ಅಭಿಪ್ರಾಯ / ಸಲಹೆಗಳು

ಗ್ರಾಮಾಂತರ ಪೊಲೀಸ್ ಠಾಣೆ.
ಅಕ್ರಮ ಮಧ್ಯ ಮಾರಾಟ.
ದಿನಾಂಕ:12/11/2021ರಂದು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕನಹಳ್ಳಿ ಗ್ರಾಮದಲ್ಲಿ ಮುಳ್ಳೇಗೌಡ ಎಂಬುವರು ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದು, ಸಮವಸ್ತ್ರದಲ್ಲಿದ್ದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೋಡಿ ಓಡಲು ಪ್ರಯತ್ನಿಸಿದ ಮುಳ್ಳೇಗೌಡನನ್ನು ಮಧ್ಯ ಮಾರಾಟದ ಬಗ್ಗೆ ಪರವಾನಗಿ ಕೇಳಲಾಗಿ ಅಸಾಮಿಯು ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದ್ದರಿಂದ ಪಂಚರ ಸಮಕ್ಷಮ 90 ಎಂ.ಎಲ್.ನ 10 ಒರಿಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿ ಟೆಟ್ರಾ ಪ್ಯಾಕ್ಗಳನ್ನು  ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತಾರೆ, ಇದರ ಒಟ್ಟು ಅಂದಾಜು ಮೌಲ್ಯ 351-00 ಆಗಿರುತ್ತದೆ. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ಅಪರಾಧ-2 ಶ್ರೀ ಮಹಂತೇಶ್ ಸಿಬ್ಬಂದಿಗಳಾದ ಸುರೇಶ್, ಎಎಸ್ಐ ಮತ್ತು ಮಪಿಸಿ 78 ಲಲಿತ ಭಾವಹಿಸಿರುತ್ತಾರೆ.

ಮೂಡಿಗೆರೆ ಪೊಲೀಸ್ ಠಾಣೆ.
ಬೀಡಿ ಸೇದಲು ಪ್ರೇರೆಪಿಸಿದ ಪ್ರಕರಣ
ಮೂಡಿಗೆರೆ ತಾಲ್ಲೂಕಿನ ಜಾಣಗಿ ಗ್ರಾಮದಲ್ಲಿ ಪ್ರಶಾಂತ ಎಂಬುವರು ತನ್ನ ಮಗಳಿಗೆ ಬೀಡಿ ಸೇದುವಂತೆ ಪ್ರೇರೆಪಿಸಿ ಬೀಡಿ ಸೇದಿಸಿ ಮೂಗಿನಲ್ಲಿ ಹೊಗೆ ಬಿಡುವಂತೆ ತಿಳಿಸಿ ಮೊಬೈಲ್ನಲ್ಲಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿರುವ ಸುದ್ದಿಯು ಮಲ್ನಾಡ್ ನ್ಯೂಸ್ನಲ್ಲಿ ವರದಿಯಾಗಿದ್ದರ ಬಗ್ಗೆ ಮಾಹಿತಿ ಪಡೆದ ಶ್ರೀ ವೀರಭಧ್ರಯ್ಯ, ಶಿಶು ಅಭಿವೃದ್ದಿ ಯೋಜನಾ ಅಧಿಕಾರಿಗಳು ದಿ:12/11/2021 ರಂದು ಪ್ರಶಾಂತನ ವಿರುದ್ದ ನೀಡಿದ ದೂರಿನ ಮೇರೆಗೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಕಡೂರು ಪೊಲೀಸ್ ಠಾಣೆ.
