ಅಭಿಪ್ರಾಯ / ಸಲಹೆಗಳು

ಕಳ್ಳತನ ಪ್ರಕರಣ.

ಅಜ್ಜಂಪುರ ಪೊಲೀಸ್ ಠಾಣೆ,

 ದಿನಾಂಕ:12-12-2021 ರಂದು ಪ್ರವಿಣ್ ಕುಮಾರ್, ನಾರಾಯಣಪುರ ಗ್ರಾಮ ವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 10-12-2021 ರಂದು ಕೆಎ- 66 ಇ-6525 ಸ್ಟಾರ್ ಬೈಕ್ ನ್ನು ಮನೆಯ ಪಕ್ಕದಲ್ಲಿರುವ ಶೆಡ್ ಬಳಿ ನಿಲ್ಲಿಸಿದ್ದು ದಿನಾಂಕ 11-12-2021 ರಂದು ಬೆಳಗಿನ ಜಾವ ಬೈಕ್ ನ್ನು ನೋಡಲಾಗಿ ಶೆಡ್ ನಲ್ಲಿ ಇರಲಿಲ್ಲ. ಯಾರೋ ಕಳ್ಳರು ಬೈಕ್ ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿ ಬೈಕ್ನನು ಪತ್ತೆ ಮಾಢಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಅಜ್ಜಂಪುರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ  ಪ್ರಕರಣ.

ಬಾಳೆಹೊನ್ನೂರು ಪೊಲೀಸ್ ಠಾಣೆ.

ದಿನಾಂಕ:12-12-2021 ರಂದು ಬಾಳೆಹೊನ್ನೂರು ಪೊಲೀಸ್ ಠಾಣಾ ಸರಹದ್ದಿನ ಹ್ಯಾರಂಬಿ ಗ್ರಾಮದ ವಾಸಿ ಶ್ರೀಮತಿ ವಿಶಾಲಾಕ್ಷಿ ಇವರು ನೀಡಿದ ದೂರಿನಲ್ಲಿ ದಿನಾಂಕ:11-12-2021 ರಂದುಮದ್ಯಾಹ್ನ 3-00 ಗಂಟೆ ಸಮಯದಲ್ಲಿ  ಪಿರ್ಯಾದಿಯವರ ಮಗಳು ಸಂಗೀತಾ, 21 ವರ್ಷ ಈಕೆಯು ಮನೆಯಿಂದ ಹೊರಗೆ ಹೋದವಳು ಇಲ್ಲಿಯವರೆಗೂ ಬಂದಿರುವುದಿಲ್ಲ. ಇವಳನ್ನು ಎಲ್ಲಾ ಕಡೆ ಹುಡುಕಾಡಿದರೂ ಸಹ ಈವರೆಗೆ ಸಿಕ್ಕಿರುವುದಿಲ್ಲ ವೆಂದು ಕಾಣೆಯಾಗಿರುವ ತಮ್ಮ ಮಗಳು ಸಂಗೀತಾ ಚಹರೆ 21 ವರ್ಷ, ಸಾದಾರಣ ಮೈ ಕಟ್ಟು, ಎಣ್ಣೆಗೆಂಪು ಮೈ ಬಣ್ಣ, 5 ಅಡಿ ಎತ್ತರ ಇರುತ್ತಾಳೆ. ಕನ್ನಡ ಭಾಷೆ ಮಾತಾನಾಡುತ್ತಾಳೆ. ನೀಲಿ ಬಣ್ಣದ ಪ್ಯಾಂಟ್  ಮತ್ತು ಹಳದಿ ಬಣ್ಣದ ಚೂಡಿದಾರ್ ಧರಿಸಿರುತ್ತಾಳೆ. ಕಾಣೆಯಾಗಿರುವ  ಸಂಗೀತಾಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಬಾಳೆಹೊನ್ನೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಅಪಘಾತ ಪ್ರಕರಣ.

ಬೀರೂರು ಪೊಲೀಸ್ ಠಾಣೆ.

