ಅಭಿಪ್ರಾಯ / ಸಲಹೆಗಳು

ಕಳ್ಳತನ  ಪ್ರಕರಣ .

ಕುದುರೆಮುಖ  ಪೊಲೀಸ್ ಠಾಣೆ.

ದಿನಾಂಕ 13/06/2021 ರಂದು  ಬಿಎಸ್ಎನ್ಎಲ್ , ಜೆಟಿಓ ಆದ ನವೀನ್ಕುಮಾರ್ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದುದಾರರು ಈಗ್ಗೆ  ಒಂದು ವರ್ಷದಿಂದ ಕಳಸದ  ಬಿಎಸ್ಎನ್ಎಲ್ ಕಂಪೆನಿಯಲ್ಲಿ ಟೆಲಿಕಾಮ್ ಆಪೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು 2020 ರ ಡಿಸೆಂಬರ್ ಕೊನೆಯ ವಾರದಲ್ಲಿ ಕುದುರೆಮುಖ ಬಿಎಸ್ಎನ್ಎಲ್ ಕಂಪೆನಿಗೆ ಅಳವಡಿಸಿದ್ದ 24 ಬ್ಯಾಟರಿಯ ಸೆಲ್ಗಳು ಹಾಳಾಗಿದ್ದು ಅವುಗಳ ಬದಲಿಗೆ 24 ಹೊಸಬ್ಯಾಟರಿ ಸೆಲ್ಗಳನ್ನು ಹಾಕಿ ಹಳೆಯ ಬ್ಯಾಟರಿ ಸೆಲ್ಗಳನ್ನು ಕಛೇರಿಯಲ್ಲಿಟ್ಟಿದ್ದು ದಿನಾಂಕ 29-05-2021 ರಂದು ಕಛೇರಿಯ ಬೀಗವನ್ನು ತೆಗೆದು ನೋಡಿದಾಗ 24 ಹಳೆಯ ಬ್ಯಾಟರಿಸೆಲ್ಗಳು ಕಳ್ಳತನವಾಗಿದ್ದು, ಕಳುವಾದ ಬ್ಯಾಟರಿಸೆಲ್ಗಳ ಅಂದಾಜು ಬೆಲೆ 40.000/ ರೂಗಳಾಗಿರುತ್ತೆ. ಕಳ್ಳತನವಾಗಿರುವ ಬ್ಯಾಟರಿಸೆಲ್ಗಳನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರನ್ನು ಸ್ವೀಕರಿಸಿ ಕುದುರೆಮುಖ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕೊಲೆ ಪ್ರಕರಣ .

