ಅಭಿಪ್ರಾಯ / ಸಲಹೆಗಳು

ಅಕ್ರಮ ಜಾನುವಾರು ಕಳ್ಳತನ ಹಾಗೂ ಹತ್ಯಾ ಪ್ರಕರಣ.

ಬಣಕಲ್  ಪೊಲೀಸ್ ಠಾಣೆ.

ದಿನಾಂಕ:14-07-2021 ರಂದು ಬಣಕಲ್ ಪೊಲೀಸ್ ಠಾಣೆಯ ಮತ್ತಿಕಟ್ಟೆ ಸರ್ಕಲ್ ಬಳಿ ರಾಥ್ರಿಗಸ್ತು ಕರ್ತವ್ಯ ನಿರ್ವಹಿಸುತ್ತಿರುವಾಗ ಬಿನ್ನಡಿ ಗ್ರಾಮದ ರಸ್ತೆ ಬದಿಯಲ್ಲಿ ಮಲಗಿರುವ ದನಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ದಾಳಿ ಮಾಡಲಾಗಿ ಬಿನ್ನಡಿ ಗ್ರಾಮದ ಕಡೆಯಿಂದ ಒಂದು ತೂಪಾನ್ ವಾಹನ ಬರುತ್ತಿದ್ದು ಚಾಲಕನು ವಾಹನವನ್ನು ನಿಲ್ಲಿಸಿ ಓಡಿಹೋಗಿದ್ದು , ಹಿಂಭಾಗದಲ್ಲಿ ಕುಳಿತಿದ್ದವನು ಸಹ ಓಡಿಹೋಗಲು ಪ್ರಯತ್ನಿಸಿದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಇರ್ಫಾನ್ ಆಲಿ ಫಯಾಜ್ ಬಿನ್ ಮಹಮದ್ ದಾಹಿರ್, ಬಣಕಲ್ ಪಟ್ಟಣ ವಾಸಿ ಎಂದು ತಿಳಿಸಿದ್ದು , ಓಡಿಹೋದವನ ಹೆಸರು ಜೀಶಾನ್ ಬಿನ್ ಏಜಾಸ್ ಅಹಮದ್ , ಇಂದಿರಾನಗರ, ಬಣಕಲ್ ವಾಸಿ ಎಂದು ತಿಳಿಸಿದ್ದು , ವಾಹನವನ್ನು ಪಂಚರ ಸಮಕ್ಷಮ ಪರಿಶೀಲಿಸಲಾಗಿ ಕೆಎ-18 ಎ-8073 ನಂಬರಿನ ತೂಪಾಣ ವಾಹನವಾಗಿದ್ದು , ಆ ವಾಹನದಲ್ಲಿ ದನದ ಸಗಣಿ ಇರುವುದು ಕಂಡುಬಂದಿದ್ದು , ಬಿನ್ನಡಿ ಗ್ರಾಮದ ರಸ್ತೆ ಬದಿಯಲ್ಲಿ ಮಲಗಿರುವ ದನಗಳನ್ನು ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಿ ದನವನ್ನು ಕಡಿದು ಮಾಂಸ ಮಾಡುವ ಉದ್ದೇಶದಿಂದ ಸಾಗಾಣಿಕೆ ಮಾಡುತ್ತಿರುವುದಾಗಿ ತಿಳಿಸಿದ್ದು , ಯಾವುದೇ ಪರವಾನಗಿಯನ್ನು ಹೊಂದದೆ ದನವನ್ನುಕಳ್ಳತನ ಮಾಢಿ ಕಡಿದು ಮಾಂಸ ಮಾಡುವ ಉದ್ದೇಶದಿಂದ ತೂಪಾನ್  ವಾಹನದಲ್ಲಿ ಸಾಗಾಣಿಕೆ ಮಾಡುತ್ತಿದ್ದರಿಂದ ಆರೋಪಿತರ ವಿರುದ್ದ  ಬಣಕಲ್  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತಾರೆ. ಈ ಕಾರ್ಯಾಚರಣೆಯಲ್ಲ್ಲಿಎ.ಎಸ್.ಐ. ಶಶಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಹೆಂಗಸು ಕಾಣೆ ಪ್ರಕರಣ

ಸಖರಾಯಪಟ್ಟಣ  ಪೊಲೀಸ್ ಠಾಣೆ .

