ಅಭಿಪ್ರಾಯ / ಸಲಹೆಗಳು

ಮರಳು ಕಳ್ಳತನ ಪ್ರಕರಣ

ಎನ್.ಆರ್. ಪುರ ಪೊಲೀಸ್ ಠಾಣೆ.

ದಿನಾಂಕ:13/04/2022 ರಂದು ಎನ್.ಆರ್.ಪುರ ಠಾಣಾ ಸರಹದ್ದಿನ  ಬಿ.ಹೆಚ್. ಕೈಮರದ ಬಳಿ ಪಿರ್ಯಾದಿ ಮತ್ತು ಸಿಬ್ಬಂದಿಯವರು ಕರ್ತವ್ಯದಲ್ಲಿರುವ ಸಮಯದಲ್ಲಿ  ಮೂಡಬಾಗಿಲು ವಾಸಿ ಬಿಜು ಬಿನ್ ಜೋಸ್ ಈತನ ಟ್ಯಾಕ್ಟರ್ ನಂ ಕೆಎ-18-03-ಟಿಸಿ-21-22 ಮತ್ತು ಟ್ರೈಲರ್  ನಂಬರ್  ಕೆಎ-18-ಟಿ-1327 ರಲ್ಲಿ  ರಮೇಶ ಬಿನ್ ದುರ್ಗಪ್ಪ, ಈತನು ಚಾಲಕನಾಗಿ ಅರಳಿಕೊಪ್ಪದ ಹಳ್ಳದಿಂದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಹೋಗುತ್ತಿದ್ದು, ಅರೋಪಿತರನ್ನು  ವಶಕ್ಕೆ ಪಡೆದು ಅರೋಫಿತನು ಮರಳು ಸಾಗಾಣಿಕೆಗೆ ಬಳಸಿದ ಟ್ಯಾಕ್ಟರ್ ಮತ್ತು ಟ್ರೈಲರ್ ನ್ನು ಮರಳು ಸಮೇತ ವಶಪಡಿಸಿಕೊಂಡು  ಬಂದು ಎನ್.ಆರ್. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಎನ್.ಆರ್. ಪುರ ವೃತ್ತ ಸಿ.ಪಿ.ಐ. ವಸಂತ ಎಸ್ ಭಾಗ್ವತ್, ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ಲಕ್ಕವಳ್ಳಿ ಪೊಲೀಸ್ ಠಾಣೆ.

ದಿನಾಂಕ; 12/04/2022 ರಂದು ಲಕ್ಕವಳ್ಳಿ ಠಾಣಾ ಸರಹದ್ದಿನ ಬಾವಿಕೆರೆ ಗ್ರಾಮದ ಸರ್ಕಾರಿ ಪ್ರೌಡಶಾಲೆಯ ಹತ್ತಿರ ಪಾಂಡು ಬಿನ್ ಲಕ್ಷ್ಮಣಗೌಡ ಎಂಬುವರು ತನ್ನ ವಾಸದ ಮನೆಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದು ಆರೋಪಿತನನ್ನು ವಶಕ್ಕೆ ಪಡೆದು, ಅಕ್ರಮವಾಗಿ  ಹೊಂದಿದ್ದ 90 ಎಂ.ಎಲ್ ನ 37 ಟೆಟ್ರಾಪ್ಯಾಕ್ ಅಂದಾಜು ಬೆಲೆ ರೂ 1299/- ಅಗಿದ್ದು, ಸದರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶಂಭುಲಿಂಗಯ್ಯ, ಎಂ.ಈ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಹರಿಹರಪುರ ಪೊಲೀಸ್ ಠಾಣೆ.

ದಿನಾಂಕ:12/04/2022 ರಂದು ಪಿರ್ಯಾದಿ ಶ್ರೀಮತಿ ಶಬೀನಾ ಕೋಂ ದಿಲ್ದರ್ ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ,  ದಿನಾಂಕ:11/04/2022 ರಂದು ಮನೆಗೆ ಬೀಗಹಾಕಿಕೊಂಡು ಕೊಪ್ಪಕ್ಕೆ ಹೋಗಿದು, ದಿನಾಂಕ;12/04/2022 ರಂದು ವಾಪಾಸ್ಸು ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಬೀಗವನ್ನು ಮುರಿದು ಮನೆಯಲ್ಲಿ ಇಟ್ಟಿದ್ದ 24 ಗ್ರಾಂ ನ ಒಂದು ಚಿನ್ನದ ನಕ್ಲೇಸ್, 8 ಗ್ರಾಂ ನ ಒಂದು ಚಿನ್ನದ ಸರ, 2 ಗ್ರಾಂ ನ 4 ಚಿನ್ನದ ಉಂಗುರಗಳು  ಒಟ್ಟು 1,60,000 ರೂ ಬೆಲೆಬಾಳುವ ಚಿನ್ನದ ವಡೆಗಳು ಹಾಗೂ 1,12,250/- ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳರನ್ನು ಪತ್ತೆ ಮಾಡಿ ಕಳ್ಳತನವಾಗಿರುವ ವಡವೆಗಳು ಹಾಗೂ ನಗದು ಹಣವನ್ನು ಪತ್ತೆ ಮಾಡಿ ಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 13-04-2022 06:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080