ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ:12/02/2022 ರಂದು ಪಿರ್ಯಾದಿ ಶರತ್ ಹೆಚ್.ಇ. ರವರು ನೀಡಿದ ದೂರಿನಲ್ಲಿ ದಿನಾಂಕ;11/02/2022  ರಂದು ಪಿರ್ಯಾದಿ ಅಂತರಘಟ್ಟಮ್ಮ ಜಾತ್ರೆಗೆ ಅಜ್ಜಂಫುರಕ್ಕೆ ಬಂದಿದ್ದು  ಅಬ್ಬಿನ ಹೊಳಲು ಗೆ ಹೋಗಲು ತನ್ನ ಚಿಕ್ಕಪ್ಪ ಜಕಣಾಚರಿ ಇವರ ಬೈಕಿನಲ್ಲಿ ಕೆಎ-18-ಇಸಿ-9281 ರಲ್ಲಿ ಬೈಕಿನಲ್ಲಿ ಗೌರಪುರದ ದಾಣಿ ಹೋಗುವಾಗ ಜಕಣಾಚಾರಿರವರು ಬೈಕ್ನ್ ಜೋರಾಗಿ ಚಲಾಯಿಸಿಕೊಂಡು ಹೋಗಿ ಎತ್ತಿನ ಗಾಡಿಯ ಹಿಂಬದಿಗೆ ಡಿಕ್ಕಿ ಹೊಡೆದು  ಜಕಣಾಚಾರಿ ರವರಿಗೆ ತೀವ್ರ ಪೆಟ್ಟಾಗಿದ್ದು ಅಜ್ಜಂಪುರಕ್ಕೆ ಚಿಕಿತ್ಸೆಗೆ ಸೇರಿಸಿದ್ದು ನಂತರ ಶಿವಮೊಗ್ಗ ಮ್ಯಾಕ್ಸ್ ಅಸ್ಪತ್ರೆಗೆ ಸೇರಿಸಿದ್ದು , ದಿನಾಂಕ 12/02/2022 ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಮುಂದಿನ ಕ್ರಮದ ಬಗ್ಗೆ ನೀಡಿದ ದೂರಿನ ಮೇರೆಗೆ ಅಜ್ಜಂಪುರ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ:11/02/2022 ರಂದು 22.00 ಗಂಟೆಗೆ  ತರೀಕೆರೆ ಠಾಣಾ ಸರಹದ್ದಿನ ಎ. ರಾಮನಹಳ್ಳಿ ವಾಸಿ ಶೇಖರಪ್ಪ  ರವರು ನೀಡಿದ ದೂರಿನಲ್ಲಿ ದಿನಾಂಕ;11/02/2022  ರಂದು ಪಿರ್ಯಾದಿ ಮಗ ರಾಜಶೇಖರನು ರಾಜೇಂದ್ರ ರವರ ಬಬ್ತು ಕೆಎ-16- ಟಿಬಿ-8619 ರ ನಂಬರಿನ ಟ್ಯಾಕ್ಟರ್ ನ್ನು  ಎಂ.ಸಿ. ಹಳ್ಳಿ ಚೌಡಮ್ಮ ದೇವಸ್ಥಾನದ ಬಳಿ ಒಳ ಹೋಗುವ ಎರೆಕಟ್ಟೆ ಮೋರಿ ಹತ್ತಿರ ಟ್ಯಾಕ್ಟರ್ ನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ರಾಜಶೇಖರನಿಗೆ ಮುಖ ಮತ್ತು ತಲೆಗೆ ಬಲವದ ಪೆಟ್ಟು ಬಿದ್ದು  ಸ್ಥಳದಲ್ಲೇ ಮೃತಪಟ್ಟಿದ್ದು  ಮುಂದಿನ ಕ್ರಮದ ಬಗ್ಗೆ ನೀಡಿದ ದೂರಿನ ಮೇರೆಗೆ ತರೀಕೆರೆ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ಪಂಚನಹಳ್ಳಿ ಪೊಲೀಸ್ ಠಾಣೆ.

ದಿನಾಂಕ:12-02-2022 ರಂದು ಪಂಚನಹಳ್ಳಿ ಠಾಣಾ ಸರಹದ್ದಿನ ಉಪ್ಪಿನಹಳ್ಳಿ ಗ್ರಾಮದಿಂದ ನಿಡುವಳ್ಳಿ ಬರುವ ರಸ್ತೆಯಲ್ಲಿ ಮಂಜಾನಾಯ್ಕ ಬಿನ್ ಶಂಕರನಾಯ್ಕ ಎಂಬುವನು ಅಕ್ರಮವಾಗಿ ಮದ್ಯವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದು ಅರೋಪಿಯನ್ನು ವಶಕ್ಕೆ ಪಡೆದು ಆರೋಪಿ ವಶದಲ್ಲಿ 90 ಎಂ.ಎಲ್. ನ 72 ಟೆಟ್ರಾಪ್ಯಾಕ್  ಮದ್ಯ ಅಂದಾಜು ಬೆಲೆ 2530/- ರೂ ಅಗಿದ್ದು ಮಧ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು  ಪಂಚನಹಳ್ಳಿ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಜಿ.ಕೆ. ಪವಿತ್ರ  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಮಟ್ಕಾ ಜೂಜಾಟ ಪ್ರಕರಣ

ಅಲ್ದೂರು  ಪೊಲೀಸ್ ಠಾಣೆ.

ದಿನಾಂಕ:12-02-2022 ರಂದು  ಅಲ್ದೂರು ಠಾಣಾ ಸರಹದ್ದಿನ ಪೂರ್ಣ ಪ್ರಜ್ಞಾ ಶಾಲೆಗೆ ಹೋಗುವ ಕಠಾರದಹಳ್ಳಿ ಗೆ ಹೋಗುವ ರಸ್ತೆಯ ತಿರುವಿನಲ್ಲಿ  ಜೆರಾಲ್ಡ್ ರೋಡಿಗ್ರಾಸ್ ಬಸ್ಕಲ್ ವಾಸಿ ಈತನು ಅಕ್ರಮವಾಗಿ ಮಟ್ಕಾ ಜೂಜಾಟ ಆಡಿಸುತ್ತಿದ್ದು ಅರೋಪಿಯನ್ನು ವಶಕ್ಕೆ ಪಡೆದು ಆರೋಪಿ ವಶದಲ್ಲಿ 850/- ರೂ ನಗದು , ಮಟ್ಕಾ ಚೀಟಿ ಮತ್ತು ಒಂದು ಬಾಲ್ ಪೆನ್ನು ಅನ್ನು ಅಮಾನತ್ತುಪಡಿಸಿಕೊಂಡು ಬಂದು  ಅಲ್ದೂರು  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶಿವರುದ್ರಮ್ಮ ಎಸ್.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 12-02-2022 07:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080