ಅಭಿಪ್ರಾಯ / ಸಲಹೆಗಳು

ದರೋಡೆ ಪ್ರಕರಣ.

ನ.ರಾ.ಪುರ ಪೊಲೀಸ್ ಠಾಣೆ.

ದಿನಾಂಕ 14-08-2021 ರಂದು ನಿಖಿಲ್ ಬಿನ್ ಚಂದ್ರಶೇಖರ, ವಗ್ಗಡೆ ಗ್ರಾಮರವರು ನೀಡಿದ ದೂರಿನ ಸಾರಾಂಶವೇನೆಂದರೆ , ದಿನಾಂಕ 11-08-2021  ರಂದು ರಾತ್ರಿ ಸುಮಾರು 08-45 ಗಂಟೆ ಸಮಯದಲ್ಲಿ  ಬಿ.ಹೆಚ್. ಕೈಮರದಲ್ಲಿ ನನ್ನ ಹಾರ್ಡ್ ವೇರ್ ಅಂಗಡಿಯಲ್ಲಿ ವ್ಯಾಪಾರ  ಮುಗಿಸಿಕೊಂಡು ಸ್ಕೂಟಿಯಲ್ಲಿ ವಗ್ಗಡೆಕಲ್ಲಿನ ಎಲಿಯಾಸ್ ರವರ ಮನೆಯಿಂದ ಮುಂದಿನ ರಸ್ತೆಯಲ್ಲಿ ಹೋಗುತ್ತಿರುವಾಗ ಹಿಂಬದಿಯಿಂದ ಬಂದ ಕಾರಿನ ಚಾಲಕ ಸ್ಯೂಟಿಗೆ ಕಾರನ್ನು ತಾಗಿಸಿದ್ದರಿಂದ ನಾನು ಸ್ಕೂಟಿಯಿಂದ ರಸ್ತೆಯ ಪಕ್ಕದ ಚರಂಡಿಗೆ ಬಿದ್ದೆನು. ಆಗ ಕಾರಿನಿಂದ 4 ಜನರು ಮುಖಕ್ಕೆ ಕರ್ಚೀಫ್ ಕಟ್ಟಿಕೊಂಡು ಬಂದು ಎಲ್ಲರೂ ನನ್ನ ಮೈಕೈಗೆ ಕೈಗಳಿಂದ ಹೊಡೆದಿದ್ದಲ್ಲದೆ, ಚಾಕುವನ್ನು ತೋರಿಸಿ ಹೆದರಿಸಿ ನನ್ನ ಬಳಿಯಿದ್ದ ಟೆಕ್ನೋ ಕಂಪೆನಿಯ ಮೊಬೈಲ್, 4800 ರೂ ನಗದು ಹಣ ಹಾಗೂ ಕೈಯಲ್ಲಿದ್ದ ವಾಚನ್ನು ಕಿತ್ತುಕೊಂಡು ಹೋಗಿರುತ್ತಾರೆ. ಮುಖಕ್ಕೆ ಕರ್ಚೀಫ್ ಕಟ್ಟಿಕೊಂಡಿದ್ದವರು ಸುಮಾರು 25-30 ವರ್ಷ ಪ್ರಾಯದ ವ್ಯಕ್ತಿಗಳಾಗಿದ್ದು, 4 ಜನರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ನ,ರಾ.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕರ್ನಾಟಕ ಜಾನುವಾರು ಕಳ್ಳತನ ಹಾಗೂ  ಹತ್ಯಾ ಪ್ರತಿಬಂಧಕ ಸಂರಕ್ಷಣಾ ಆದ್ಯಾದೇಶ-2020           

ಬಣಕಲ್   ಪೊಲೀಸ್ ಠಾಣೆ .

