ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಅಜ್ಜಂಪುರ   ಪೊಲೀಸ್ ಠಾಣೆ.

ದಿನಾಂಕ:14/02/2022 ರಂದು ತೋಟಪ್ಪ ಬಿನ್ ಲೇಟ್ ರುದ್ರಪ್ಪ, ಜಾವೂರು ವಾಸಿ ಇವರು ನೀಡಿದ ದೂರಿನಲ್ಲಿ ನನ್ನ ಮೊದಲನೇ ಮಗನಾದ ಮಧುರವರು ಸೊಕ್ಕೆ ಪ್ರೌಢಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಎಂದಿನಂತೆ ದಿನಾಂಕ;13/02/2022 ರಂದು ಕೆಲಸಕ್ಕೆ ಹೋಗಿ  ಕೆಲಸ ಮುಗಿಸಿ ಸಂಜೆ 07-30 ಗಂಟೆ ಸಮಯದಲ್ಲಿ ಜಾವೂರು ಗೇಟ್ ಬಳಿ ರಸ್ತೆ ದಾಟುತ್ತಿರುವಾಗ ಯಾವುದೋ ಒಂದು ಅಪರಿಚಿತ ವಾಹನವನ್ನು ಅದರ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮಧುರವರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ತಲೆಗೆ ಹಾಗೂ ಮೈಕೈಗೆ ಪೆಟ್ಟಾಗಿ ಚಿಕಿತ್ಸೆ ಫಲಕಾರಿಯಾಗದೆ ಮಧುರವರು ಮೃತಪಟ್ಟಿದ್ದು , ಪಿರ್ಯಾದಿಯ ಮಗನಿಗೆ ಡಿಕ್ಕಿ ಹೊಡೆಸಿ ಆತನ ಸಾವಿಗೆ ಕಾರಣವಾಗಿರುವ  ಅಪರಿಚಿತ ವಾಹನದ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ಬಾಳೆಹೊನ್ನೂರು   ಪೊಲೀಸ್ ಠಾಣೆ.

ದಿನಾಂಕ:13-02-2022 ರಂದು  ಬಾಳೆಹೊನ್ನೂರು ಠಾಣಾ ಸರಹದ್ದಿನ ಬಾಳೆಹೊನ್ನೂರು- ಜಯಪುರ ಮುಖ್ಯರಸ್ತೆಯಲ್ಲಿನ ರಂಭಾಪುರಿ ಪೆಟ್ರೋಲ್ ಬಂಕ್ ಬಳಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುವ ಸಂಬಂದ ಮದ್ಯವನ್ನು ಪ್ಲಾಸ್ಟಿಕ್  ಚೀಲದಲ್ಲಿ ಇಟ್ಟುಕೊಂಡು  ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ರೇವತಿ ಕೋಂ ಲೇಟ್ ನರೇಂದ್ರ, ಗಬ್ಗಲ್ ಗ್ರಾಮ ವಾಸಿ ಹಾಗೂ ಶಂಕರ ಬಿನ್ ಲೇಟ್ ಸಿದ್ದಪ್ಪಗೌಡ, ಗಬ್ಗಲ್ ಗ್ರಾಮವಾಸಿ ಇವರುಗಳನ್ನು ವಶಕ್ಕೆ ಪಡೆದು, ಇವರುಗಳ ಬಳಿಯಿದ್ದ 90 ಎಂ.ಎಲ್.ನ ಕ್ಯಾಪ್ಟನ್ ಮಾರ್ಟಿನ್ ಸ್ಪೆಷಲ್ ವಿಸ್ಕಿಯ 66 ಮದ್ಯದ ಪೌಚ್ಗಳನ್ನು ಅಮಾನತ್ತುಪಡಿಸಿಕೊಂಡಿದ್ದು,  ಮದ್ಯದ ಅಂದಾಜು ಬೆಲೆ 2318. 58/-ರೂ ಗಳಾಗಿರುತ್ತೆ. ಮದ್ಯವನ್ನು ಅಮಾನತ್ತುಪಡಿಸಿಕೊಂಡು ಆರೋಪಿಗಳ ವಿರುದ್ದ  ಬಾಳೆಹೊನ್ನೂರು  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ನಿತ್ಯಾನಂದಗೌಡ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಬಾಳೆಹೊನ್ನೂರು ಪೊಲೀಸ್ ಠಾಣೆ.

ದಿನಾಂಕ;13;02;2022 ರಂದು ಮಾಗುಂಡಿ ಗ್ರಾಮ ವಾಸಿ ನಾಗೇಶ ಬಿನ್ ರುದ್ರಯ್ಯ ರವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಅಕ್ಕನಾದ ಶಾಂತರವರು ಅವರ ಮಗಳು  ಪೂಜಾಳಿಗೆ 14 ವರ್ಷವಿದ್ದಾಗ ಮನೆಯನ್ನು ಬಿಟ್ಟು ಹೋಗಿದ್ದು ಆಗಿನಿಂದಲೂ ಪೂಜಾಳನ್ನು ನಮ್ಮ ಮನೆಯಲ್ಲಿಯೇ ಸಾಕಿಕೊಂಡಿದ್ದೆವು.  ದಿನಾಂಕ 12-02-2022 ರಂದು ರಾತ್ರಿ ಊಟ ಮುಗಿಸಿ ಎಲ್ಲರೂ ಮಲಗಿದ್ದು, ಮಾರನೇ ದಿವಸ ಅಂದರೆ ದಿನಾಂಕ 13-02-2022 ರಂದು ಬೆಳಿಗ್ಗೆ 06-00 ಗಂಟೆ ಸಮಯದಲ್ಲಿ ಪಿರ್ಯಾದಿಯ ಹೆಂಡತಿ ಪಲ್ಲವಿಯವರು ಪೂಜಾಳು ಮನೆಯಲ್ಲಿ ಎಲ್ಲಿಯೂ ಕಾಣುತ್ತಿಲ್ಲ ಎಂದು ತಿಳಿಸಿದ ಮೇರೆಗೆ  ಅಕ್ಕಪಕ್ಕದ, ನೆಂಟರಿಷ್ಟರ ಹಾಗೂ ಸ್ನೇಹಿತರ ಮನೆಗಳಲ್ಲಿ ವಿಚಾರ ಮಾಡಿದ್ದು ಇಲ್ಲಿಯವರೆಗೂ ಈವರೆಗೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ಪೂಜಾ, 22 ವರ್ಷ, , ವಾಸ ತಲೆಗದ್ದೆ ಮಾಹಲ್ ಗೋಡು, ಮಾಗುಂಡಿ ಗ್ರಾಮ ವಾಸಿ ಈಕೆಯನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಬಾಳೆಹೊನ್ನೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 14-02-2022 07:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080