ದಿನಾಂಕ 14.07.2021 ರಂದು ಕೆಪಿ.ರುದ್ರಸ್ವಾಮಿ, ಕುನ್ನಾಳು ಗ್ರಾಮವಾಸಿರವರು ಠಾಣೆಗೆ ಹಾಜರಾಗಿ ನೀಡಿದದೂರಿನ ಸಾರಾಂಶವೇನೆಂದರೆನನಗೆ 2 ಜನ ಮಕ್ಕಳಿದ್ದು, ಮೊದಲನೆಯವಳು ಪವಿತ್ರ, 22 ವರ್ಷ ಹಾಗೂ ಎರಡನೆಯವನು ಗಣೇಶ ಎಂಬ ಮಗನಿರುತ್ತಾನೆ. ದಿನಾಂಕ 12-07-2021 ರಂದು ರಾತ್ರಿ ಊಟ ಮುಗಿಸಿ ಮಲಗಿದ್ದು ಮಾರನೇ ದಿನ ಬೆಳಿಗ್ಗೆ 06-00 ಗಂಟೆಗೆ ನನ್ನ ಹೆಂಡತಿ ಎದ್ದು ನೋಡಿದಾಗ ರೂಮಿನಲ್ಲಿ ನನ್ನ ಮಗಳು ಪವಿತ್ರ ಇರಲಿಲ್ಲ. ಅಕ್ಕಪಕ್ಕದವರ ಮನೆಗಳಲ್ಲಿ, ಸಂಬಂಧಿಕರ,ಸ್ನೇಹಿತರ ಹಾಗೂ ನೆಂಟರಿಷ್ಟರ  ಮನೆಗಳಲ್ಲಿ ವಿಚಾರ ಮಾಡಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ .ಆದ್ದರಿಂದ ಕಾಣೆಯಾಗಿರುವ ನನ್ನ ಮಗಳನ್ನು ಪತ್ತೆ ಮಾಡಿಕೊಡಿಕೊಡುವಂತೆ ನೀಡಿದ ಪಿರ್ಯಾದಿನ ಮೇರೆಗೆ  ಸಖರಾಯಪಟ್ಟಣ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಗ್ರಾಮಾಂತರ  ಪೊಲೀಸ್ ಠಾಣೆ .

ದಿನಾಂಕ 14.07.2021ರಂದು ಅನ್ನಪೂರ್ಣ, ಕೆ.ಬಿ.ಹಾಳ್ಗ್ರಾಮವಾಸಿರವರು ಠಾಣೆಗೆ ಹಾಜರಾಗಿ ನೀಡಿದದೂರಿನ ಸಾರಾಂಶವೇನೆಂದರೆ ನನ್ನ  ತಾಯಿ ಪುಟ್ಟಲಕ್ಷ್ಮಮ್ಮ , 80 ವರ್ಷ ಇವರು ಅನಾರೋಗ್ಯದಿಂದ  ಬಳಲುತ್ತಿದ್ದು , ದಿನಾಂಕ 06-07-2021 ರಂದು ಬೆಳಿಗ್ಗೆ ಕೂಲಿ ಕೆಲಸಕ್ಕೆ ಹೋದಾಗ ಮನೆಯಲ್ಲಿ ನನ್ನ ತಾಯಿಯವರಿ ಇದ್ದು, ಸಂಜೆ ಕೆಲಸ ಮುಗಿಸಿ ವಾಪಾಸ್ ಮನೆಗೆ ಬಂದು ನೋಡಲಾಗಿ ನನ್ನ ತಾಯಿ ಮನೆಯಲ್ಲಿ ಇರಲಿಲ್ಲ. ಅಕ್ಕಪಕ್ಕದವರ ಮನೆಗಳಲ್ಲಿ, ಸಂಬಂಧಿಕರ,ಸ್ನೇಹಿತರ ಹಾಗೂ ನೆಂಟರಿಷ್ಟರ  ಮನೆಗಳಲ್ಲಿ ವಿಚಾರ ಮಾಡಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ . ಆದ್ದರಿಂದ ಕಾಣೆಯಾಗಿರುವ  ನನ್ನ ತಾಯಿಯನ್ನು  ಪತ್ತೆ ಮಾಡಿಕೊಡಿಕೊಡುವಂತೆ ನೀಡಿದ ಪಿರ್ಯಾದಿನ ಮೇರೆಗೆ  ಗ್ರಾಮಾಂತರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

 

ಇತ್ತೀಚಿನ ನವೀಕರಣ​ : 14-07-2021 06:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080