ಅಭಿಪ್ರಾಯ / ಸಲಹೆಗಳು

ಅಕ್ರಮ ಮಟ್ಕಾ ಜೂಜಾಟ ಪ್ರಕರಣ

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ:12/10/2021 ರಂದು ತರೀಕೆರೆ ಪಟ್ಟಣದ ಕೋಡಿಕ್ಯಾಂಪ್ ಹತ್ತಿರ ರಘು ಕ್ಯಾಂಟಿನ್ ಮುಂಭಾಗದಲ್ಲಿ ಕೃಷ್ಣ ಬಿನ್ ತಿಮ್ಮಾಬೋವಿ ವಾಸ ಬೋವಿ ಕಾಲೋನಿ, ತರೀಕೆರೆ ಟೌನ್ ವಾಸಿ ಈತನು ಅಕ್ರಮವಾಗಿ ಮಟ್ಕಾ ಜೂಜಾಡಿಸುತ್ತಿದ್ದವನನ್ನು  ವಶಕ್ಕೆ ಪಡೆದು  ಆರೋಪಿಯು ಮಟ್ಕಾ ಜೂಜಾಡಲು ಸಾರ್ವಜನಿಕರಿಂದ ಸಂಗ್ರಹಿಸಿದ 1210/- ರೂ  ರೂ ನಗದು ಹಣವನ್ನು ಮತ್ತು ಕೃತ್ಯಕ್ಕೆ ಬಳಸಿದ ಕೆಎ-66-ಜೆ-0878 ಹಿರೋಹೊಂಡಾ ಬೈಕ್, ಮಟ್ಕಾ ಚೀಟಿ , ಒಂದು ಬಾಲ್ ಪೆನ್ ನನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಫಿ ವಿರುದ್ದ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಡಿ.ಸಿ.ಐ.ಬಿ ವಿಭಾಗದ ಎ.ಎಸ್.ಐ. ವಿರೇಂದ್ರ ಹೆಚ್.ಡಿ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ನಗರ ಪೊಲೀಸ್ ಠಾಣೆ.

ದಿನಾಂಕ:12/10/2021 ರಂದು ಚಿಕ್ಕಮಗಳೂರು ನಗರದ ತೊಗರಿಯಂಕಲ್  ಸರ್ಕಲ್ ಬಳಿ ಶ್ರೀಧರ ಬಿನ್ ನಕುರ ವಾಸ ನೇಕಾರ ಬೀದಿ ಚಿಕ್ಕಮಗಳೂರು ಈತನು ಅಕ್ರಮವಾಗಿ ಮಟ್ಕಾ ಜೂಜಾಡಿಸುತ್ತಿದ್ದವನನ್ನು  ವಶಕ್ಕೆ ಪಡೆದು  ಆರೋಪಿಯು ಮಟ್ಕಾ ಜೂಜಾಡಲು ಸಾರ್ವಜನಿಕರಿಂದ ಸಂಗ್ರಹಿಸಿದ 1100/- ರೂ  ರೂ ನಗದು ಹಣವನ್ನು, ಮಟ್ಕಾ ಚೀಟಿ, ಒಂದು ಬಾಲ್ ಪೆನ್ ನನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಫಿ ವಿರುದ್ದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಡಿ.ಸಿ.ಐ.ಬಿ ವಿಭಾಗದ ಎ.ಎಸ್.ಐ. ರಂಗಯ್ಯ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಅಲ್ದೂರು ಪೊಲೀಸ್ ಠಾಣೆ.

