ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಸಖರಾಯಪಟ್ಟಣ  ಪೊಲೀಸ್ ಠಾಣೆ.

ದಿನಾಂಕ:13/02/2022 ರಂದು ಶಿವಕುಮಾರ್ ಹೆಚ್.ಬಿ. ಬಿನ್ ಬಸಪ್ಪ ಹೆಚ್.ಎನ್. ಎಂ. ಹೊಸಳ್ಳಿ ಕಡೂರು ತಾ: ವಾಸಿ ಇವರು  ನೀಡಿದ ದೂರಿನಲ್ಲಿ ದಿನಾಂಕ;12/02/2022 ರಂದು ರಾತ್ರಿ ಪಿರ್ಯಾದಿ ಸ್ನೇಹಿತ ಪ್ರದೀಪ್ ಇವರೊಂದಿಗೆ ಸಬ್ ಮರ್ಸಿಬಲ್ ಪೈಪ್ ನ್ನು ಕೊಟ್ಟು ಬರಲು ಬಿಸಲೇಹಳ್ಳಿಗೆ ಕೆಎ-18-ಎಸ್-3065 ಮೋಟಾರು ಬೈಕಿನಲ್ಲಿ ಪಿರ್ಯಾದಿಯು ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಬಾಣಾವಾರ ರಸ್ತೆಯ ಜೀಗಣೆಹಳ್ಳಿ ಬಸ್ ನಿಲ್ದಾಣದ ಸಮೀಪ ಹೋಗುತ್ತಿರುವಾಗ  ಹಿಂದಿನಿಂದ ಯಾವುದೋ  ಅಪರಿಚಿತ ನಾಲ್ಕು ಚಕ್ರದ  ವಾಹನ ಚಾಲಕ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು  ಪಿರ್ಯಾದಿ ಚಾಲನೆ ಮಾಡುತ್ತಿದ್ದ ಬೈಕಿಗೆ  ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು, ಬೈಕ್ ರಸ್ತೆಯ ಮೇಲೆ ಬಿದ್ದಾಗ ಬೈಕಿನ ಹಿಂಬದಿಯಲ್ಲಿ ಕುಳಿತಿದ್ದ ಪ್ರದೀಪ ತಲೆಯ ಮೇಲೆ ಅಪರಿಚಿತ ವಾಹನದ ಚಕ್ರವು ಹರಿದು ಪ್ರದೀಪನು ಮೃತಪಟ್ಟಿದ್ದು , ಪಿರ್ಯಾದಿಗೆ ಗಾಯಾವಾಗಿದ್ದು ಅಪರಿಚಿತ ವಾಹನದ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಕಳ್ಳಭಟ್ಟಿ ಮದ್ಯ ಮಾರಾಟ ಪ್ರಕರಣ

ಬಾಳೂರು ಪೊಲೀಸ್ ಠಾಣೆ.

ದಿನಾಂಕ:13-02-2022 ರಂದು ಬಾಳೂರು ಠಾಣಾ ಸರಹದ್ದಿನ ಮಲೆಮನೆ ಗ್ರಾಮದಲ್ಲಿರುವ ಮಲೆಮನೆ ಗುಡ್ಡದ ಕಾಡಿನಲ್ಲಿ ಮಲೆಮನೆ ವಾಸಿಗಳಾದ ಮಂಜುನಾಥ, ಶಿವಪ್ಪ ಮತ್ತು ಉಮೇಶ ಎಂಬುವರು ಅಕ್ರಮವಾಗಿ ಕಳ್ಳಭಟ್ಟಿ ಮದ್ಯವನ್ನು ಬೇಯಿಸಿ ಕಳ್ಳಭಟ್ಟಿ ಮದ್ಯವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದು ಅರೋಪಿಗಳನ್ನು ವಶಕ್ಕೆ ಪಡೆದು ಆರೋಪಿಗಳ ವಶದಲ್ಲಿ 2 ಲೀಟರ್ ನಷ್ಟು ಕಳ್ಳಭಟ್ಟಿ ಮದ್ಯ, 300 ಲೀಟರ್ ನಷ್ಟು ಕಳ್ಳಭಟ್ಟಿ ಕೊಳೆ ಹಾಗೂ ಕಳ್ಳಭಟ್ಟಿ ತಯಾರಿಸಲು ಉಪಯೋಗಿಸುತ್ತಿದ್ದ ಸಾಮಾಗ್ರಿಗಳನ್ನು  ಅಮಾನತ್ತುಪಡಿಸಿಕೊಂಡು ಬಂದು ಆರೋಪಿಗಳ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ರೇಣುಕಮ್ಮ .ಡಿ.ವಿ.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಮಹಿಳಾ ಪೊಲೀಸ್ ಠಾಣೆ.

