್ತನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಅಭರಣಗಳನ್ನು ಮತ್ತು ವಸ್ತುಗಳನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

 ತರೀಕೆರೆ ಪೊಲೀಸ್ ಠಾಣೆ.

ದಿನಾಂಕ 12-01-2022 ರಂದು ತರೀಕೆರೆ ಠಾಣಾ ಸರಹದ್ದಿನ ಎಚ್ ರಂಗಾಪುರ ವಾಸಿ ಪಿರ್ಯಾದಿ ಗುರುಮೂರ್ತಿ ರವರು ನೀಡಿದ ದೂರಿನಲ್ಲಿ ಈ ದಿನ ಬೆಳಿಗ್ಗೆ ಪಿರ್ಯಾದಿ ಎಂದಿನಂತೆ ಎಂ.ಸಿ. ಹಳ್ಳಿ ಗ್ರಾಮದ ಹೈಸ್ಕೂಲ್ ಗ್ರೌಂಡಿಗೆ  ಜಾಗಿಂಗ್ ಹೋಗಿದ್ದು ಆ ಸಮಯದಲ್ಲಿ ಹೈಸ್ಕೂಲ್ ಮುಂಭಾಗ ಎನ್. ಹೆಚ್. 206 ರಸ್ತೆಯಲ್ಲಿ ಒಬ್ಬ ವ್ಯಕ್ತಿ ರಸ್ತೆ ಅಪಘಾತದಿಂದ  ರಸ್ತೆಯ ಮೇಲೆ ಬಿದಿದ್ದು , ಆ ವ್ಯಕ್ತಿಯು ಅಪರಿಚಿತ ವ್ಯಕ್ತಿಯಾಗಿದ್ದು ಸದರಿ ವ್ಯಕ್ತಿಗೆ ಕೈಕಾಲುಗಳಿಗೆ ಮತ್ತು ತಲೆಗೆ ಪೆಟ್ಟಾಗಿ ರಕ್ತಗಾಯವಾಗಿದ್ದು, ಆತನನ್ನು ಕೂಡಲೇ ಅಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದು ಅತನು ಅಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಗಿ ತಿಳಿಸಿದ್ದು,  ಯಾವುದೋ ವಾಹನ ರಾತ್ರಿ ವೇಳೆಯಲ್ಲಿ  ಅಪಘಾತ ಉಂಟು ಮಾಡಿದ್ದರಿಂದ ಅಪರಿಚಿತ ವ್ಯಕ್ತಿ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 12-01-2022 08:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080