ಅಭಿಪ್ರಾಯ / ಸಲಹೆಗಳು

ಮರಳು ಕಳ್ಳತನ  ಪ್ರಕರಣ.

ಕೊಪ್ಪ ಪೊಲೀಸ್ ಠಾಣೆ.

ದಿನಾಂಕ:12-05-2022 ರಂದು ಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ನಾರ್ವೆಯ ನರಸೀಪುರ ತುಂಗಾನದಿಯ ದಡದಲ್ಲಿ  ಕೆಎ-18-ಬಿ-8926 ರ ಬುಲೆರೋ ಕಂಪನಿಯ ಬಿಳೀ ಬಣ್ಣದ ಪಿಕ್-ಅಪ್ ವಾಹನದಲ್ಲಿ ಆರೋಫಿತರಾದ ಕಾರ್ತಿಕ್ ಭಟ್ ಬಿನ್ ಕೃಷ್ಣಸ್ವಾಮಿ, ವಾಸ ನರಸೀಪುರ ಮತ್ತು ಪ್ರವೀಣ್ ಬಿನ್ ದೇವರಾಜಪ್ಪ ನೇರಳಕಟ್ಟೆ, ಹೊಳಲಕೆರೆ, ಚಿತ್ರದುರ್ಗ, ಇವರು ತುಂಗಾನದಿಯ ದಡದಿಂದ ಕಳ್ಳತನ ಮಾಡಿಕೊಂಡು ಪಿಕ್ ಅಪ್ ವಾಹನಕ್ಕೆ ಮರಳನ್ನು ತುಂಬಿಸಿಕೊಳ್ಳುತ್ತಿದ್ದು, ಸರ್ಕಾರದ ಯಾವುದೇ ಪರವಾನಗಿಯನ್ನು ಪಡೆಯದೆ ಮರಳನ್ನು  ಪಿಕ್ ವಾಹನಕ್ಕೆ ತುಂಬಿಸಿದ್ದು ಸುಮಾರು ಒಂದುವರೆ ಟನ್ ನಷ್ಟು ಸುಮಾರು 3000/- ರೂ ಬೆಲೆಯ ಮರಳನ್ನು ತೆಗೆದಿದ್ದು ಅರೋಫಿತರನ್ನು ವಶಕ್ಕೆ ಪಡೆದು ಮರಳು ಸಮೇತ ಪಿಕ್ ಅಪ್ ವಾಹನವನ್ನು ಅಮಾನತ್ತುಪಡಿಸಿಕೊಂಡು ಬಂದು ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಕೊಪ್ಪ ಪಿ.ಎಸ್.ಐ. ಶ್ರೀನಾಥ ರೆಡ್ಡಿ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಕಳ್ಳತನ  ಪ್ರಕರಣ.

ಲಕ್ಕವಳ್ಳಿ ಪೊಲೀಸ್ ಠಾಣೆ.

ದಿನಾಂಕ:11-05-2022 ರಂದು ಲಕ್ಕವಳ್ಳಿ ಪೊಲೀಸ್ ಠಾಣಾ ಸರಹದ್ದಿನ ಗೋಪಾಳ ಹುರುಳಿಬೋರೆ ಗ್ರಾಮದಲ್ಲಿ ಪಿರ್ಯಾದಿ ನಾರಾಯಣ ಪಿ. ಬಿನ್ ಪರಮೇಶ್ವರಪ್ಪ ರವರು ದಿನಾಂಕ;07/05/2022 ರಂದು ತಮ್ಮ ಮನೆಯನ್ನು ಬೀಗ ಹಾಖಿಕೊಂಡು ಬೆಂಗಳೂರಿಗೆ ಹೋಗಿದ್ದು, ಪಿರ್ಯಾದಿಯು ದಿನಾಂಕ 11/05/2022 ರಂದು ಮನೆಯನ್ನು ನೋಡಲಾಗಿ  ಯಾರೋ ಕಳ್ಳರು ಮನೆಯ ಮುಂಬಾಗಿಲಿನ ಇಂಟರ್ ಲಾಕ್ ಮತ್ತು ಬೀಗವನ್ನು ಯಾವುದೋ ಆಯುಧದಿಂದ ಮೀಟಿ ಮುರಿದ್ದು ಮನೆಯ ಬಾಗಿಲು ತೆರೆದಿದ್ದು  ಮನೆಯ ಒಳಗಡೆ ಬೀರುವಿನಲ್ಲಿ ಇಟ್ಟಿದ್ದ 48,000/- ರೂ ನಗದು ಹಣ ಮತ್ತು 28 ಗ್ರಾಂ ತೂಕದ ಅಂದಾಜು ಬೆಲೆ 1,15,000/-ರೂ ಚಿನ್ನದ ವಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅದ್ದರಿಂದ ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ನಗದು ಹಣ ಮತ್ತು ಚಿನ್ನದ ವಡವೆಗಳನ್ನು  ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಲಕ್ಕವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 12-05-2022 07:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080