ಎನ್.ಆರ್.ಪುರ . ಪೊಲೀಸ್ ಠಾಣೆ

ದಿನಾಂಕ 13/06/2021 ರಂದು ಪಿರ್ಯಾದುದಾರರಾದ ಸೌಮ್ಯ ಸಿ.ಮ್ಯಾಥ್ಯೂ ರವರು ನೀಡಿದ ದೂರಿನ ಸಾರಾಂಶವೇನೆಂದರೆ  ಪಿರ್ಯಾದಿಯ ತಂದೆ ತಾಯಿಯವರಿಗೆ 3 ಜನ ಮಕ್ಕಳಿದ್ದು, ಎಲ್ಲರೂ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ವಾಸವಾಗಿರುತ್ತಾರೆ. ಪಿರ್ಯಾದಿಯ ತಂದೆ ಮ್ಯಾಥ್ಯೂ,70 ವರ್ಷ ಇವರು ನ,ರಾ.ಪುರ. ತಾಲ್ಲೂಕಿನ ಅರಳಿಕೊಪ್ಪ ಗ್ರಾಮದಲ್ಲಿರುವ ಮನೆಯಲ್ಲಿಯೇ ವಾಸವಾಗಿದ್ದರು. ಅವರಿಗೆ  ಬಿ.ಪಿ. ಶುಗರ್  ಇದ್ದುದ್ದರಿಂದ ಟ್ರೀಟ್ ಮೆಂಟ್ ಪಡೆದುಕೊಳ್ಳುತ್ತಿದ್ದು , ಅವರು  ಚೆನ್ನಾಗಿಯೇ ಇದ್ದರು ಪಿರ್ಯಾದಿಯ ದೊಡ್ಡಪ್ಪನ ಮಗ ಬಿನುರವರಿಗೆ ವಿಪರೀತ  ಮದ್ಯಪಾನ ಅಭ್ಯಾಸವಿದ್ದು  ನಮ್ಮ ತಂದೆಯವರಿಗೆ ಕುಡಿದು ಬಂದು ಹಲವಾರು ಬಾರಿ ಕೈ ಮಾಡಿರುತ್ತಾರೆ.ಈ  ಬಗ್ಗೆ ಬಿನುರವರಿಗೆ ಬುದ್ದಿವಾದ ಹೇಳಿದ್ದೆವು ಹಾಗೂ ಪೊಲೀಸ್ ಠಾಣೆಗೆ ದೂರು ನೀಡಿದ್ದೆವು. ದಿನಾಂಕ 12-06-2021 ರಂದು ನಮ್ಮ ತಂದೆ ಹಾಗೂ ಬಿನುರವರು ಮದ್ಯಾಹ್ನ ಪರಸ್ಪರ ಗಲಾಟೆ ಮಾಡಿಕೊಂಡಿರುವುದನ್ನು ಅಕ್ಕಪಕ್ಕದವರು ನೋಡಿ ನನ್ನ ತಮ್ಮನಿಗೆ ತಿಳಿಸಿದ್ದು, ದಿನಾಂಕ 13-06-2021 ರಂದು ಬೆಳಿಗ್ಗೆ 06-20 ಗಂಟೆಗೆ ಬಿನುರವರು ನನ್ನ ತಮ್ಮನಿಗೆ ಪೋನ್ ಮಾಡಿ ನಿಮ್ಮ  ಅಪ್ಪ ಕುಡಿದು ಮನೆಯ ಮುಂದಿನ ರಸ್ತೆಯಲ್ಲಿ ಬಿದ್ದಿದ್ದಾರೆ ಎಂದು ತಿಳಿಸಿದ್ದು , ನಮ್ಮೂರಿನ ಆಟೋ ಎಲ್ದೋರವರಿಗೆ ಪೋನ್ ಮಾಡಿ ನಮ್ಮ ಮನೆಯ ಹತ್ತಿರ ಹೋಗಿ ನೋಡಿಕೊಂಡು ಬಾ ಎಂದು ತಿಳಿಸಿದ್ದು ಅವರು ನಮ್ಮ ಮನೆಯ ಹತ್ತಿರ ಹೋಗಿ ನಮ್ಮ ತಂದೆಯವರು  ಮೃತಪಟ್ಟಿರುವ ಬಗ್ಗೆ ತಿಳಿಸಿದ್ದು ನಾವು ಬೆಂಗಳೂರಿನಿಂದ ನಮ್ಮೂರಿಗೆ ಬಂದು ನೋಡಿ ನಮ್ಮ ತಂದೆಯವರು  ಮನೆಯ ಮುಂದಿನ ರಸ್ತೆಯ ಪಕ್ಕದ ಚರಂಡಿಯಲ್ಲಿ  ಅಂಗಾತವಾಗಿ ಬಿದ್ದಿದ್ದು ಅವರ ಕುತ್ತಿಗೆಯ ಬಲಭಾಗದ ಹತ್ತಿರ ದಪ್ಪದಾಗಿ ಬಿರಿದ ಗಾಯವಾಗಿದ್ದು , ಬಲಎದೆಯ ಹಾಗೂ ಹೊಟ್ಟೆಯ ಮೇಲೆ ತರಚಿದ ಗಾಯದ ಗುರುತುಗಳಿದ್ದು ,ನಮ್ಮ ತಂದೆಯವರು ಮೃತಪಡಲು  ಬಿನುರವರೇ  ಕಾರಣ ಎಂದು ನೀಡಿದ ದೂರನ್ನು  ಸ್ವೀಕರಿಸಿಕೊಂಡು ಎನ್.ಆರ್.ಪುರ.  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 25-06-2021 06:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080