ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ  ಪ್ರಕರಣ.

ಜಯಪುರ  ಪೊಲೀಸ್ ಠಾಣೆ.

ದಿನಾಂಕ:13-12-2021 ರಂದು ಜಯಪುರ  ಪೊಲೀಸ್ ಠಾಣಾ ಸರಹದ್ದಿನ ದುರ್ಗಾನಗರ, ಅಗಳಗಂಡಿ ಗ್ರಾಮದ ವಾಸಿ ಚೇತನ ರವರು ನೀಡಿದ ದೂರಿನಲ್ಲಿ ದಿನಾಂಕ:13-11-2021 ರಂದು ಬೆಳಗ್ಗೆ 09-00 ಗಂಟೆ ಸಮಯದಲ್ಲಿ  ಪಿರ್ಯಾದಿಯವರ ತಂದೆ ಬೆಳ್ಳಪ್ಪಗೌಡ , 75 ವರ್ಷ  ಇವರು ಕೂಲಿಕೆಲಸಕ್ಕೆಂದು ಮನೆಯಿಂದ ಹೊರಗೆ ಹೋದವರು  ಇಲ್ಲಿಯವರೆಗೂ ಬಂದಿರುವುದಿಲ್ಲ. ಇವಳನ್ನು ಎಲ್ಲಾ ಕಡೆ ಹುಡುಕಾಡಿದರೂ ಸಹ ಈವರೆಗೆ ಸಿಕ್ಕಿರುವುದಿಲ್ಲ ವೆಂದು ಕಾಣೆಯಾಗಿರುವ ತಮ್ಮ ತಂದೆ ಬೆಳ್ಳಪ್ಪಗೌಡರವರನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಜಯಪುರ   ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ.

ಕಡೂರು  ಪೊಲೀಸ್ ಠಾಣೆ.

ದಿನಾಂಕ: 13-12-2021 ರಂದು  ಶಿವಕುಮಾರ್ ಬಿನ್ ಮಹೇಶ್ವರಯ್ಯ, ದೊಡ್ಡಪಟ್ಟಣಗೆರೆ  ವಾಸಿರವರು ನೀಡಿದ ದೂರಿನಲ್ಲಿ ದಿನಾಂಕ:13-12-2021 ರಂದು ಬೆಳಿಗ್ಗೆ 09-00ಗಂಟೆ ಸಮಯದಲ್ಲಿ ನನ್ನ ಎರಡನೇ ಮಗನಾದ ಶಿವರಾಜ್ ರವರು ಕಡೂರಿನಿಂದ ಪೆಟ್ರೋಲ್ ತೆಗೆದುಕೋಮಡು ವಾಪಾಸ್ ತಂಗಲಿ ಗ್ರಾಮಕ್ಕೆ ಬರುತ್ತಿರುವಾಗ ಜಗನ್ನಾಥಶೆಟ್ಟಿ ಲೇಔಟ್ ಎದುರುಗಡೆ ಹಾದು ಹೋಗಿರುವ ಅಡ್ಡರಸ್ತೆಯಲ್ಲಿ ಬರುತ್ತಿರುವಾಗ ಹಿಂಬದಿಯಿಂದ ಬಂದ ಕೆಎ-44 1560 ಟಿಪ್ಪರ್ ಲಾರಿ ಚಾಲಕ  ನಮ್ಮೂರಿನ ಲಾಯರ್ ನಟರಾಜ್ ರವರ ತೋಟದ ಮನೆಯ ಸಮೀಪ ರಸ್ತೆಯ ಎಡಬದಿಯಲ್ಲಿ ಮನೆಯ ಕಡೆಗೆ ನಡೆದುಕೊಂಡು ಬರುತ್ತಿರುವಾಗ ಕಡೂರು ಕಡೆಯಿಂದ ಬಂದ ಕೆಅ-66 ಜೆ-7661 ಮೋಟಾರ್ ಸೈಕಲ್ ಚಾಲಕ ಜಿಗಣೇಹಳ್ಳಿ ಗ್ರಾಮದ  ದಿನೇಶ್ ರವರು  ಬೈಕ್ನ್ನು   ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ತಂದೆಗೆ ಡಿಕ್ಕಿ ಹೊಡೆಸಿದ ಪರಿಣಾಮ  ತಲೆಗೆ ಬಲವಾದ ಪೆಟ್ಟು ಬಿದ್ದು  ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಅಪಘಾತಗೊಳಿಸಿದ ದಿನೇಶನ  ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಕಡೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಕಡೂರು  ಪೊಲೀಸ್ ಠಾಣೆ.

