ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಸಂಚಾರ ಪೊಲೀಸ್ ಠಾಣೆ.

ದಿನಾಂಕ 13/03/2022 ರಂದು ಪಿರ್ಯಾದಿ ಉಮೇಶ್ ಕೆ.ಟಿ. ಬಿನ್ ತಿಮ್ಮಪ್ಪ , ಬಿ.ಕಾರೇಹಳ್ಳಿ ಬೀರೂರು ಹೋಬಳಿ  ಇವರು ನೀಡಿದ ದೂರಿನಲ್ಲಿ ದಿನಾಂಕ:13/03/2022 ರಂದು ಪಿರ್ಯಾದಿ ಮತ್ತು ಅವರ ದೊಡ್ಡಪ್ಪನ ಮಗ ಧರ್ಮಸ್ಥಳಕ್ಕೆ ಹೋಗಲು ಊರಿನಿಂದ ಎರಡು ಬೈಕಿನಲ್ಲಿ ಹೊರಟ್ಟಿದ್ದು ಅನಂದ ಮತ್ತು ಅವರ ಪತ್ನಿ ಲಕ್ಷ್ಮೀ ಕೆಎ-66-ಕೆ-3986  ಬೈಕಿನಲ್ಲಿ ಹಾಗು ಪಿರ್ಯಾದಿ ಕೆಎ-66-ಕೆ-7168 ಬೈಕಿನಲ್ಲಿ ಹೋಗುತ್ತಿದ್ದಾಗ ಬೆಳಿಗ್ಗೆ  ಸುಮಾರು 06.45 ಗಂಟೆ ಸಮಯದಲ್ಲಿ ಚಿಕ್ಕಮಗಳೂರು ನಗರದ ದಂಟರಮಕ್ಕಿ  ಕೆರೆ ಹತ್ತಿರ ಹೋಗುತ್ತಿದ್ದಾಗ ಕೆಎ-17-ಎನ್-3712 ರ ಕಾರ್ ಚಾಲಕ ಚಿಕ್ಕಮಗಳೂರು ಕಡೆಯಿಂದ ಕಾರ್ ನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅನಂದ ರವರು ಹೋಗುತ್ತಿದ್ದ  ಬೈಕ್ ಡಿಕ್ಕಿ ಹೊಡೆಸಿದ ಪರಿಣಾಮ ಅನಂಧ ರವರಿಗೆ ತೀವ್ರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ಹೆಂಡತಿ ಲಕ್ಷ್ಮೀ 20 ಅಡಿ ಕೆಳಗೆ ಬಿದಿದ್ದು ಅಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಅಪಘಾತಕ್ಕೆ ಕಾರಣನಾದ ಕಾರ್ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಗೋಮಾಂಸ ಮಾರಾಟ ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ:13/03/2022 ರಂದು ನಗರ ಠಾಣಾ ಸರಹದ್ದಿನ ತಮಿಳು ಕಾಲೋನಿಯ ಅಜೀಜ್ ಲೈನ್ ನಲ್ಲಿ ಆರೋಪಿ ಫಾಜೀಲ್ ಟಿಪ್ಪುನಗರ ಚಿಕ್ಕಮಗಳೂರು ವಾಸಿ ಈತನು ಕೆಎ-54-ಕ್ಯೂ-1028 ರ ಸ್ಕೂಟಿಯಲ್ಲಿ ಅಕ್ರಮವಾಗಿ ಗೋ ಮಾಂಸವನ್ನು ಮಾರಾಟ ಮಾಡುತ್ತಿದ್ದು  ದಾಳಿ ವೇಳೆ ಅರೋಪಿ ತಪ್ಪಿಸಿಕೊಂಡು ಓಡಿ ಹೋಗಿದ್ದು  ಆರೋಪಿ ಬಿಟ್ಟು ಹೋದ ಸ್ಕೂಟಿ ಮತ್ತು ಅದರಲ್ಲಿ ಇಟ್ಟಿದ್ದ 20 ಕೆ.ಜಿಯಷ್ಟು ದನದ ಮಾಂಸವನ್ನು  ಅಮಾನತ್ತುಪಡಿಸಿಕೊಂಡು ಬಂದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ  ನಗರ ಠಾಣಾ ಪಿ.ಎಸ್.ಐ. ನಾಗೇಂದ್ರ ನಾಯ್ಕ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಲಿಂಗದಹಳ್ಳಿ ಪೊಲೀಸ್ ಠಾಣೆ.

ದಿನಾಂಕ 13/03/2022 ರಂದು ಪಿರ್ಯಾದಿ ಶ್ರೀಮತಿ ವಿಜಯ ಕೊಂ ನಾಗರಾಜ್,  ಸೈದುಖಾನ್ ಗ್ರಾಮ ಲಿಂಗದಹಳ್ಳಿ  ಇವರು ನೀಡಿದ ದೂರಿನಲ್ಲಿ ದಿನಾಂಕ 11/03/2022 ರಂದು ಪಿರ್ಯಾದಿಯ ಮಗಳು ಸಿಂಧು, 22 ವರ್ಷ ಇವಳು ಬೆಳಿಗ್ಗೆ 8.30 ಗಂಟೆಗೆ ಮನೆಯಲ್ಲಿದ್ದು , ನಾವು ಕೂಲಿ ಕೆಲಸಕ್ಕೆ ಹೋಗಿ ವಾಪಾಸ್ಸು ಬಂದು ನೋಡಲಾಗಿ ಸಿಂಧು ಮನೆಯಲ್ಲಿ ಇರುವುದಿಲ್ಲಾ. ಎಲ್ಲಾ ಕಡೆ ಹುಡುಕಾಡಿದರೂ ಸಹ ಈ ವರೆಗೂ ನನ್ನ ಮಗಳೂ ಪತ್ತೆ ಅಗಿಲ್ಲವೆಂದು ಕಾಣೆಯಾಗಿರುವ ತನ್ನ ಮಗಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ಕಳಸ ಪೊಲೀಸ್ ಠಾಣೆ.

ದಿನಾಂಕ:12/03/2022 ರಂದು ಕಳಸ ಠಾಣಾ ಸರಹದ್ದಿನ ಹೊರನಾಡು ಗ್ರಾಮದ ಮಳಲಗದ್ದೆ ಎಂಬಲ್ಲಿ ಮಧುಪ್ರಸಾದ್  ಬಿನ್ ರವಿರಾಜ್ ಜೈನ್ ಎಂಬುವವರ ಬಾಬ್ತು ಪರಂಪರ ರೆಸಾರ್ಟ್ ನಲ್ಲಿ ಅಕ್ರಮವಾಗಿ ಪ್ರವಾಸಿಗರಿಗೆ ಮದ್ಯವನ್ನು ಕುಡಿಯಲು ಮಾರಾಟ ಮಾಡುತ್ತಿದ್ದು, ಆರೋಪಿತರ ರೆಸಾರ್ಟ್ ನಲ್ಲಿ ಪ್ರವಾಸಿಗರಿಗೆ ಕುಡಿಯಲು ನೀಡಿದ  ಮದ್ಯವನ್ನು  ಅಮಾನತ್ತುಪಡಿಸಿಕೊಂಡು ಬಂದು ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ  ಕುದುರೆಮುಖ ಸಿ.ಪಿ.ಐ. ಸಿ.ಎನ್. ರಮೇಶ್ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 13-03-2022 08:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080