ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ

ಅಲ್ದೂರು ಪೊಲೀಸ್ ಠಾಣೆ.

ದಿನಾಂಕ 11/10/2021 ರಂದು ಅಲ್ದೂರು ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಚಂದ್ರಶೇಖರ್ ಬಿನ್ ಮಲ್ಲೇಶ್ ರವರು ಮನೆಯ ಮುಂಭಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು,  ದಾಳಿ ಸಮಯದಲ್ಲಿ ಆರೋಪಿ ಚಂದ್ರಶೇಖರ್ ಬಿನ್ ಮಲ್ಲೇಶ್ ಓಡಿ ಹೋಗಿದ್ದು  ಆರೋಪಿಯು ಅಕ್ರಮವಾಗಿ ಹೊಂದಿದ್ದ ಓರಿಜನಲ್ ಚಾಯ್ಸ್ ನ 90 ಎಂ.ಎಲ್. ನ 12 ಮದ್ಯದ  ಪೌಚ್ ಗಳು  ಸುಮಾರು 421/- ರೂ ಗಳಾಗಿದ್ದು, ಸದರಿ ಮದ್ಯವನ್ನು ಮತ್ತು  ಅರೋಪಿ ಮದ್ಯ ಮಾರಾಟ ಮಾಡಿದ ಬಾಬ್ತು 80/- ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಫಿ ವಿರುದ್ದ ಅಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಬಸವರಾಜ್ ಜೆ.ಕೆ.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಇಸ್ಪೀಟ್ ಜೂಜಾಟ ಪ್ರಕರಣ

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ 11-10-2021 ರಂದು ಅಜ್ಜಂಪುರ ಠಾಣಾ ಸರಹದ್ದಿನ  ತಡಗ ಗ್ರಾಮದ ಶ್ರೀ ಸಿದ್ದರೂಢ ಸ್ವಾಮಿ ಸಮುದಾಯ ಭವನದ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟ ಆಡುತ್ತಿದ್ದ 1. ರಘು @ ಬಿಳಿ ರಘು 2. ಜಯಣ್ಣ 3. ಟಿ.ಟಿ. ಪ್ರಸನ್ನ 4. ಮಹಾಂತೇಶ್  5. ಮನು  6. ಪ್ರದೀಪ್ 7. ಪರಮೇಶ 8. ರವಿ ರವರು ಅಕ್ರಮವಾಗಿ ಜೂಜಾಟ ಆಡುತ್ತಿದ್ದು  ರಘು @ ಬಿಳಿ ರಘು 2. ಜಯಣ್ಣ 3. ಟಿ.ಟಿ. ಪ್ರಸನ್ನ 4. ಮಹಾಂತೇಶ್  5. ಮನು  6. ಪ್ರದೀಪ್ 7. ಪರಮೇಶ ರವರನ್ನು ವಶಕ್ಕೆ ಪಡೆದಿದ್ದು ರವಿ ಓಡಿ ಹೋಗಿದ್ದು ಅರೋಪಿತರು ಇಸ್ಪೀಟ್ ಜೂಜಾಟಲು ಬಳಸಿದ 42,120/- ರೂ ನಗದು,  52 ಇಸ್ಪೀಟ್ ಎಲ್ ಒಂದು ಕೆಂಪು ಬಣ್ಣದ ಪ್ಲಾಸ್ಟಿಕ್ ಚಾಪೆಯನ್ನು ಅಮಾನತ್ತುಪಡಿಸಿಕೊಂಡು ಬಂದು  ಆರೋಫಿತರ ವಿರುದ್ದ ಅಜ್ಜಂಫುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಸಿ.ಇ.ಎನ್.  ಠಾಣಾ ಪಿ.ಎಸ್.ಐ. ರಫೀಕ್ ಎಂ.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ 12/10/2021 ರಂದು ಮಾಗಡಿ ಗ್ರಾಮದ ಶ್ರೀ ಕರಿಯಮ್ಮ ದೇವಸ್ಥಾನದ  ಮುಖ್ಯಸ್ಥರಾದ ಎಂ.ಎಸ್. ಮಂಜುನಾಥ ರವರು ನೀಡಿದ ದೂರಿನಲ್ಲಿ ದಿನಾಂಕ 11/10/2021 ರಂದು ರಾತ್ರಿ ದೇವಸ್ಥಾನವನವನು ನೋಡಿಕೊಂಡು ಮನಗೆ ಹೋಗಿದ್ದು ದಿನಾಂಕ 12/10/2021 ರಂದು ದೇವಸ್ಥಾನದ ಅರ್ಚಕರಾದ ಸುರೇಶ್ರವರು ಬೆಳಿಗ್ಗೆ ದೇವಸ್ಥಾನವನ್ನು ನೋಡಲಾಗಿ ಯಾರೋ ಕಳ್ಳರು ದೇವಸ್ಥಾನದ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ಮುರಿದು ಬಾಗಿಲು ತೆಗೆದು ದೇವಾಲಯದ ಒಳ ಪ್ರವೇಶಿಸಿ ಮದ್ಯದ ಹಾಲಿನಲ್ಲಿದ್ದ ಕಾಣಿಕೆ ಹುಂಡಿಯ  ಬೀಗವನ್ನು ಮುರಿದು ಸುಮಾರು ಹತ್ತರಿಂದ ಹದಿನೈದು ಸಾವಿರ ರೂ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಕಳ್ಳರನ್ನು ಪತ್ತೆ ಮಾಡಿ ಕಳ್ಳತನ ವಾಗಿರುವ ಕಾಣಿಕೆ ಹಣವನ್ನು ಪತ್ತೆ ಮಾಡಿಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ  ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ:12/10/2021 ರಂದು ಗ್ರಾಮಾಂತರ ಠಾಣಾ ವ್ಯಾಪ್ತಿ ಕಣವೆಹಳ್ಳಿ ವಾಸಿ ದೊಡ್ಡಸ್ವಾಮಿಗೌಡ ಇವರು ನೀಡಿದ ದೂರಿನಲ್ಲಿ ದಿನಾಂಕ:11/10/2021 ರಂದು ಪಿರ್ಯಾದಿಯ ಹೆಂಡತಿ ಶ್ರೀಮತಿ ಆಶಾ 28 ವರ್ವ ಇವಳು ಚಿಕ್ಕಮಗಳೂರು ಅಸ್ಪತ್ರೆಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೇಳಿ ಹೋದವಳು ಇದುವರೆಗೂ ಮನೆಗೆ ಬಂದಿರುವುದಿಲ್ಲ ಎಲ್ಲಾ ಕಡೆ ಹುಡುಕಾಡಿದರೂ ಸಹ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ತನ್ನ ಹೆಂಡತಿ ಚಹರೆ ಕೋಲು ಮುಖ , ಎಣ್ಣೆಗೆಂಪು ಬಣ್ಣ 5.5. ಅಡಿ ಎತ್ತರ, ಕೊರಳಿನಲ್ಲಿ ಕರಿಮಣಿ ಸರವನ್ನು ಧರಿಸಿರುತ್ತಾಳೆ ಇವಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 12-10-2021 07:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080