ದೊಂಬಿ ಪ್ರಕರಣ
ದಿನಾಂಕ:12/11/2021 ರಂದು ಮಧ್ಯಾಹ್ನ ಸುಮಾರು 12-30 ಗಂಟೆಯಲ್ಲಿ ಪಿರ್ಯಾದಿ ಮಹಾಂತೇಶ್, ಮ್ಯಾನೇಜರ್ ಇವರು ಸನ್ಮೂನ್ ಗ್ರೂಪ್ ಹೋಟೆಲ್ ಬಾರ್ ಮತ್ತು ರೆಸ್ಟೋರೆಂಟ್ನಲ್ಲಿ ಕಿರಣ್, ಅಣ್ಣ್ಪ, ನಂಜಪ್ಪ,  ಗಣೇಶ ಮತ್ತು ಬಸವರಾಜುರವರೊಂದಿಗೆ ಇರುವಾಗ ಮುಸ್ಲಾಪುರ ಗ್ರಾಮದ ವಾಸಿಗಳಾದ ಬೋರ್ವೆಲ್ ಶಶಿ ಬಿನ್ ಮೂತರ್ಿ ಹಾಗೂ ಇತರೆ 40 ಜನರು ಕೈಯಲ್ಲಿ ದೊಣ್ಣೆ ಮತ್ತು ಕಲ್ಲುಗಳನ್ನು ಹಿಡಿದುಕೊಂಡು ಬಂದು ಅವಾಚ್ಯವಾಗಿ ಬೈಯುತ್ತ ಇಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ಮಾಡಬೇಡಿ ಎಂದು ಹೇಳಿದರೂ ಸಹ ತೆರೆದಿದ್ದಿರಾ ಎಂದು ರೆಸ್ಟೋರೆಂಟ್ ಮತ್ತು ವಸತಿ ಗೃಹಗಳ ಕಿಟಕಿ ಬಾಗಿಲುಗಳಿಗೆ ಕಲ್ಲುಗಳಿಂದ ಮತ್ತು ದೊಣ್ಣೆಗಳಿಂದ ಹೊಡೆದು ಪುಡಿ ಪುಡಿ ಮಾಡಿ ಪ್ಲಾಸ್ಟಿಕ್ ಚೇರ್, ಟೇಬಲ್, ಸಿಸಿ ಕ್ಯಾಮರಾ ಮತ್ತು ಅಡುಗೆ ಸಾಮಾನುಗಳನ್ನು ಹೊಡೆದು ಪುಡಿ ಮಾಡಿ ಪಿರ್ಯಾಧಿ ಹಾಗೂ ಇತರರಿಗೆ ಕೈಗಳಿಂದ ಮತ್ತು ದೊಣ್ಣೆಗಳಿಂದ ಹೊಡೆದು ಇನ್ನೊಮ್ಮೆ ಇಲ್ಲಿ ಬಾರ್ ಒಪನ್ ಮಾಡಿದರೆ ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿರುತ್ತಾರೆ ಇದರಿಂದ ಸುಮಾರು 5 ರಿಂದ 6 ಲಕ್ಷ ರೂ ನಷ್ಟವಾಗಿರುತ್ತದೆ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ  ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ನ.ರಾ.ಪುರ ಪೊಲೀಸ್ ಠಾಣೆ.
ರಾತ್ರಿ ಕನ್ನ ಕಳವು
ನ.ರಾ.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಡಬೂರು ಗ್ರಾಮದ ದುಗರ್ಾಂಬ ದೇವಸ್ಥಾನಕ್ಕೆ ಸಂಬಂಧಿಸಿದ ಆದಿಶಕ್ತಿ ಪ್ರಾವಿಜನ್ ಅಂಗಡಿಯಲ್ಲಿ ಪಿರ್ಯಾದಿ ಮೂತರ್ಿರವರು ದಿ: 10/11/2021 ರಂದು ಎಂದಿನಂತೆ ರಾತ್ರಿ ಅಂಗಡಿಯ ಬಾಗಿಲು ಹಾಕಿ ಕೊಂಡು ಮನೆಗೆ ಹೋಗಿ ಬೆಳಗ್ಗೆ 07-00 ಗಂಟೆಗೆ ಅಂಗಡಿ ಬೀಗ ತೆಗೆದು ಒಳಗಡೆ ನೋಡಿದಾಗ ಯಾರೋ ಕಳ್ಳರು ಅಂಗಡಿಯ ಮೇಲ್ಬಾಗದ ಸಿಮೆಂಟ್ ಶೀಟನ್ನು ತೆಗೆದು ಒಳ ಪ್ರವೇಶಿಸಿ ಕ್ಯಾಶ್ ಟೇಬಲ್ನಲ್ಲಿದ್ದ  ರೂ 3000-00 ನಗದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಇತ್ಯಾದಿಯಾಗಿ ದಿ:12/11/2021ರಂದು ನೀಡಿದ ದೂರಿನ ಮೇರೆಗೆ ನ.ರಾ.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ತರೀಕೆರೆ ಪೊಲೀಸ್ ಠಾಣೆ.