ದಿನಾಂಕ;12;02;2022 ರಂದು ಗೌರಿ ಕಾಲುವೆ ಚಿಕ್ಕಮಗಳೂರು ವಾಸಿ ರಾಜೇಶ್ ಎನ್. ಕೆ. ಬಿನ್ ಲೇಟ್ ಕೃಷ್ಣಶೆಟ್ಟಿ ರವರು ನೀಡಿದ ದೂರಿನಲ್ಲಿ ಪಿರ್ಯಾದಿಯ ತಾಯಿ ಶ್ರೀಮತಿ ಯಶೋಧಮ್ಮ ರವರು ರವರು ದಿನಾಂಕ:11-02-2022 ರಂದು ಮನೆಯಿಂದ ಹೊರಗಡೆ ಹೋದವರು ಇಲ್ಲಿಯವರೆಗೂ ಮನೆಗೆ ಬಾರದೇ ಇದ್ದು ಎಲ್ಲಾ ಕಡೆ ಹುಡುಕಾಡಿದರೂ ಈ ವರೆಗೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ಶ್ರೀಮತಿ ಯಶೋದಮ್ಮ , 55 ವರ್ಷ, 5.5. ಅಡಿ ಎತ್ತರ, ದುಂಡು ಮುಖ, ಕನ್ನಡ ಬಾಷೆ ಮಾತನಾಡುತ್ತಾರೆ. ಸಾದಾರಣ ಮೈಕಟ್ಟು, ಹಸಿರು ಅರಿಶಿನ ಸೀರೆ ತೊಟ್ಟಿರುತ್ತಾರೆ. ಕಾಣೆಯಾದ ತಾಯಿಯವರನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ;12;02;2022 ರಂದು ಶಂಕರಮ್ಮ ಕೋಂ ಲೇಟ್ ನಾಗರಾಜ ಶಿವನಿ ವಾಸಿ  ರವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಮಗಳು ಭವಾನಿ ಇವಳು ನೀಡಿದ ದೂರಿನಲ್ಲಿ ದಿನಾಂಕ:11-02-2022 ರಂದು ಮನೆಯಿಂದ ಹೊರಗೆ ಹೋದವರು ಇಲ್ಲಿಯವರೆಗೂ ಮನೆಗೆ ಬಾರದೇ ಇದ್ದು ಎಲ್ಲಾ ಕಡೆ ಹುಡುಕಾಡಿದರೂ ಈ ವರೆಗೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ಭವಾನಿ, 19 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ. ಸಾದಾರಣ ಮೈಕಟ್ಟು, ದುಂಡುಮುಖ ಕನ್ನಡ ಮಾತನಾಡುತ್ತಾರೆ. ಹಳದಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಕಾಣೆಯಾದ ತನ್ನ ಮಗಳು ಭವಾನಿ ಇವಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಸಿಂಗಟಗೆರೆ ಪೊಲೀಸ್ ಠಾಣೆ.

