ಅಭಿಪ್ರಾಯ / ಸಲಹೆಗಳು

ಅಕ್ರಮ ಜಾನುವಾರು ಕಳ್ಳತನ ಹಾಗೂ ಹತ್ಯಾ ಪ್ರಕರಣ.

ಬಸವನಹಳ್ಳಿ ಪೊಲೀಸ್ ಠಾಣೆ.

ದಿನಾಂಕ:13-07-2021 ರಂದು ಪಿರ್ಯಾದುದಾರರಾದ ಜನಾರ್ಧನಾಚಾರ್ ಹೆಚ್.ಸಿ.183 ರವರು ನೀಡಿದ ವರದಿಯ ಸಾರಂಶವೇನೆಂದರೆ  ಈ ದಿವಸ ನಾನು ಪಿಸಿ708 ರವರೊಂದಿಗೆ ಉಪ್ಪಳ್ಳಿಯ ಪಾಂಚ್ಪೀರ್ ದರ್ಗಾದ ಬಳಿ ಚೆಕ್ ಪೋಸ್ಟ್ ಕರ್ತವ್ಯ ನಿರ್ವಹಿಸುತ್ತಿರುವಾಗ  ಬೆಳಿಗ್ಗೆ 6.45 ಗಂಟೆ ಸಮಯದಲ್ಲಿ ಉಪ್ಪಳ್ಳಿ ಸರ್ಕಲ್ ಕಡೆಯಿಂದ ಒಂದು ಗೂಡ್ಸ್ ವಾಹನ ಬಂದಿದ್ದು ನಮ್ಮಗಳನ್ನು ನೋಡಿ ಆತನು ವಾಹನವನ್ನು ನಿಲ್ಲಿಸದೆ ಹೋಗಿದ್ದು ವಾಹನವನ್ನು ಹಿಂಬಾಲಿಸಿಕೊಂಡು ನಯನ ಶೋರೂಂ ಬಳಿಯಲ್ಲಿರುವ ಗ್ಯಾರೇಜ್ ಬಳಿ ವಾಹನವನ್ನು ನಿಲ್ಲಿಸಿ ಚಾಲಕನನ್ನು ಹಿಡಿದು ವಾಹನವನ್ನು ಪರಿಶೀಲಿಸಲಾಗಿ ಕೆಎ-18 ಸಿ-2848 ಆಪೆ ಗೂಡ್ಸ್ ವಾಹನವಾಗಿದ್ದು ,ಚಾಲಕನ ಹೆಸರು ಅಖಿಲ್ ಬಿನ್ ನಾಗೇಶ್ ಗೌಡ, ಮತ್ತಾವರ ಗ್ರಾಮ ಎಂದು ತಿಳಿಸಿದ್ದು , ವಾಹನದ ಹಿಂಭಾಗದಲ್ಲಿ ಒಂದು ಹೋರಿಯನ್ನು ಹಿಂಸಾತ್ಮಕವಾಗಿ ತುಂಬಿದ್ದು ಮೇಲೆ ಟಾರ್ಪಲ್ ಕಟ್ಟಿರುತ್ತೆ. ಯಾವುದೇ ಪರವಾನಗಿಯನ್ನು ಹೊಂದದೆ ದನವನ್ನು ಕಡಿದು ಮಾಂಸ ಮಾಡುವ ಉದ್ದೇಶದಿಂದ ಚಿಕ್ಕಮಗಳೂರು ನಗರದ ರಾಮೇಶ್ವರ ಕೆರೆಯ ಹತ್ತಿರ ಮೇಯುತ್ತಿದ್ದ ಹೋರಿ ಕರುವನ್ನು ಕದ್ದು ಸಾಗಾಣಿಕೆ ಮಾಡುತ್ತಿದ್ದರಿಂದ ಆರೋಪಿತನ ವಿರುದ್ದ  ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತಾರೆ.

ಮನುಷ್ಯ ಕಾಣೆ ಪ್ರಕರಣ

ಮೂಡಿಗೆರೆ  ಪೊಲೀಸ್ ಠಾಣೆ .