ದಿನಾಂಕ: 12-12-2021 ರಂದು  ಲೋಹಿತ್ ಬಿನ್ ಮಹದೇವಪ್ಪ, ಅಜ್ಜಂಪುರ ಟೌನ್ ವಾಶಿರವರು ನೀಡಿದ ದೂರಿನಲ್ಲಿ ದಿನಾಂಕ:11-12-2021 ರಂದು ನಾನು ಹಾಗೂ ಆಕಾಶನು ನನ್ನ ಮಾವನ ಮಗಳಾದ ಮಾನಸರವರ ಆರತಕ್ಷತೆ ಕಾರ್ಯಕ್ರಮವನ್ನು ಮುಗಿಸಿಕೊಂಡು ರಾತ್ರಿ 11-30 ಗಂಟೆ ಸಮಯದಲ್ಲಿ ಕೆಎ-53 ಹೆಚ್ ಡಿ- 6402 ಸ್ಕೂಟಿಯಲ್ಲಿ ಬೀರೂರಿನಿಂದ ಯರೇಹಳ್ಳಿ ಬಳಿ ಬರುತ್ತಿರುವಾಗ ಆಕಾಶ್ ನು ಸ್ಕೂಟಿಯನ್ನು  ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ್ದರಿಂದ ಸ್ಕೂಟಿ ಆಯತಪ್ಪಿ ಪಲ್ಟಿ ಹೊಡೆದಿದ್ದು ಆಕಾಶ್ ರವರಿಗೆ ತಲೆಗೆ ಬಲವಾದ ಪೆಟ್ಟು ಬಿದ್ದು   ಮೃತಪಟ್ಟಿದ್ದು, ನನಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಘಾತಗೊಳಿಸಿದ ಆಕಾಶನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಅಕ್ರಮ ಗೋ ಮಾಂಸ ಮಾರಾಟ ಪ್ರಕರಣ

ತರೀಕೆರೆ  ಪೊಲೀಸ್ ಠಾಣೆ .

ದಿನಾಂಕ: 12/12/2021 ಬೆಳಿಗ್ಗೆ 09-15 ಗಂಟೆ ಸಮಯದಲ್ಲಿ ಚಿಕ್ಕೆರೆ ಕೋಡಿ ಪಕ್ಕದ ಖಬರ್ ಸ್ಥಾನದ ಹತ್ತಿರ  ಅಕ್ರಮವಾಗಿ  ದನವನ್ನು ಕಡಿದು ಮಾರಾಟ ಮಾಡುತ್ತಿರುವ ಬಗ್ಗೆ ದಾಳಿ ನಡೆಸಿದ್ದು ,ಯಾವುದೇ ಪರವಾನಗಿಯನ್ನು ಹೊಂದದೆ ಅಕ್ರಮವಾಗಿ ಜಾನುವಾರುಗಳನ್ನು ಕಡಿದು ಮಾರಾಟ ಮಾಡುತ್ತಿದ್ದು ಸಮವಸ್ರದಲ್ಲಿದ್ದ ನಮ್ಮಗಳನ್ನು ನೋಡಿ ಆಸಾಮಿಯು ಓಡಿಹೋಗಿದ್ದು , ಓಡಿ ಹೋದ ಆಸಂಇಯ ಹೆಸರು ತೌಕಲ್ ಮಸ್ತಾನ್ ಬಿನ್ ಹನೀಫ್, ಕೆರೆಕೊಡಿ ವಾಸಿ ಎಂದು ತಿಳಿದಿದ್ದು ಸ್ಥಳದಲ್ಲಿದ್ದ ಸುಮಾರು 90 ರಿಂದ 100  ಕೆಜಿಯಷ್ಟು ದನದ ಮಾಂಸ , 3 ಕಬ್ಬಿಣದ ಕತ್ತಿ ಇವುಗಳನ್ನು  ವಶಕ್ಕೆ ಪಡೆದು  ಆರೋಪಿಯ ವಿರುದ್ದ ತರೀಕೆರೆ ಪೊಲೀಸ್ ಠಾಣೆಯಲ್ಲಿ  ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ. ಕೃಷ್ಣಾನಾಯ್ಕ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಇತ್ತೀಚಿನ ನವೀಕರಣ​ : 12-12-2021 07:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080