ದಿನಾಂಕ;12;02;2022 ರಂದು ರವಿ ಆರ್. ಬಿನ್ ರಾಮಾನಾಯ್ಕ ನಂಜಪ್ಪನಹಳ್ಳಿ ವಾಸಿ ರವರು ನೀಡಿದ ದೂರಿನಲ್ಲಿ ಪಿರ್ಯಾದಿಯ ದಿನಾಂಕ:11/02/2022 ರಂದು ಪಿರ್ಯಾದಿ ಹೆಂಡತಿ ವೀಣಾಬಾಯಿ ಮನೆಯಿಂದ ಹೊರಗೆ ಹೋದವರು ಇಲ್ಲಿಯವರೆಗೂ ಮನೆಗೆ ಬಾರದೇ ಇದ್ದು ಎಲ್ಲಾ ಕಡೆ ಹುಡುಕಾಡಿದರೂ ಈ ವರೆಗೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ವೀಣಾಬಾಯಿ 32 ವರ್ಷ, 5 ಅಡಿ ಎತ್ತರ, ಕಪ್ಪು ಮೈ ಬಣ್ಣ. ಸಾದಾರಣ ಮೈಕಟ್ಟು, ದುಂಡುಮುಖ  ಎಡ ಕೈ ನಲ್ಲಿ ಃಊವಿನ ಅಚ್ಚೆ ಗುರುತು ಇರುತ್ತೆ. ಲಂಬಾಣಿ ಮತ್ತು ಕನ್ನಡ ಭಾಷೆ ಮಾತನಾಡುತ್ತಾರೆ. ಹಸಿರು ಬಣ್ಣ ಹೂವುಗಳ್ಳುಳ್ಳ ನೈಟಿ ಮತ್ತು ಕೆಂಪು ಮತ್ತು ಕಪ್ಪು ಮಿಶ್ರೀತ ಚೆಕ್ಸ್ ಗೆರೆವುಳ್ಳ ಟವಲ್  ಧರಿಸಿರುತ್ತಾರೆ. ಕಾಣೆಯಾದ ತನ್ನ ಹೆಂಡತಿ ವೀಣಾಬಾಯಿ ಇವಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಸಿಂಗಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.    

ಅಕ್ರಮ ಇಸ್ಪೀಟ್ ಜೂಜಾಟ ಪ್ರಕರಣ

ಜಯಪುರ  ಪೊಲೀಸ್ ಠಾಣೆ.

ದಿನಾಂಕ:12-02-2022 ರಂದು ಜಯಪುರ  ಠಾಣಾ ಸರಹದ್ದಿನ ಹೆದ್ಸೆ ಗ್ರಾಮದ ದಿಡಿಗೆ ಕಾಲೋನಿ ಹತ್ತಿರದ ಸರ್ಕಾರಿ ಕಾಡಿನಲ್ಲಿ   ಅಕ್ರಮವಾಗಿ ಇಸ್ಪೀಟ್ ಜುಜಾಟ ಆಡುತ್ತಿದ್ದ ರವೀಂದ್ರ ಟಿ. ಬಿನ್ ಲೇ; ತಿಮ್ಮಯ್ಯ ಈತನನ್ನು ವಶಕ್ಕೆ ಪಡೆದಿದ್ದು 1.] ಸಂಪತ್ ಹೆದ್ಸೆ 2.] ಪುನೀತ್ ನಾರ್ವೆ 3] ಪವನ್ ನಾರ್ವೆ, ಅರೋಪಿ ಜೂಜಾಟಕ್ಕೆ ಬಳಸಿದ 52 ಇಸ್ಪೀಟ್ ಎಲೆಗಳು , 2500/-ರೂ  ನಗದು ಹಣ. ಕಪ್ಪು ಬಣ್ಣದ ಪ್ಲಾಸ್ಟಿಕ್ ಟಾರ್ಪಲ್ ಅಮಾನತ್ತುಪಡಿಸಿಕೊಂಡು ಬಂದು ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶ್ರೀಮತಿ ಜ್ಯೋತಿ  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 13-02-2022 08:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080