ಅಭಿಪ್ರಾಯ / ಸಲಹೆಗಳು

ಅಜ್ಜಂಪುರ   ಪೊಲೀಸ್  ಠಾಣೆ

ಅಕ್ರಮ ಮದ್ಯ ಮಾರಾಟ ಹಾಗೂ ಕೊವಿಡ್ 19 ನಿಯಮ ಉಲ್ಲಂಘನೆ  ಪ್ರಕರಣ

ದಿನಾಂಕ:12/05/2021 ರಂದು ಅಜ್ಜಂಪುರ  ಠಾಣಾ ವ್ಯಾಪ್ತಿಯ ಕೊರೋನಾ ಸಂಬಂಧ ಗಸ್ತು ಮಾಡುತ್ತಿರುವಾಗ ಸಿರಗಲಿಪುರ ಮಣಿ ಎಂಬುವವರು  ತಮ್ಮ ಮನೆಯ ಬಳಿ  ಸಾರ್ವಜನಿಕರನ್ನು  ಗುಂಪುಕಟ್ಟಿಕೊಂಡು ಕೊವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆಂದು  ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ  ಆರೋಪಿಯು ಕೋವಿಡ್ ನಿಯಮದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಸಾರ್ವಜನಿಕರನ್ನು ಗುಂಪು ಸೇರಿಸಿಕೊಂಡು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು ,ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಅರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್ಐ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

 

ಜಯಪುರ   ಪೊಲೀಸ್  ಠಾಣೆ

ಅಕ್ರಮ ಮದ್ಯ ಮಾರಾಟ  ಪ್ರಕರಣ . 

ದಿನಾಂಕ:12 /05/2021 ರಂದು ಜಯಪುರ  ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಮಾಡುತ್ತಿರುವಾಗ ಬೈರೇದೇವರು ನಾಯ್ಕನಕಟ್ಟೆ ವಾಸಿಯಾದ ಗೋಪಾಲ  ಎಂಬುವರು ಅವರ ಮನೆಯ  ಮುಂದೆ   ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಗೋಪಾಲರವರು   ಮದ್ಯವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದು ಆರೋಪಿಯು ಬಳಿಯಿದ್ದ ಒಟ್ಟು 316/-  ರೂ ಬೆಲೆಯ ಮದ್ಯವನ್ನು ಹಾಗೂ ಮದ್ಯ ಮಾರಾಟದಿಂದ ಬಂದ 300 ರೂ ಹಣವನ್ನು  ಅಮಾನತ್ತುಪಡಿಸಿಕೊಂಡು ಬಂದು ಅರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್ಐ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಬಸವನಹಳ್ಳಿ   ಪೊಲೀಸ್  ಠಾಣೆ

ಅಕ್ರಮ ಜೂಜಾಟ ಹಾಗೂ ಕೊವಿಡ್ 19 ನಿಯಮ ಉಲ್ಲಂಘನೆ  ಪ್ರಕರಣ

ದಿನಾಂಕ:12/05/2021 ರಂದು ಬಸವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಕೊರೋನಾ ಸಂಬಂಧ ಗಸ್ತು ಮಾಡುತ್ತಿರುವಾಗ ರಾಮನಹಳ್ಳಿ ರತ್ನಗಿರಿ ಬೋರೆಗೆ ಹೋಗುವ ರಸ್ತೆ ಸಮೀಪ 3-4 ಜನರು   ಗುಂಪುಕಟ್ಟಿಕೊಂಡು ಕೊವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಇಸ್ಪೀಟ್ ಜುಜಾಟವಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ  ರಾಮನಹಳ್ಳಿ ರತ್ನಗಿರಿ ಬೋರೆಗೆ ಹೋಗುವ ರಸ್ತೆ ಸಮೀಪ 04 ಜನರು   ಇಸ್ಪೀಟ್ ಜೂಜಾಟವಾಡುತ್ತಿದ್ದು 4 ಜನರನ್ನು ವಶಕ್ಕೆ ಪಡೆದು ಅವರ ಬಳಿಯಿದ್ದ 52 ಇಸ್ಪೀಟ್ ಎಲೆಗಳು, ನಗದು ಹಣ 2110  /-ರೂ ಹಾಗೂ ಒಂದು ನ್ಯೂಸ್ ಪೇಪರ್ ನ್ನು ವಶಕ್ಕೆ  ಪಡೆದು  ಅರೋಪಿತರ  ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

 

ಕುದುರೆಮುಖ   ಪೊಲೀಸ್  ಠಾಣೆ

ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಹಾಗೂ ಕೊವಿಡ್ 19 ನಿಯಮ ಉಲ್ಲಂಘನೆ  ಪ್ರಕರಣ

ದಿನಾಂಕ:12/05/2021 ರಂದು ಕುದುರೆಮುಖ  ಠಾಣಾ ವ್ಯಾಪ್ತಿಯಲ್ಲಿ ಕೊರೋನಾ ಸಂಬಂಧ ಗಸ್ತು ಮಾಡುತ್ತಿರುವಾಗ ಮುಳ್ಳೊಡಿ ರಸ್ತೆಯ  ಗೂಳ್ಯ ಬಳಿ  ಹಲವಾರು ಜನರು ಸೇರಿಕೊಂಡು   ಕೊವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ವಾಲಿಬಾಲ್  ಆಡುತ್ತಿದ್ದಾರೆಂದು   ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಹೋಗಿ ನೋಡಲಾಗಿ 12-13 ಜನರು ಸೇರಿಕೊಂಡು ವಾಲಿಬಾಲ್ ಆಡುತ್ತಿದ್ದು ನಮ್ಮಗಳನ್ನು ನೋಡಿ 2 ಜನರು ಓಡಿಹೋಗಿದ್ದು ಉಳಿದ 11 ಜನರನ್ನು  ವಶಕ್ಕೆ ಪಡೆದಿದ್ದು ಓಡಿಹೋದ ನಾಗೇಶನು ಜೀಪಿನ ಗ್ಲಾಸಿಗೆ ಕಲ್ಲಿನಿಂದ ಹೊಡೆದು  ನಿಲ್ಲು ಎಂದು ತಿಳಿಸಿದರೂ ಸಹ ನಿಲ್ಲದೆ ಓಡಿಹೋಗಿರುತ್ತಾನೆ . ಕೊವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಗುಂಪುಸೇರಿಕೊಂಡು ವಾಲಿಬಾಲ್  ಆಡುತ್ತಿದ್ದ   ಹಾಗೂ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿ ಪೊಲೀಸ್ ಜೀಪನ್ನು ಜಖಂಗೊಳಿಸಿದ ಅರೋಪಿತರ  ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

