ಅಭಿಪ್ರಾಯ / ಸಲಹೆಗಳು

ಗ್ರಾಮಾಂತರ ಪೊಲೀಸ್ ಠಾಣೆ.

 ಅಕ್ರಮ ಮಧ್ಯ ಮಾರಾಟ.

ದಿನಾಂಕ:12/11/2021ರಂದು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವ ಬಗ್ಗೆ  ಗೇನೋಜ, ಕೆ.ಟಿ. ಮಪಿಎಸ್ಐ ರವರಿಗೆ ದೊರೆತ ಖಚಿತ ವರ್ತಮಾನದಂತೆ, ಸಿಬ್ಬಂದಿಗಳಾದ ಎಎಸ್ಐ ಸುರೇಶ, ಮಪಿಸಿ 78 ಲಲಿತ ರವರೊಂದಿಗೆ ಇಲಾಖಾ ಜೀಪಿನಲ್ಲಿ ಪಂಚರೊಂದಿಗೆ ಹೊರಟು ಚಿಕ್ಕನಹಳ್ಳಿ ಗ್ರಾಮದ ಚಿಕ್ಕೇಗೌಡ ಎಂಬುವರು ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವ ಬಗ್ಗೆ ಪರವಾನಗಿ ಕೇಳಲಾಗಿ ಅಸಾಮಿಯು ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದ್ದರಿಂದ ಪಂಚರ ಸಮಕ್ಷಮ 90 ಎಂ.ಎಲ್.ನ 42 ಒರಿಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿ ಟೆಟ್ರಾ ಪ್ಯಾಕ್ಗಳನ್ನು  ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತಾರೆ, ಇದರ ಒಟ್ಟು ಅಂದಾಜು ಮೌಲ್ಯ 1475-00 ಆಗಿರುತ್ತದೆ. ಈ ಬಗ್ಗೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

 

ಲಿಂಗದಹಳ್ಳಿ ಪೊಲೀಸ್ ಠಾಣೆ.

 ಕೊಲೆ ಪ್ರಕರಣ:

ದಿನಾಂಕ: 11/11/2021 ರಂದು ಸಂಜೆ ಸುಮಾರು 5-00 ಗಂಟೆಯಲ್ಲಿ ಆರೋಪಿ ಚಂದ್ರನು ಪಿರ್ಯಾದಿ ಶಿವಕುಮಾರನ ಅಕ್ಕ ಗೀತಾ @ ನೇತ್ರಳಿಗೆ ಅಜ್ಜಂಪುರದಿಂದ ಕೆಲಸ ಮಾಡಿ ತಂದಿದ್ದ ರೂ 3000-00 ಹಣ ಕೊಡುವಂತೆ ಪೀಡಿಸಿ ಹೊಡೆಯುತ್ತಿದ್ದಾಗ ಬಿಡಿಸಲು ಹೋದ ಮಗಳು ಸಂಗೀತಳನ್ನು ಹೊಡೆದು ಮನೆಯಿಂದ ಹೊರಗೆ ಕಳುಹಿಸಿ ಬಾಗಿಲು ಹಾಕಿಕೊಂಡು ಗೀತಾಳಿಗೆ ಹೊಡೆದಿರುತ್ತಾನೆ. ದಿ:12/11/2021 ರಂದು ಬೇರೆ ಮನೆಯಲ್ಲಿ ಮಲಗಿ ಸಂಗೀತ ಬೆಳಗ್ಗೆ 7-00 ಗಂಟೆಗೆ ಮನೆಗೆ ಬಂದು ಬಾಗಿಲು ತೆಗೆದು ನೋಡಿದಾಗ ಗೀತಾ @ ನೇತ್ರಳು ಮಲಗಿದ್ದು ಮುಖ ಊದಿಕೊಂಡಿದ್ದು, ಅಲ್ಲಲ್ಲಿ ರಕ್ತ ಹೆಪ್ಪುಗಟ್ಟಿರುವಂತೆ ಇರುವುದನ್ನು ಕಂಡು ಸಂಗೀತಳು ಗಾಬರಿಯಿಂದ ಪಿರ್ಯಾದಿ ಶಿವಕುಮಾರ ಇವರಿಗೆ ತಿಳಿಸಿದಾಗ ಹಣಕ್ಕಾಗಿ ಆರೋಪಿ ಚಂದ್ರನು ಪಿರ್ಯಾಧಿ ಅಕ್ಕ ಗೀತಾ @ ನೇತ್ರಳಿಗೆ ಕುಡಿಯಲು ಹಣಕ್ಕಾಗಿ ಹೊಡೆದು, ಉಸಿರುಗಟ್ಟಿಸಿ ಕೊಲೆ ಮಾಡಿರುತ್ತಾನೆ. ಚಂದ್ರನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಚಂದ್ರನ ವಿರುದ್ದ ಕೊಲೆ ಪ್ರಕರಣ ದಾಖಲಾಗಿ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ತನಿಖೆಯಲ್ಲಿರುತ್ತದೆ.