ದಿನಾಂಕ 14-08-2021 ರಂದು ಬೆಳಗ್ಗೆ 05-15 ಗಂಟೆ ಸಮಯದಲ್ಲಿ ಕೋಳೂರು ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಕೆಎ-46 6318 ಅಶೋಕ ಲೇಲ್ಯಾಂಡ್ ವಾಹನದಲ್ಲಿ 1) ಅಹಮದ್ ಹನೀಫ್ ಬಿನ್ ಇದ್ದಿಹಬ್ಬ , ತೊಳಲು ಗ್ರಾಮ , ಬೋಲೂರು ತಾ. 2) ದೇವರಾಜ ಬಿನ್ ಬೋಜಪ್ಪ, ಹೊಸನಗರ 01 ನೇ ವಾರ್ಡ್ , ಬೇಲೂರು ತಾಲ್ಲೂಕು ಇವರುಗಳು ಒಂದು ಮಿನಿ ಗೂಡ್ಸ್ ವಾಹನದಲ್ಲಿ ಒಟ್ಟು 7 ದನಗಳನ್ನು ಹಿಂಸಾತ್ಮಕವಾಗಿ ತುಂಬಿಕೊಂಡು ಬಂದಿದ್ದು , ಈ ಬಗ್ಗೆ ಆರೋಪಿಗಳನ್ನು ವಿಚಾರ ಮಾಡಲಾಗಿ ಕೋಳೂರು ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಮಲಗಿರುವ ಬಿಡಾಡಿ ದನಗಳನ್ನು ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಿ ದನವನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಣಿಕೆ ಮಾಡುತ್ತಿರುವುದಾಗಿ ತಿಳಿಸಿದ್ದು, ಯಾವುದೇ ಪರವಾನಗಿಯನ್ನು ಹೊಂದದೆ ದನವನ್ನುಕಳ್ಳತನ ಮಾಡಿ ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಗೂಡ್ಸ್ ವಾಹನದಲ್ಲಿ ದನಗಳನ್ನು ಸಾಗಾಣಿಕೆ ಮಾಡುತ್ತಿದ್ದ ಆರೋಪಿತರ ವಿರುದ್ದ  ಬಣಕಲ್  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ. ಶ್ರೀಮತಿ.ಗಾಯತ್ರಿ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಮನುಷ್ಯ ಕಾಣೆ  ಪ್ರಕರಣ.

ನಗರ  ಪೊಲೀಸ್ ಠಾಣೆ.

ದಿನಾಂಕ 14-08-2021 ರಂದು ಪಿರ್ಯಾಧುದಾರರಾದ ಶ್ರೀಮತಿ ಮೀನಾಕ್ಷಿ ಕೋಂ ಉದಯಕುಮಾರ್ ಲಕ್ಷ್ಮೀಶ ನಗರ ಚಿಕ್ಕಮಗಳೂರು ವಾಸಿ ಇವರು ನೀಡಿದ ದೂರಿನಲ್ಲಿ ತನ್ನ ತಂಗಿ ಮುತ್ತಮ್ಮ ಕೋಂ ಪ್ರದೀಪ ಇವಳು ಸುಮಾರು 3 ವರ್ಷಗಳಿಂದ ನನ್ನ ಜೊತೆಯಲ್ಲಿ ವಾಸವಾಗಿದ್ದು ದಿನಾಂಕ: 09/08/2021 ರಂದು ಕೂಲಿ ಕೆಲಸಕ್ಕೆ ಕೋರ್ಟ್ ಮುಂಭಾಗದಲ್ಲಿರುವ ವಿಠಲ್ ಕ್ಯಾಂಟಿನ್ ಗೆ ಎಂದಿನಂತೆ ಬೆಳಿಗ್ಗೆ ಕೆಲಸಕ್ಕೆ ಹೋದವಳು ಸಂಜೆ 6-30 ಗಂಟೆ ಯಾದರೂ ವಾಪಾಸ್ಸು ಬಾರದೇ ಇದ್ದು ಮುತ್ತಮ್ಮ ನನ್ನು ಎಲ್ಲಾ ಕಡೆ ಹುಡುಕಾಡಿದರೂ ಸಹ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ  ಮುತ್ತಮ್ಮನ ಚಹರೆ ಹೆಸರು - ಮುತ್ತಮ್ಮ, ವಯಸ್ಸು ;-37ವರ್ಷ, ಎತ್ತರ -5 ಅಡಿ, ಚಹರೆ - ಕೋಲುಮುಖ , ಮೈ ಬಣ್ಣ -ಕಪ್ಪುಬಣ್ಣ, ಧರಿಸಿದ ಬಟ್ಟೆ-ಬಿಳಿ ಕಪ್ಪು ಚೂಡಿದಾರ, ಸಾದಾರಣ ಮೈಕಟ್ಟು, ಕಾಣೆಯಾಗಿರುವ ನನ್ನ ತಂಗಿಯನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಅಕ್ರಮ ಜೂಜಾಟ ಪ್ರಕರಣ.

