ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಅಜ್ಜಂಫುರ ಪೊಲೀಸ್ ಠಾಣೆ

ದಿನಾಂಕ:12/09/2021 ರಂದು  ಅಜ್ಜಂಪುರ ಪಟ್ಟಣ ಕೋಟೆ ರಸ್ತೆ ವಾಸಿ ಗಣೇಶ ಬಿನ್ ರಾಮಪ್ಪರವರು ನೀಡಿದ ದೂರಿನಲ್ಲಿ ಪಿರ್ಯಾದಿಯವರ ತಂದೆ ರಾಮಪ್ಪ ರವರು ದಿನಾಂಕ;11/09/2021 ರಂದು ರಾತ್ರಿ 11.00 ಗಂಟೆ ಸಮಯದಲ್ಲಿ ಬುಕ್ಕಂಬೂದಿ  ಕಡೆಯಿಂದ ಅತ್ತಿಮೊಗ್ಗೆ ಕ್ರಾಸ್ ಕಡೆ ನಡೆದುಕೊಂಡು ಬರುತ್ತಿರುವಾಗ ಯಾವುದೋ ವಾಹನ ತನ್ನ ತಂದೆಯವರಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದು ತಂದೆಯವರಿಗೆ ತಲೆಗೆ, ಕೈ ಕಾಲಿಗೆ ಪೆಟ್ಟು ಬಿದ್ದು,  ತಂದೆ ರಾಮಪ್ಪ ರವರು ಮೃತಪಟ್ಟಿದ್ದು ,ಅಪಘಾತಪಡಿಸಿದ ವಾಹನವನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಅಜ್ಜಂಪುರ ಠಾಣೆಯಲ್ಲಿ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ಅಲ್ದೂರು  ಪೊಲೀಸ್ ಠಾಣೆ

ದಿನಾಂಕ:11/09/2021 ರಂದು 19.00 ಗಂಟೆ ಸಮಯದಲ್ಲಿ ಅಲ್ದೂರು ಠಾಣಾ ಸರಹದ್ದಿನ ಅಲ್ದೂರು ಪಟ್ಟಣದ ಗಾಳಿಗಂಡಿ ಸರ್ಕಾರಿ ಶಾಲೆಯ ಹತ್ತಿರ ವಿರುವ ರಮೇಶ ಬಿನ್ ರಂಗೇಗೌಡ ರವರ ಮನೆಯ ಪಕ್ಕದ ಓಣಿಯಲ್ಲಿ ರಮೇಶನು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಅರೋಪಿತನು ಅಕ್ರಮವಾಗಿ ಹೊಂದಿದ್ದ ಕ್ಯಾಪ್ಟನ್ ಮಾರ್ಟಿನ್ ಸ್ಪೇಷಲ್ ವಿಸ್ಕಿಯ  180 ಎಂ.ಎಲ್. ನ 05 ಪೌಚ್ ಹಾಗೂ ಓರಿಜನಲ್ ಚಾಯ್ಸ್  ಡಿಲಕ್ಸ್ ವಿಸ್ಕಿಯ 32 ಪೌಚ್ ಒಟ್ಟು 37 ಪೌಚ್ ಅಂದಾಜು ಬೆಲೆ 1475/- ರೂ ಗಳಾಗಿದ್ದು ಸದರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಆರೋಪಿ ವಿರುದ್ದ  ಅಲ್ದೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶ್ರೀಮತಿ ಶಿವರುದ್ರಮ್ಮ ಎಸ್. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಬೀರೂರು ಪೊಲೀಸ್ ಠಾಣೆ

ದಿನಾಂಕ:11/09/2021 ರಂದು ಬೀರೂರು ಠಾಣಾ ಸರಹದ್ದಿನ ಬೀರೂರು ಪಟ್ಟಣ ಬಾವಿ ಮನೆ ಬೀದಿ ವಾಸಿ ಅಮೀರ್ ಖಾನ್ ಬಿನ್ ಅಸ್ಗರ್ ಅಲಿ ಖಾನ್ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯವರ ತಂಗಿ ರುಕ್ಕಯ್ಯ ಖಾನಮ್ , ಪ್ರಾಯ 23 ವರ್ಷ ಇವಳು ದಿನಾಂಕ:01/09/2021 ರಂದು ಬೆಳಿಗ್ಗೆ 6.30 ಗಂಟೆಗೆ ಮನೆಯಿಂದ ಯಾರಿಗೂ ಹೇಳದೇ ಹೋಗಿದ್ದು , ಈ ವರೆಗೂ ಹುಡುಕಿದರೂ ಪತ್ತೆ ಅಗದೇ ಇದ್ದು ಕಾಣೆಯಾಗಿರುತ್ತಾಳೆ ತನ್ನ ತಂಗಿ 5.2. ಅಡಿ ಎತ್ತರವಿದ್ದು ,  ದುಂಡು ಮುಖ, ಬಿಳಿ ಬಣ್ಣ, ಕನ್ನಡ ಮತ್ತು ಉರ್ದು ಭಾಷೆ ಮಾತಾನಾಡುತ್ತಾಳೆ ಮನೆಯಿಂದ ಹೋಗುವಾಗ ಬುರ್ಖಾ ಧರಿಸಿರುತ್ತಾಳೆ ಎಂದು, ಕಾಣೆಯಾಗಿರುವ ತನ್ನ ತಂಗಿಯನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಬೀರೂರು ಠಾಣೆಯಲ್ಲಿ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 12-09-2021 07:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080