ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ ಪ್ರಕರಣ

ಬಾಳೂರು ಪೊಲೀಸ್ ಠಾಣೆ.

ದಿನಾಂಕ;12/06/2022 ರಂದು ಪಿರ್ಯಾದಿ ಪ್ರಸನ್ನ ಬಿನ್ ರಾಮೇಗೌಡ, ಬಲಿಗೆ, ಬಾಳೂರು ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಮಗ ಪ್ರದ್ಯುಮ್ನ ಇವನು ದಿನಾಂಕ;11/06/2022 ರಂದು ಮನೆಯಿಂದ ಹೋದವನು, ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದು, ಈವರೆಗೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ತನ್ನ ಮಗ ಪ್ರದ್ಯುಮ್ನ ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕೊಪ್ಪ ಪೊಲೀಸ್ ಠಾಣೆ.

ದಿನಾಂಕ;12/06/2022 ರಂದು ಪಿರ್ಯಾದಿ ಶ್ರೀಮತಿ ಸರೋಜಿನನಿ ಕೋಂ ಅಚ್ಚುತ, ಕಲ್ಕೆರೆ, ತುಳುವಿನಕೊಪ್ಪ, ಕೊಪ್ಪ ತಾಲ್ಲೋಕು ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಗಂಡ ಗಣೇಶ ಇವನು ದಿನಾಂಕ;10/06/2022 ರಂದು ಮನೆಯಿಂದ ಉಡುಪಿ ಜಿಲ್ಲೆ ಶಂಕರಪುರಕ್ಕೆ ಹೋಗುತ್ತೇನೆ ಎಂದು ಹೋದವನು, ಮನೆಗೆ ಹೋಗದೆ ಕಾಣೆಯಾಗಿದ್ದು, ಈವರೆಗೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ಅಚ್ಚುತ ಬಿನ್ ಶ್ರೀನಿವಾಸ ಆಚಾರಿ, 44 ವರ್ಷ, 5.3 ಅಡಿ ಎತ್ತರ, ಗೋದಿ ಮೈ ಬಣ್ಣ, ಮಾಸಲು ಬಣ್ಣದ ಪ್ಯಾಂಟ್, ಗುಲಾಬಿ ಕಲರ್ ತುಂಬು ತೋಳಿನ ಶರಟು  ಧರಿಸಿರುತ್ತಾಳೆ ಕಾಣೆಯಾಗಿರುವ ತನ್ನ ಗಂಡ ಗಣೇಶ ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಗೋ ಸಾಗಾಣೀಕೆ ಪ್ರಕರಣ.

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ:12-06-2022 ರಂದು ಪಿರ್ಯಾದಿ ಮಂಜುನಾಥ ಬಿನ್ ಲೇಟ್ ರಾಮಚಂದ್ರ ರವರು ನೀಡಿದ ದೂರಿನಲ್ಲಿ ದಿನಾಂಕ;12-06-2022 ರಂದು ತರೀಕೆರೆ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಬಳಿ ನಿಂತಿದ್ದಾಗ ಬೀರೂರು ರಸ್ತೆ ಕಡೆಯಿಂದ ಭದ್ರಾವತಿ ಕಡೆಗೆ ಕೆಎ-66-2569 ರ ವಾಹನದಲ್ಲಿ ದನಕರುಗಳನ್ನು ಸಾಗಿಸುತ್ತಿದ್ದು, ವಾಹನದಲ್ಲಿ 6 ಕರು, 3 ಎಮ್ಮೆ, 1 ಹಸು ಇದ್ದು, ಸದರಿ ಜಾನುವಾರುಗಳನ್ನು ಯಾವುದೇ ಪರವಾನಗಿ ಇಲ್ಲದೆ ಭದ್ರಾವತಿ ನಗರದ ಕಸಾಯಿಖಾನೆಗಳಿಗೆ ಸಾಗಿಸುತ್ತಿದ್ದು, ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಒಂದರ ಮೇಲೊಂದರಂತೆ ತುಂಬಿದ್ದು, ಚಾಲಕ ಕೃಷ್ಣ ಬಿನ್ ಲಕ್ಕಪ್ಪ, ಗೋಪಾಲ ಕಾಲೋನಿ, ಲಕ್ಕವಳ್ಳಿ ವಾಸಿಯಾಗಿದು,್ದ ಜಾನುವಾರುಗಳನ್ನು ಜಗದೀಶ ಈ ತನು ಮಾರಾಟ ಮಾಡಿದ್ದು, ಇವರ ಮೇಲೆ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ವಾಹನವನ್ನು, ಜಾನುವಾರುಗಳನ್ನು ಮತ್ತು ಚಾಲಕನನ್ನು ವಶಕ್ಕೆ ಪಡೆದು ಆರೋಪಿತರ ವಿರುದ್ದ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಗೋ ಮಾಂಸ ಮಾರಾಟ ಪ್ರಕರಣ.

