ಅಭಿಪ್ರಾಯ / ಸಲಹೆಗಳು

ಅಕ್ರಮ ಗಾಂಜಾ ಮಾರಾಟ ಪ್ರಕರಣ

ಸಿ.ಇ.ಎನ್. ಪೊಲೀಸ್ ಠಾಣೆ.

ದಿನಾಂಕ; 12/04/2022 ರಂದು ಚಿಕ್ಕಮಗಳೂರು ನಗರದ ಕಲ್ಲುದೊಡ್ಡಿ ಗ್ರಾಮದ ಇಂದಿರಾಗಾಂಧಿ ಬಡಾವಣೆ ಸಮೀಪ ಇರುವ ರಾಮೇಶ್ವರ ಕೆರೆ ಏರಿಯ ಮೇಲೆ ಸರ್ಕಾರಿ ಖಾಲಿ ಜಾಗದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ 1] ಶಿವು ಬಿನ್ ಲೇಟ್ ದಶರಥ, ಇಂದಿರಾಗಾಂದಿ ಬಡಾವಣೆ, ಕಲ್ಲುದೊಡ್ಡಿ ವಾಸಿ, 2] ಮಹಮ್ಮದ್ ಉಸ್ಮಾನ್ ಘನಿ ಬಿನ್ ಲೇಟ್ ಮಹಮ್ಮದ್ ಮುಷ್ರಪ್ ಉಸೇನ್, ಇಂದಿರಾಗಾಂದಿ ಬಡಾವಣೆ, ಕಲ್ಲುದೊಡ್ಡಿ ವಾಸಿ, ಇವರನ್ನು ವಶಕ್ಕೆ ಪಡೆದು ಕೊಂಡಿದ್ದು, ಇರ್ಫಾನ್ @ ಡಿಚ್ಚಿ ಇರ್ಫಾನ್ , ಮಾಡಲ್ ಸ್ಕೂಲ್ ಹತ್ತಿರ, ಉಪ್ಪಳ್ಳಿ ಚಿಕ್ಕಮಗಳೂರು ಈತನು ಓಡಿ ಹೋಗಿರುತ್ತಾನೆ. ಅರೋಪಿತರು ಅಕ್ರಮವಾಗಿ ಹೊಂದಿದ್ದ 255 ಗ್ರಾಂ ತೂಕದ ಒಣ ಗಾಂಜಾ ಅಂದಾಜು ಬೆಲೆ 5000/- ರೂ ಅಗಿದ್ದು, ಗಾಂಜಾದ ಮಾರಾಟದಿಂದ  ಸಂಗ್ರಹಿಸಿದ 100/- ರೂ   ವನ್ನು ಅಮಾನತ್ತುಪಡಿಸಿಕೊಂಡು ಬಂದು ಸಿ,ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಸಿ.ಇ.ಎನ್. ಠಾಣೆಯ ಪಿ.ಐ. ಮುತ್ತುರಾಜ್. ಹೆಚ್.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಬಂದೂಕು ಪ್ರಕರಣ

ಎನ್.ಆರ್. ಪುರ ಪೊಲೀಸ್ ಠಾಣೆ.

ದಿನಾಂಕ; 12/04/2022 ರಂದು ಎನ್.ಆರ್. ಪುರ ಠಾಣಾ ಸರಹದ್ದಿನ ಮಲ್ಲಂದೂರು ಗ್ರಾಮದ ಹಂಪಿನಮನೆ ವಾಸಿ ಸುಂದರೇಶ ಎಂ.ಕೆ.  ಬಿನ್ ಕೃಷ್ಣಪ್ಪ ಎಂ.ಈ. ಎಂಬುವರು ತಮ್ಮ ಮನೆಯ ಹಿಂಭಾಗದ ಶೆಡ್ನಲ್ಲಿ ಯಾವುದೇ ಪರವಾನಗಿ ಇಲ್ಲದೇ  ಅಕ್ರಮವಾಗಿ ಆರೋಪಿತನು ಎಸ್.ಬಿ.ಎಂ.ಎಲ್. ಬಂದೂಕನ್ನು ಹೊಂದಿದ್ದು, ಎಸ್.ಬಿ.ಎಂ.ಎಲ್. ಬಂದೂಕಿಗೆ ಗುಂಡು ಹಾರಿಸಲು ಬಳಸುವ ಪರಿಕರಗಳಾದ ಮಸಿ (ಗನ್ ಪೌಡರ್) 25 ಗ್ರಾಂ, ಮತ್ತು ಬಳಸಿದ ಮಸಿ 100 ಗ್ರಾಂ ಹಾಗೂ ಇತರ ಪರಿಕರಗಳನ್ನು ಅಮಾನತ್ತುಪಡಿಸಿಕೊಂಡು ಬಂದು ಎನ್.ಆರ್. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ದೀಲಿಪ್ ಕುಮಾರ್ ವಿ.ಟಿ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ.

ಬೀರೂರು ಪೊಲೀಸ್ ಠಾಣೆ.

ದಿನಾಂಕ:12/04/2022 ರಂದು ಪಿರ್ಯಾದಿ ರಮೇಶ ಬಿನ್ ಮೈಲಾರಪ್ಪ , ವಾಸ ಹಳೇಪೇಟೆ ಬೀರೂರು, ಇವರು ನೀಡಿದ ದೂರಿನಲ್ಲಿ ಪಿರ್ಯಾದಿ ಮಗಳು ಸಹನಾ ಇವಳು ಬೀರೂರು ಕೆ.ಎಲ್.ಕೆ. ಕಾಲೇಜಿನಲ್ಲಿ ದ್ವೀತಿಯ ಪಿ.ಯು.ಸಿ. ವಿದ್ಯಾಬ್ಯಾಸ ಮಾಡುತ್ತಿದ್ದು,   ದಿನಾಂಕ 10/04/2022 ರಂದು  ಮನೆಯಿಂದ ದೇವಸ್ಥಾನಕ್ಕೆ  ಹೋದವಳು ವಾಪಾಸ್ಸು ಮನೆಗೆ ಬಾರದೇ  ಕಾಣೆಯಾಗಿದ್ದು, ಈ ವರೆಗೂ ಎಲ್ಲಾ ಕಡೆಯಲ್ಲಿಯೂ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ಸಹನಾ ಬಿ.ಆರ್,  19 ವರ್ಷ, 5 ಅಡಿ ಎತ್ತರ, ನೀಳಮುಖ, ಗೋದಿ ಮೈ ಬಣ್ಣ, ಸಾದಾರಣ ಮೈಕಟ್ಟು, ಕನ್ನಡ ಬಾಷೆ ಮಾತನಾಡುತ್ತಾಳೆ. ಕಾಣೆಯಾಗಿರುವ ತನ್ನ ಮಗಳನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

 

 

 

ಇತ್ತೀಚಿನ ನವೀಕರಣ​ : 12-04-2022 07:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080