ದಿನಾಂಕ:13/10/2021 ರಂದು ವಸ್ತಾರೆ ಗ್ರಾಮದ ವಾಸಿ ಹರೀಶಕುಮಾರ ವಿ.ಕೆ. ಬಿನ್ ಕೃಷ್ಣಶೆಟ್ಟಿ ರವರು ನೀಡಿದ ದೂರಿನಲ್ಲಿ ದಿನಾಂಕ:12/10/2021 ರಂದು ಪಿರ್ಯದಿಯವರ ತಂದೆ ಕೃಷ್ಣಶೆಟ್ಟಿ (72) ರವರು ಮದ್ಯಾಹ್ನ ಸುಮಾರು 3.00 ಗಂಟೆಯ ಸಮಯದಲ್ಲಿ ಮನೆಯಿಂದ ಹೊರಗಡೆ ಹೋದವರು ಇಲ್ಲಿಯವರೆಗೂ ವಾಪಸ್ ಮನೆಗೆ ಬಂದಿರುವುದಿಲ್ಲ. ಇವರ ಚಹರೆ ಬಿ ಕೃಷ್ಣ ಶೆಟ್ಟಿ ಬಿನ್ ಬಾಲಶೆಟ್ಟಿ, 153 ಸೆಂ.ಮೀ ಎತ್ತರ, ಗೋದಿ ಬಣ್ಣ ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿರುತ್ತಾರೆ.  ಕಾಣೆಯಾಗಿರುವ ತನ್ನ ತಂದೆ ಯನ್ನು ಪತ್ತೆ ಮಾಡಿಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ಅಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ; 13/10/2021 ರಂದು ಚಿಕ್ಕಮಗಳೂರು ನಗರ ಕಲ್ಯಾಣ ನಗರ ವಾಸಿ  ಪಿರ್ಯಾದಿ ದರ್ಶನ್ ಎಂ.ಬಿ.  ರವರು ನೀಡಿದ ದೂರಿನಲ್ಲಿ ದಿನಾಂಕ 09/10/2021 ರಂದು ತಮ್ಮ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು, ದಿನಾಂಕ;12/10/2021 ರಂದು ವಾಪಾಸ್ಸು ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಮುಂಬಾಗಿಲನ್ನು ಮುರಿದು ಮನೆಯಲ್ಲಿ ಇಟ್ಟಿದ್ದು 10 ಗ್ರಾಂ ಚಿನ್ನದ ಸರ 8 ಗ್ರಾಂ ನ 2 ಉಂಗುರ , 10 ಗ್ರಾಂ ಒಂದು ಜೊತೆ ಓಲೆ ಹಾಗೂ 10000/- ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿ ಸ್ವತ್ತಿನ ಮೌಲ್ಯ  ಒಟ್ಟು 1,10,000/- ರೂ ಗಳಾಗಿದ್ದು ಕಳುವಾಗಿರುವ ಸ್ವತ್ತನ್ನು ಮತ್ತು ನಗದನ್ನು ಪತ್ತೆ ಮಾಡಿಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣ

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ 13/10/2021 ರಂದು ಹೊಸಪೇಟೆ ಗ್ರಾಮದ ಅರಣ್ಯ ವಸತಿಗೃಹದಲ್ಲಿ ಪಿರ್ಯಾದಿ ಶ್ರೀ ಸುನೀಲ್ ಎಂ. ನಲ್ಲಿರುವಾಗ ಅರೋಪಿತರಾದ ಪುನೀತ್ ಮತ್ತು ನಿಧಿ ಎಂಬುವರು ಪಿರ್ಯಾಧುದಾರರು ಅರೋಪಿತರ ಮೇಲೆ ಅರಣ್ಯ ಕಾಯ್ದೆ ಪ್ರಕರಣ ದಾಖಲಿಸಿದಕ್ಕೆ  ಅರಣ್ಯ ಇಲಾಖೆ ವಸತಿಗೃಹದ ಬಳಿ ಗಲಾಟೆ ಮಾಡಿ ಪಿರ್ಯಾದಿ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಯವರಿಗೆ ನಿಂದಿಸಿ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿ ಕರ್ತವ್ಯಕ್ಕೆ ಹೋಗಲು ಬಿಡದೇ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 13-10-2021 07:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080