ನಗರ ಪೊಲೀಸ್ ಠಾಣೆ .

ದಿನಾಂಕ 12-08-2021 ರಂದು ಸಂಜೆ 4-15 ಗಂಟೆ ಸಮಯದಲ್ಲಿ   ಚಿಕ್ಕಮಗಳೂರು ನಗರದ ದೀಪಾ ನರ್ಸಿಂಗ್ ಹೋಂ ರಸ್ತೆಯ ಬೈಪಾಸ್ ಗೆ ಹೋಗುವ ರಸ್ತೆಯ ಪಟಾಕಿ ಮೈದಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿದ್ದವರ ಮೇಲೆ ದಾಳಿ ನಡೆಸಿದ್ದು  9 ಜನರನ್ನು ವಶಕ್ಕೆ ಪಡೆದು ಅವರ ಬಳಿಯಿದ್ದ ಒಂದು ಪ್ಲಾಸ್ಟಿಕ್ ಚೀಲ, 52ಇಸ್ಪೀಟ್ ಎಲೆಗಳು ಹಾಗೂ ನಗದು ಹಣ 4,460/ರೂ ಹಣವನ್ನು ಅಮಾನತ್ತುಪಡಿಸಿಕೊಂಡು ಆರೋಪಿತರುಗಳ ವಿರುದ್ದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ. ದೇವರಾಜ ಎಸ್.ಬಿರಾದರ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ.

ಬೀರೂರು  ಪೊಲೀಸ್ ಠಾಣೆ.

ದಿನಾಂಕ 13-08-2021 ರಂದು ರಾತ್ರಿ 08-30 ಗಂಟೆ ಸಮಯದಲ್ಲಿ  ಅಭಿಲಾಷ್ ಹಾಗೂ ಚಂದ್ರಶೇಖರ ರವರು ಕೆಲಸ ಮುಗಿಸಿಕೊಂಡು ಕಡೂರಿನಿಂದ ಕೆಎ-18 ಇಇ-2623 ಬೈಕಿನಲ್ಲಿ ಅಭಿಲಾಷ್ ರವರು ಬೈಕನ್ನು ಚಾಲನೆ ಮಾಡಿಕೊಂಡು ಬರುತ್ತಿರುವಾಗ ತರೀಕೆರೆ ಕಡೆಯಿಂದ ಬಂದ ಎಂಹೆಚ್-12 ಹೆಚ್ಡಿ-4808 ಲಾರಿ ಚಾಲಕ ಲಾರಿಯನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೋಂಡು ಬಂದು ಬೈಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ  ಅಭಿಲಾಷ್ ಹಾಗೂ ಚಂದ್ರಶೇಖರ ರವರು ಬೈಕ್ ಸಮೇತ ಕೆಳಗೆ ಬಿದ್ದಿದ್ದು ಅಭಿಲಾಷ್ ರವರಿಗೆ ತಲೆಗೆ ಹಾಗೂ ಎರಡು ಕಾಲುಗಳಿಗೆ ತೀವ್ರ ಪೆಟ್ಟಾಗಿ ಮೃತಪಟ್ಟಿರುತ್ತಾರೆಂದು ಲಾರಿ ಚಾಲಕ ರಾಜೇಂದ್ರ ಮೋಹನಕಾಡೆ ವಿರುದ್ದ ಕ್ರಮಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 14-08-2021 06:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080