ದಿನಾಂಕ 13.07.2021 ರಂದು ಗ್ರಾಮವಾಸಿರವರು ಠಾಣೆಗೆ ಹಾಜರಾಗಿ ನೀಡಿದದೂರಿನ ಸಾರಾಂಶವೇನೆಂದರೆ ನಾನು ನನ್ನ ತಂದೆ ತಾಯಿ ಹಾಗೂ ತಮ್ಮನೊಂದಿಗೆ ಮೂಡಿಗೆರೆ ಪಟ್ಟಣದ ಛತ್ರಮೈದಾನದಲ್ಲಿ ವಾಸವಾಗಿದ್ದು, ನನ್ನ ತಮ್ಮ ರಷೀದ್ ಆಹಮದ್ ಆತನ ಸ್ನೇಹಿತ ಶಾಕೀರ್ ಆಹಮದ್ ರೊಂದಿಗೆ ಗಂಗನಮಕ್ಕಿಯಲ್ಲಿ ಕಾಪಿ ಶಾಪ್ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದು ,ರಷೀದ್ ಅಹಮದ್ ಗೆ ಮೇ ತಿಂಗಳಿನಲ್ಲಿ ಮದುವೆ ನಿಶ್ಚಿತವಾಗಿದ್ದು , ದಿನಾಂಕ 07-07-2021 ರಂದು ಮದುವೆ ಶಾಪಿಂಗ್ ಮಾಡಲು ನನ್ನ ತಮ್ಮ ಹಾಗೂ ಸ್ನೇಹಿತ ಇಬ್ಬರೂ ಮಂಗಳೂರಿಗೆ ಹೋಗಿಬರುತ್ತೇವೆಂದು ಹೇಳಿ ಹೋದವರು ಇದುವರೆಗೂ ಮನೆಗೆ ವಾಪಾಶ್ ಬಂದಿರುವುದಿಲ್ಲ. ಇಬ್ಬರ ಮೊಬೈಲ್ ಪೋನ್ ಗಳು ಸ್ವಿಚ್ ಆಪ್ ಆಗಿರುತ್ತೆ. ಸಂಬಂಧಿಕರ,ಸ್ನೇಹಿತರ ಹಾಗೂ ನೆಂಟರಿಷ್ಟರ  ಮನೆಗಳಲ್ಲಿ ವಿಚಾರ ಮಾಡಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ . ಆದ್ದರಿಂದ ಕಾಣೆಯಾಗಿರುವ  ನನ್ನ ತಮ್ಮ ಹಾಗೂ ಆತನ ಸ್ನೇಹಿತನನ್ನು  ಪತ್ತೆ ಮಾಡಿಕೊಡಿಕೊಡುವಂತೆ ನೀಡಿದ ಪಿರ್ಯಾದಿನ ಮೇರೆಗೆ  ಮೂಡಿಗೆರೆ   ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಅಕ್ರಮ ಮದ್ಯ ಮಾರಾಟ ಪ್ರಕರಣ .

ಜಯಪುರ  ಪೊಲೀಸ್ ಠಾಣೆ.

ದಿನಾಂಕ: 12/07/2021 ರಂದು ನಗರದಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿರುವಾಗ ಮಕ್ಕಿಕೊಪ್ಪ ವಾಸಿ ಸುಜಾತ ಅಂಗನವಾಡಿ ಟೀಚರ್  ಎಂಬುವವರು ತಮ್ಮ ಮನೆಯಲ್ಲಿ ಸಾರ್ವಜನಿಕರಿಗೆ  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ  ದಾಳಿ ನಡೆಸಿದ್ದು ಸುಜಾತ ಹಾಗೂ ಆಕೆಯ ಗಂಡ ವಿಜೇಂದ್ರರವರು ತಮ್ಮ ಮನೆಯಲ್ಲಿ ಯಾವುದೇ ಪರವಾನಗಿಯನ್ನು ಹೊಂದದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು ಅವರಿಬ್ಬರನ್ನೂ ವಶಕ್ಕೆ ಪಡೆದು ಅವರ ಬಳಿ 90 ಎಂ.ಎಲ್ ನ ಓರಿಜಿನಲ್ ಚಾಯ್ಸ್ ಡಿಲೆಕ್ಸ್ ವಿಸ್ಕಿಯ 74  ಮದ್ಯದ ಪೌಚ್ಗಳಿದ್ದು ,ಮದ್ಯದ ಅಂದಾಜು ಬೆಲೆ 2559/- ರೂ ಆಗಿದ್ದು, ಆರೋಪಿತರ ವಿರುದ್ದ ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಐ. ಗುರಣ್ಣಹೆಬ್ಬಾಳ್  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಸಿಂಗಟಗೆರೆ  ಪೊಲೀಸ್ ಠಾಣೆ.

ದಿನಾಂಕ: 12/07/2021 ರಂದು ನಗರದಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿರುವಾಗ ಸೋಮನಹಳ್ಳಿ ತಾಂಡ್ಯದಲ್ಲಿ ಲಲಿತಾಬಾಯಿ ಎಂಬುವವರು ತಮ್ಮ ಮನೆಯ ಮುಂದಿನ ರಸ್ತೆಯಲ್ಲಿ ಸಾರ್ವಜನಿಕರಿಗೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ  ದಾಳಿ ನಡೆಸಿದ್ದು ಲಲಲಿತಾಬಾಯಿಯವರು ತಮ್ಮ ಮನೆಯ ಮುಂದಿನ ರಸ್ತೆಯ ಮುಂದೆ ನಿಂತುಕೊಂಡು ಯಾವುದೇ ಪರವಾನಗಿಯನ್ನು ಹೊಂದದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು ಆಕೆಯನ್ನು  ವಶಕ್ಕೆ ಪಡೆದು ಆಕೆಯ ಬಳಿ 90 ಎಂ.ಎಲ್ ನ ರಾಜಾ ವಿಸ್ಕಿಯ 32  ಮದ್ಯದ ಪೌಚ್ಗಳಿದ್ದು ,ಮದ್ಯದ ಅಂದಾಜು ಬೆಲೆ 1024/- ರೂ ಆಗಿದ್ದು, ಒಂದು ಲೀಟರ್ ಪ್ಲಾಸ್ಟಿಕ್ ನೀರಿನ ಬಾಟಲ್ ಹಾಗೂ 5 ನೀರು ಕುಡಿಯುವ ಪ್ಲಾಸ್ಟಿಕ್ ಲೋಟಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿತಳ ವಿರುದ್ದ ಸಿಂಗಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ. ಶ್ರೀಮತಿ. ಲೀಲಾವತಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ

ಇತ್ತೀಚಿನ ನವೀಕರಣ​ : 13-07-2021 06:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080