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ:12-06-2022 ರಂದು ಪಿರ್ಯಾದಿ ಮಂಜುನಾಥ ಬಿನ್ ಲೇಟ್ ರಾಮಚಂದ್ರ ರವರು ನೀಡಿದ ದೂರಿನಲ್ಲಿ ದಿನಾಂಕ;12-06-2022 ರಂದು 10-30 ಗಂಟೆಯಲ್ಲಿ ತರೀಕೆರೆ ನಗರದ ಕೋಡಿಕ್ಯಾಂಪ್ ನಲ್ಲಿ ಅಕ್ರಮ ಕಸಾಯಿಖಾನೆಗೆ ಹೋಗಿದ್ದು, ಅಕ್ರಮ ಕಸಾಯಿಖಾನೆ ಮಳಿಗೆಯಲ್ಲಿ ಜಾನುವಾರುಗಳ ಮಾಂಸವನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಅಕ್ರಮ ಕಸಾಯಿಖಾನೆ ಮಾಲೀಕ ಜಿಲಾನಿ ಆತನ ತಮ್ಮ ಸಲ್ಮಾನ್ ತಂದೆ ನಯಾಜ್ ಅಹಮ್ಮದ್ ಪಾಷ  ಯಾವುದೇ ಪರವಾನಗಿ ಇಲ್ಲದೆ ಕಸಾಯಿಖಾನೆಯಲ್ಲಿ ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾರಾಟ ಮಾಡುತ್ತಿದ್ದು, ಅಕ್ರಮವಾಗಿ ಜಾನುವಾರು ಕಡಿಯಲು ತಂದಿಟ್ಟಿದ್ದ ಒಂದು ಜಾನುವಾರುವನ್ನು ರಕ್ಷಿಸಿರುವುದಾಗಿ, ಅಕ್ರಮ ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾರಾಟ ಮಾಡುತ್ತಿರುವ ಅರೋಪಿಗಳ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಆರೋಪಿತರ ವಿರುದ್ದ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಅಕ್ರಮ ಗಾಂಜಾ ಸೇವನೆ ಪ್ರಕರಣ

ಕೊಪ್ಪ  ಪೊಲೀಸ್ ಠಾಣೆ.

ದಿನಾಂಕ;11/06/2022 ರಂದು ಕೊಪ್ಪ ಠಾಣಾ ಸರಹದ್ದಿನ ಹರಂದೂರು ಕುವೆಂಪುನಗರದ ಮೂರಾರ್ಜಿ ಶಾಲೆಯ ಹತ್ತಿರದ ರಸ್ತೆಯಲ್ಲಿ  ರಾಮಚಂದ್ರ  ಬಿನ್ ಶಿವಮೂರ್ತಿ ಹೆಚ್.ಹೆಚ್. ವಾಸ ಕುವೆಂಪು ನಗರ ಹರಂದೂರು ಇವರು ಗಾಂಜಾ ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಅಸಾಮಿಗಳನ್ನು ವಶಕ್ಕೆ ಪಡೆದು ಸದರಿ ಅಸಾಮಿ ಗಾಂಜಾ ಸೇವನೆ ಮಾಡಿದ ಬಗ್ಗೆ ವೈದ್ಯಕೀಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದ್ದು, ಅರೋಫಿತರ ವಿರುದ್ದ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಕೊಪ್ಪ ಠಾಣಾ ಪಿಎಸ್ಐ ಶ್ರೀನಾಥ ರೆಡ್ಡಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಬೀರೂರು ಪೊಲೀಸ್ ಠಾಣೆ.

ದಿನಾಂಕ;11/06/2022 ರಂದು ಪಿರ್ಯಾದಿ ಮಂಜುನಾಥ ಬಿ.ಕೆ. ಬಿನ್ ಕೆಂಚಪ್ಪ ಬಳ್ಳಿಗನೂರು ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಅಣ್ಣನ ಮಗಳು ವಿನುತಾ ಬಿ.ಆರ್.  ಇವಳು  ದಿನಾಂಕ; 10/06/2022 ರಂದು ಕಾಲೇಜಿಗೆ ಹೋಗಿ ಬರುತ್ತೇನೆಂದು ಹೋದವಳು ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದು, ಈವರೆಗೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ವಿನುತಾ ಬಿ.ಆರ್. 19 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕೋಲುಮುಖ, ಸಾದಾರಣ ಮೈಕಟ್ಟು,  ಬಿಸ್ಕೇಟ್ ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಕಾಣೆಯಾಗಿರುವ ತನ್ನ ಅಣ್ಣನ ಮಗಳು ವಿನುತಾ ಳನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಬಾಳೆಹೊನ್ನೂರು ಪೊಲೀಸ್ ಠಾಣೆ.

ದಿನಾಂಕ;11/06/2022 ರಂದು ಪಿರ್ಯಾದಿ ಅಮ್ಮಣ್ಣಿ ಕೊಂ ರಾಜು ಮುಕ್ಕುಡಿ, ಉಡುಪಿ ಜಿಲ್ಲೆ ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ತಮ್ಮ ರಮೇಶ ಇವನು ನರಸಿಂಹರಾಜಪುರ ತಾಲ್ಲೋಕು ಬಾಳೆಹೊನ್ನೂರು ಹೋಬಳಿ, ಕರ್ಕೆಶ್ವರ ಗ್ರಾಮದ ಬಾಳೆಹಿತ್ತು ವಾಸಿ ಶಶಿಕಲಾ ಇವಳೊಂದಿಗೆ ವಿವಾಹವಾಗಿದ್ದು, ದಿನಾಂಕ; 31/05/2022 ಕರ್ಕೆಶ್ವರಕ್ಕೆ ಹೋದವನು, ದಿನಾಂಕ;08/06/2022 ರಂದು ಕರ್ಕೆಶ್ವರದ ಮನೆಯಿಂದ ಹೋದವನು, ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದು, ಈವರೆಗೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ತನ್ನ ತಮ್ಮ ರಮೇಶನನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

 

 

ಇತ್ತೀಚಿನ ನವೀಕರಣ​ : 12-06-2022 07:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080