ಅಕ್ರಮ ಮಧ್ಯ ಮಾರಾಟ.
ದಿನಾಂಕ:12/11/2021ರಂದು ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಬೆಲೆನಹಳ್ಳಿ ಗ್ರಾಮದಲ್ಲಿ ಷಣ್ಮುಗ ಎಂಬುವರು ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದು, ಷಣ್ಮುಗನನ್ನು ಮಧ್ಯ ಮಾರಾಟದ ಬಗ್ಗೆ ಪರವಾನಗಿ ಕೇಳಲಾಗಿ ಅಸಾಮಿಯು ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದ್ದರಿಂದ ಪಂಚರ ಸಮಕ್ಷಮ 90 ಎಂ.ಎಲ್.ನ 35 ಒರಿಜಿನಲ್ ಚಾಯ್ಸ್ ಪೌಚ್ಗಳನ್ನು ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತಾರೆ, ಇದರ ಒಟ್ಟು ಅಂದಾಜು ಮೌಲ್ಯ 1225-00 ಆಗಿರುತ್ತದೆ. ಈ ಬಗ್ಗೆ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ, ಚಂದ್ರಮ್ಮ, ಸಿಬ್ಬಂದಿಗಳಾದ ಕೌಶಿಕ್ ಪಿಸಿ 350 ಮತ್ತು ಹರೀಶ್, ಪಿಸಿ 682 ಭಾವಹಿಸಿರುತ್ತಾರೆ.

ತರೀಕೆರೆ ಪೊಲೀಸ್ ಠಾಣೆ.
ಅಕ್ರಮ ಮಧ್ಯ ಮಾರಾಟ.
ದಿನಾಂಕ:12/11/2021ರಂದು ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಕವಳ್ಳಿ ಕ್ರಾಸ್ ಬಳಿ ಒಬ್ಬ ಅಸಾಮಿ ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದು, ಪೊಲೀಸರನ್ನು ನೋಡಿದ ಕೂಡಲೇ ಸ್ಥಳದಲ್ಲಿ ಬಿಟ್ಟು ಮದ್ಯದ ಬಾಟಲಿ, ಪೌಚ್, ಟೆಟ್ರಾ ಪ್ಯಾಕ್ಗಳನ್ನು ಬಿಟು ಓಡಿ ಹೋಗಿರುತ್ತಾನೆ ಆತನ ಹೆಸರು ಕೇಳಲಾಗಿ ಉಮೇಶನಾಯ್ಕ ಎಂದು ತಿಳಿದು ಬಂದಿರುತ್ತದೆ. ಬಿಟ್ಟು ಹೋದ ಒಟ್ಟು 18 ಲೀಟರ್ ಮಧ್ಯದ ಬೆಲೆ ಸುಮಾರು 8600 ರೂಗಳಾಗಿರುತ್ತದೆ. ಈ ಬಗ್ಗೆ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಈ ಕಾರ್ಯಾಚರಣೆಯಲ್ಲಿ  ಡಿಸಿಐಬಿ ವಿಭಾಗದ ಪಿಎಸ್ಐ, ಪುದ್ದು, ಎಎಸ್ಐ ರಂಗಯ್ಯ, ಹೆಚ್ಸಿಗಳಾದ, ಮಹೇಶ, ಉಮೇಶ ಮತ್ತು ಪ್ರಕಾಶ್ ರವರುಗಳು ಭಾವಹಿಸಿರುತ್ತಾರೆ. 

ಇತ್ತೀಚಿನ ನವೀಕರಣ​ : 13-11-2021 06:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080