 

ಸಿಂಗಟಗೆರೆ ಪೊಲೀಸ್ ಠಾಣೆ

 ಇಸ್ಪೀಟು ಜೂಜಾಟ ಪ್ರಕರಣ.

ದಿನಾಂಕ:11/11/2021 ರಂದು ಸಿಂಗಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯ ರಂಗಾಪುರ ನಾರಾಯಪುರ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ನಾರಾಯಣಪುರ ವಾಸಿ ಪ್ರಭು ರವರ ತೋಟದಲ್ಲಿ ಅಕ್ರಮವಾಗಿ ಇಸ್ಪೀಟು ಜೂಜಾಟ ಆಡುತ್ತಿರುವ ಬಗ್ಗೆ ಗಸ್ತಿನಲ್ಲಿದ್ದ ಪಿಎಸ್ಐರವರಿಗೆ ಮಾಹಿತಿ ದೊರೆತ ಮೇರೆಗೆ ಪಿಎಸ್ಐ ರವರು ಇಲಾಖಾ ಜೀಪ್ನಲ್ಲಿ ಸಿಬ್ಬಂದಿಗಳಾದ ಮಂಜುನಾಥ, ಹೆಚ್ಸಿ 34, ಹರೀಶ್, ಪಿಸಿ 237, ನಟರಾಜ್, ಪಿಸಿ 101 ರವರೊಂದಿಗೆ ಪಂಚರನ್ನು ಕರೆದುಕೊಂಡು ಸ್ಥಳ್ಕಕ್ಕೆ ಹೋಗಿ ನೊಡಿದಾಗ 1] ಪ್ರಭುಕುಮಾರ, 2] ತೀರ್ಥರಾಜು 3] ಗಂಗಾಧರ  4] ಜಯಣ್ಣ 5] ಜಯಣ್ಣ ಇವರುಗಳು ಹಣವನ್ನು ಪಣವಾಗಿ ಇಟ್ಟು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿದ್ದವರನ್ನು ಸುತ್ತುವರಿದು ಹಿಡಿದು ಇಸ್ಪೀಟು ಜೂಜಾಟಕ್ಕೆ ಬಳಸಿದ್ದ  ಒಂದು ಬೆಡ್ ಶೀಟ್  52 ಇಸ್ಪೀಟು ಎಲೆ ಮತ್ತು  ರೂ 3040ಗಳನ್ನು ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತಾರೆ. ಈ ಬಗ್ಗೆ  ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

 ತರೀಕೆರೆ ಪೊಲೀಸ್ ಠಾಣೆ

 ರಾತ್ರಿ/ಹಗಲು ಕನ್ನ ಕಳವು

ದಿನಾಂಕ:11/11/2021 ರಂದು ಬೆಳಗ್ಗೆ 10-00 ಗಂಟೆಯಲ್ಲಿ ಪಿರ್ಯಾದಿ ಮೂರ್ತಿ ರವರು ತನ್ನ ಹೆಂಡತಿಯೊಂದಿಗೆ ಗುಂಗರಹಳ್ಳಿಗೆ ಅಂತ್ಯ ಸಂಸ್ಕಾರಕ್ಕೆ ಹೋಗಿ ವಾಪಸ್ಸು ದಿ:12/11/2021 ರಂದು ಬೆಳಗ್ಗೆ 8-00 ಗಂಟೆಗೆ ಬಂದು ನೋಡಿದಾಗ ಮನೆಯ ಮುಂಬಾಗದ ಬಾಗಿಲು ಮೀಟಿರುವುದು ಕಂಡು ಬಂದಿದ್ದು ಒಳಗೆ ನೋಡಿದಾಗ ಮನೆಯ ಬೀರುವಿನಲ್ಲಿ ಇಟ್ಟಿದ್ದ 1] ಕರಿಮಣಿ ಹವಳ ಮಿಶ್ರಿತ ಒಂದು ಹ್ಯಾಂಗಿಗ್ಸ್ 2] ಎಂ ವಿ ಎಂದು ಬರೆದಿರುವ ಒಂದು ಉಂಗುರ 3] ಹಸಿರು ಹಳರಳಿನ ಉಂಗುರ ಎಲ್ಲಾ ಸೇರಿ ಒಟ್ಟು ಸುಮಾರು 24 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಇವುಗಳ ಒಟ್ಟು ಅಂದಾಜು ಬೆಲೆ 1.10.000-00 ಆಗಿರುತ್ತವೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಇತ್ತೀಚಿನ ನವೀಕರಣ​ : 13-11-2021 11:59 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080