ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ.

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ:13-05-2022 ರಂದು ಅಜ್ಜಂಪುರ ಪೊಲೀಸ್ ಠಾಣಾ ಸರಹದ್ದಿನ ಗ್ರಾಮದಲ್ಲಿ ಎಸ್.ಆರ್. ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ಅನಂದಮೂರ್ತಿ ಬಿನ್ ರಂಗಪ್ಪ, ಚನ್ನಾಫುರ ಗ್ರಾಮ ವಾಸಿ ಈತನು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಅರೋಪಿತನನ್ನು ವಶಕ್ಕೆ ಪಡೆದು ಅರೋಪಿತನ ವಶದಲ್ಲಿ ಇದ್ದ 12 ಲೀಟರ್ 780 ಎಂ.ಎಲ್. ನ  ಮದ್ಯವನ್ನು ಮದ್ಯದ ಅಂದಾಜು ಬೆಲೆ 6622/- ರೂ ಗಳಾಗಿರುತ್ತೆ  ಹಾಗೂ ಆರೋಪಿ ಮದ್ಯ ಮಾರಾಟದಿಂದ ಸಂಗ್ರಹಿಸಿದ  1250/- ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡಿದ್ದು, ಆರೋಪಿತನ ವಿರುದ್ದ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಡಿ.ಸಿ.ಐ.ಬಿ. ಪಿಎಸ್ಐ ಗೋವಿಂದನಾಯ್ಕ ಬಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಮಟ್ಕಾ ಜೂಜಾಟ ಪ್ರಕರಣ.

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ:12-05-2022 ರಂದು ತರೀಕೆರೆ ಪೊಲೀಸ್ ಠಾಣಾ ಸರಹದ್ದಿನ ತರೀಕೆರೆ ಟೌನ್ ಖಾಸಗಿ ಬಸ್ ನಿಲ್ದಾಣದ ಬಳಿ  ಮಹಮ್ಮದ್ ಗೌಸ್ ಬಿನ್ ಗೌಸ್ ಮೊಹಿದ್ದಿನ್, ನಾಗೇನಹಳ್ಳಿ ತರೀಕೆರೆ  ವಾಸಿ ಈತನು ಅಕ್ರಮವಾಗಿ ಮಟ್ಕಾ ಜೂಜಾಟ ಆಡಿಸುತ್ತಿದ್ದು, ಅರೋಪಿತನನ್ನು ವಶಕ್ಕೆ ಪಡೆದು ಅರೋಪಿತನು ಸಾರ್ವಜನಿಕರಿಂದ ಸಂಗ್ರಹಿಸಿದ ನಗದು ಹಣ 1730/- ರೂ ಗಳಾಗಿರುತ್ತೆ  ಹಾಗೂ ಒಂದು ಬಾಲ್ ಪೆನ್ನು, ಒಂದು ಮಟ್ಕಾ ಚೀಟಿಯನ್ನು ಅಮಾನತ್ತುಪಡಿಸಿಕೊಂಡಿದ್ದು, ಆರೋಪಿತನ ವಿರುದ್ದ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ತರೀಕೆರೆ ಪಿಎಸ್ಐ ಚಂದ್ರಮ್ಮ ವೈ.ಎಂ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ  ಪ್ರಕರಣ.

ಶೃಂಗೇರಿ ಪೊಲೀಸ್ ಠಾಣೆ.

ದಿನಾಂಕ:12-05-2022 ರಂದು ಸದಾನಂದ ಪಿ.ಆರ್. ಬಿನ್ ರಂಗೇಗೌಡ ಆನೆಗುಂದ ಶೃಂಗೇರಿ ವಾಸಿ ರವರು ನೀಡಿದ ದೂರೇನೆಂದರೆ, ಪಿರ್ಯಾದುದಾರರ ತಂದೆ ರಂಗೇಗೌಡ ಪಿ.ಎಸ್. ಇವರು ವಯೊಸಹಜ ಖಾಯಿಲೆಯಿಂದ ಬಳಲುತ್ತಿದ್ದು, ದಿನಾಂಕ;11-05-2022 ರಂದು ಮನೆಯಿಂದ ವಾಕ್ ಗೆ  ಹೋದವರು ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಈವರೆಗೂ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ತಮ್ಮ ತಂದೆ ರಂಗೇಗೌಡ ಇವರನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ  ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಬೀರೂರು ಪೊಲೀಸ್ ಠಾಣೆ.

ದಿನಾಂಕ;12-05-2022 ರಂದು ರಘು ಬಿ.ಹೆಚ್. ಬಿನ್  ಹಾಲಪ್ಪ  ಬೀರೂರು ಟೌನ್ ವಾಸಿ ರವರು ನೀಡಿದ ದೂರೇನೆಂದರೆ, ಪಿರ್ಯಾದುದಾರರ ಹೆಂಡತಿ ರಶ್ಮಿ ಟಿ.ಪಿ.  ತನ್ನ ಮಗಳು ಚರಣ್ಯ ಳೊಂದಿಗೆ ದಿನಾಂಕ;11/05/2022 ರಂದು ರಾತ್ರಿ 8-00 ಗಂಟೆ ಸಮಯಕ್ಕೆ ಹೋದವಳು ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಈವರೆಗೂ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ತನ್ನ ಹೆಂಡತಿ ರಶ್ಮಿ ಟಿ.ಪಿ. 23 ವರ್ಷ, 4.5 ಅಡಿ ಎತ್ತರ,   ಎಣ್ಣೆಗೆಂಪು ಬಣ್ಣ, ದುಂಡುಮುಖ, ಹಳದಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ. 2.] ಮಗಳು ಬಿ.ಆರ್. ಚರಣ್ಯ , 3 1/2  ವರ್ಷ 3.0 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ , ದುಂಡುಮುಖ, ನೀಲಿ ಪುಲ್ ಸ್ಟೆಟರ್, ನಿಳಿ ಬಣ್ಣದ ಜಿನ್ಸ್ ಪ್ಯಾಂಟ್ ಧರಿಸಿರುತ್ತಾಳೆ. ಕಾಣೆಯಾಗಿರುವ ಹೆಂಡತಿ ರೂಪ ಮತ್ತು ನನ್ನ ಮಗಳು ಚರಣ್ಯ  ಇವರುಗಳನ್ನು  ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ  ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 13-05-2022 06:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080