ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಲಿಂಗದಹಳ್ಳಿ ಪೊಲೀಸ್ ಠಾಣೆ

ದಿನಾಂಕ:13/09/2021 ರಂದು ಮೋಹನ ಬಿನ್ ಲೋಕೇಶಪ್ಪರವರು ನೀಡಿದ ದೂರಿನಲ್ಲಿ ದಿನಾಂಕ 12-09-2021 ರಂದು ಹಳ್ಳಿಗಳ ಮೇಲೆ ನನ್ನ ಬಾವ ಜ್ಞಾನಮೂರ್ತಿ  ಹಾಗೂ ಅಕ್ಕನ ಮಗ ಲಿಖಿತ್ ರವರು ಕೆಎ-18 ಬಿ-5840 ಆಟೋದಲ್ಲಿ ಹಳ್ಳಿಗಳ ಮೇಲೆ  ತರಕಾರಿ ವ್ಯಾಪಾರ ಮಾಡಿಕೊಂಡು ಸಂಜೆ ಸುಮಾರು 04-30 ಗಂಟೆ ಸಮಯದಲ್ಲಿ ತರೀಕೆರೆ -ಲಿಂಗದಹಳ್ಳಿ ರಸ್ತೆಯ ನಂದಿಗೇಟ್- ಭೈರಾಪುರ ಗೇಟ್ ಮದ್ಯೆ ಇರುವ ನಿಂಗಪ್ಪರವರ ಅಡಿಕೆ ತೋಟದ ಹತ್ತಿರ ರಸ್ತೆಯ ಎಡಬದಿಯಲ್ಲಿ ಆಟೋವನ್ನು ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ತರೀಕೆರೆ ಕಡೆಯಿಂದ ಬಂದ ಕೆಎ-16 ಪಿ-0438 ನ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಆಟೋಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ಆಟೋದಲ್ಲಿದ್ದ ನನ್ನ ಬಾವ ಜ್ಞಾನಮೂರ್ತಿರವರಿಗೆ ಎರಡು ಕಾಲುಗಳಿಗೆ, ಮೈಕೈಗೆ ತೀವ್ರತರಹದ ಪೆಟ್ಟಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಲಿಖಿತನಿಗೂ ಸಹ ಕಾಲುಗಳಿಗೆ, ಮೂಗಿನ, ಬಾಯಿಯ ಬಳಿ ಪೆಟ್ಟಾಗಿರುತ್ತೆ. ಕಾರಿನ ಚಾಲಕ ವಿರೂಪಾಕ್ಷ, ಚಿಕ್ಕಬ್ಯಾಲದಕೆರೆ ವಾಸಿರವರ ವಿರುದ್ದ  ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಲಿಂಗದಹಳ್ಳಿ ಠಾಣೆಯಲ್ಲಿ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಜೂಜಾಟ  ಪ್ರಕರಣ

ಗೋಣಿಬೀಡು  ಪೊಲೀಸ್ ಠಾಣೆ

ದಿನಾಂಕ:12/09/2021 ರಂದು ಬೆಳಗ್ಗೆ 05-45 ಗಂಟೆ ಸಮಯದಲ್ಲಿ ಯು.ಹೊಸಳ್ಳಿ ಗ್ರಾಮದ ಸರ್ಕಾರಿ ಶಾಲಾ ಕಟ್ಟಡದ ಮುಂಭಾಗದ ಮೈದಾನದಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿದ್ದ 1) ವೆಂಕಟೇಶ 2) ರವಿಕುಮಾರ 3) ಪ್ರದ್ದುಮನ್ಯ 4) ಮಹೇಶ ಇವರುಗಳನ್ನು ವಶಕ್ಕೆ ಪಡೆದು ಅವರುಗಳ ಬಳಿಯಿದ್ದ 1) ಒಂದು ಟಾರ್ಪಲ್ 2) ಒಂದು ಮೇಣದ ಬತ್ತಿ 3)52 ಇಸ್ಪೀಟ್ ಎಲೆಗಳು 4) 2,810/- ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡು ಆರೋಪಿಗಳ ವಿರುದ್ದ  ಗೋಣಿಬೀಡು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಧನಂಜಯ ಎಂ.ಆರ್. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 13-09-2021 06:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080