 

ಮೂಡಿಗೆರೆ    ಪೊಲೀಸ್  ಠಾಣೆ

ಅಕ್ರಮ ಮದ್ಯ ಮಾರಾಟ  ಪ್ರಕರಣ .

ದಿನಾಂಕ:12 /05/2021 ರಂದು ಮೂಡಿಗೆರೆ ಪಟ್ಟಣದ ಕೃಷ್ಣಾಪುರ ಗ್ರಾಮದ ಟಂಕೇಗೌಡ @ಕೇಶವ  ಎಂಬುವರು ಅವರ ಮನೆಯ  ಮುಂದಿನ ಕಾರ್ ಶೆಡ್ ಮುಂಭಾಗದಲ್ಲಿ   ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಟಂಕೇಗೌಡ ರವರು ಅಕ್ರಮವಾಗಿ    ಮದ್ಯವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದರಿಂದ ಅರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್ಐ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

 

ಮೂಡಿಗೆರೆ  ಪೊಲೀಸ್  ಠಾಣೆ

ಅಕ್ರಮ ಮದ್ಯ ಮಾರಾಟ ಹಾಗೂ ಕೊವಿಡ್ 19 ನಿಯಮ ಉಲ್ಲಂಘನೆ  ಪ್ರಕರಣ

ದಿನಾಂಕ:12/05/2021 ರಂದು ಮೂಡಿಗೆರೆ  ಠಾಣಾ ವ್ಯಾಪ್ತಿಯಲ್ಲಿ ಕೊರೋನಾ ಸಂಬಂಧ ಗಸ್ತು ಮಾಡುತ್ತಿರುವಾಗ ಹಳೆಮೂಡಿಗೆರೆ ಗ್ರಾಮದ ಶಾಂತಿನಗರದ ರಿಲಯನ್ಸ್ ಟವರ್ ಪಕ್ಕದ ಮನೆಯ  ಬಳಿಜನರನ್ನು ಗುಂಪಾಗಿ ಸೇರಿಸಿಕೊಂಡು  ಕೊವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆಂದು  ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಒಬ್ಬ ಮಹಿಳೆಯು  ಕೋವಿಡ್ ನಿಯಮದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಸಾರ್ವಜನಿಕರನ್ನು ಗುಂಪು ಸೇರಿಸಿಕೊಂಡು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು ಕಂಡುಬಂದಿದ್ದು ಆಕೆಯನ್ನು ವಶಕ್ಕೆ ಪಡೆದು ಹೆಸರು ಕೇಳಲಾಗಿ ಜಲಜಾಕ್ಷಿ ಎಂದು ತಿಳಿಸಿದ್ದು ,ಆಕೆಯ ಬಳಿಯಿದ್ದ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಅರೋಪಿತಳವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್ಐ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

 

ನ.ರಾ.ಪುರ  ಪೊಲೀಸ್  ಠಾಣೆ

ಕೊವಿಡ್ 19 ನಿಯಮ ಉಲ್ಲಂಘನೆ  ಪ್ರಕರಣ

ದಿನಾಂಕ:12/05/2021 ರಂದು ನ.ರಾ.ಪುರ ಠಾಣಾ ವ್ಯಾಪ್ತಿಯಲ್ಲಿ  ಕೊರೋನಾ ಸಂಬಂಧ ಗಸ್ತು ಮಾಡುತ್ತಿರುವಾಗ ಬೈರಾಪುರ ಗ್ರಾಮದ ಆಲ್ದಾರದಲ್ಲಿ ಪುಷ್ಪಲತಾ ಹಾಗೂ ಆಕೆಯ ಗಂಡ ನಾಗರಾಜ್ ರವರು ಸರ್ಕಾರವು ಹೊರಡಿಸಿರುವ ಕೊವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ತಮ್ಮ ದಿನಸಿ ಅಂಗಡಿಯನ್ನು ತೆರೆದು ಸಾರ್ವಜನಿಕರನ್ನು ಗುಂಪುಸೇರಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಪುಷ್ಪಲತಾ ಮತ್ತು ನಾಗರಾಜುರವರು ಸಂಜೆ ಸುಮಾರು 4.20 ಗಂಟೆ ಸಮಯದಲ್ಲಿ ತಮ್ಮ ದಿನಸಿ ಅಂಗಡಿಯನ್ನು ತೆರೆದು ಸಾರ್ವಜನಿಕರನ್ನು ಗುಂಪುಸೇರಿಸಿಕೊಂಡು ವ್ಯಾಪಾರ ಮಾಡುತ್ತಿದ್ದು ಕಂಡುಬಂದಿದ್ದರಿಂದ ಸರ್ಕಾರವು ಹೊರಡಿಸಿರುವ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿರುವ   ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 13-05-2021 07:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080