ದಿನಾಂಕ: 13-12-2021 ರಂದು ಶ್ರೀಮತಿ.ದೇವಿರಮ್ಮ ಕೋಂ ಲೇಟ್ ಸಣ್ಣಪ್ಪ, ತಂಗಲಿ  ಗ್ರಾಮವಾಸಿರವರು ನೀಡಿದ ದೂರಿನಲ್ಲಿ ದಿನಾಂಕ:12-12-2021 ರಂದು ಬೆಳಿಗ್ಗೆ 09-00 ಗಂಟೆ ಸಮಯದಲ್ಲಿ ನನ್ನ ಎರಡನೇ ಮಗನಾದ ಶಿವರಾಜ್ ರವರು ಕೆಎ- 18 ಇ- 3709 ಬೈಕಿನಲ್ಲಿ ನಮ್ಮೂರಿನಿಂದ  ಪೆಟ್ರೋಲ್ ತರಲು ಕಡೂರಿಗೆ ಹೋಗಿ ವಾಪಾಸ್ ಗ್ರಾಮಕ್ಕೆ ಬರುತ್ತಿರುವಾಗ ಜಗನ್ನಾಥಶೆಟ್ಟಿ ಲೇಔಟ್ ಎದುರುಗಡೆ ಹಾದು ಹೋಗಿರುವ ಅಡ್ಡರಸ್ತೆಯಲ್ಲಿ ಬರುತ್ತಿರುವಾಗ ಹಿಂಬದಿಯಿಂದ ಬಂದ ಕೆಎ-44 1560 ಟಿಪ್ಪರ್ ಲಾರಿ ಚಾಲಕ ಲಾರಿಯನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು  ಬೈಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಶಿವರಾಜನ ಮೈಮೇಲೆ ಲಾರಿ ಚಕ್ರ ಹರಿದಿದ್ದು  ಸ್ಥಳದಲ್ಲಿಯೇ  ಮೃತಪಟ್ಟಿದ್ದು, ಅಪಘಾತಗೊಳಿಸಿದ ಲಾರಿ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಕಡೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಅಕ್ರಮ ಮದ್ಯ ಮಾರಾಟ ಪ್ರಕರಣ.

ಗ್ರಾಮಾಂತರ  ಪೊಲೀಸ್ ಠಾಣೆ.

ದಿನಾಂಕ:12-12-2021 ರಂದು ಗ್ರಾಮಾಂತರ  ಠಾಣಾ ಸರಹದ್ದಿನ  ಮಳಲೂರು  ಗ್ರಾಮದ ಎಂ.ಪಿ ಚಂದ್ರೇಗೌಡ  ಎಂಬುವರು ತಮ್ಮ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಆರೋಪಿ ಬಳಿಯಿದ್ದ 90 ಎಂ.ಎಲ್. ನ ಓರಿಜಿನಲ್ ಚಾಯ್ಸ್ ವಿಸ್ಕಿಯ 45 ಟೆಟ್ರಾಪ್ಯಾಕ್ ಮದ್ಯ ಹಾಗೂ 90 ಎಂ.ಎಲ್ ನ ಚಾಯ್ಸ್ ಫೈನ್ ವಿಸ್ಕ್ಕಿಯನ್ನು ವಶಕ್ಕೆ ಪಡೆದು, ಮದ್ಯದ ಅಂದಾಜು ಬೆಲೆ 2417/-ರೂ ಆಗಿದ್ದು, ಆರೋಪಿ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲಿ ಪಿ.ಎಸ್.ಐ.ಗೆನೋಜ ಹಾಗೂ ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 13-12-2021 06:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080