ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ:14/03/2022 ರಂದು ಪಿರ್ಯಾದಿ ಶ್ರೀಮತಿ ನೇತ್ರಮ್ಮ ಬಿನ್ ಲೇಟ್ ರಾಜಣ್ಣ ಎಂ.ಸಿ., ಗೋಪಾಲ ಗ್ರಾಮ ಲಕ್ಕವಳ್ಳಿ ಹೋಬಳಿ  ಇವರು ನೀಡಿದ ದೂರಿನಲ್ಲಿ ದಿನಾಂಕ:13/03/2022 ರಂದು ಪಿರ್ಯಾದಿ ಮಗ ಮಂಜುನಾಥನು ತರೀಕೆರೆ ಎಸ್.ಜೆ.ಎಂ. ಎದುರು ಪೆಟ್ರೋಲ್ ಬಂಕ್ ಗೆ ಕೆಲಸಕ್ಕೆ ಹೋಗಿ ಕೆಎ-18-ಎಲ್-5920 ರ ಟಿವಿಎಸ್ ವಿಕ್ಟರ್ ಬೈಕಿನಲ್ಲಿ ವಾಪಾಸ್ಸು  ತರೀಕೆರೆಯಿಂದ  ಊರಿಗೆ ಬರುತ್ತಿರುವಾಗ  ಬಿ.ಹೆಚ್.ರಸ್ತೆಯ ಆರ್.ಟಿ.ಓ ಕಛೇರಿ ಹತ್ತಿರ ಹೋಗುತ್ತಿದ್ದಾಗ ಶಿವಮೊಗ್ಗ ಕಡೆಯಿಂದ ಕೆಎ-18-ಎ-9986 ಮಹೇಂದ್ರ ಜಿನಿಯೋ ವಾಹನ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮಂಜುನಾಥ  ಹೋಗುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆಸಿದ ಪರಿಣಾಮ ಮಂಜುನಾಥ ರವರಿಗೆ ತೀವ್ರ ಗಾಯವಾಗಿ ಅಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಅಪಘಾತಕ್ಕೆ ಕಾರಣನಾದ ಕೆಎ-18-ಎ-9986 ಮಹೇಂದ್ರ ಜಿನಿಯೋ ವಾಹನ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ:13/03/2022 ರಂದು ಪಿರ್ಯಾದಿ ಶ್ರೀಮತಿ ಪುಟ್ಟಮ್ಮ ಬಿನ್ ಶಿವಪ್ಪ  ಸರಸ್ವತಿಪುರ ಬೀರೂರು  ಇವರು ನೀಡಿದ ದೂರಿನಲ್ಲಿ ದಿನಾಂಕ:13/03/2022 ರಂದು ಪಿರ್ಯಾದಿ ಗಂಡ ಶಿವಪ್ಪ ಇವರು ಲಾರಿ ನಂ ಸಿಎನ್.ಪಿ 3047 ವಾಹನಕ್ಕೆ ಲೋಡ್ ಮಾಡುವ ಕೆಲಸಕ್ಕೆ ಹೋಗಿದ್ದು , ತರೀಕೆರೆ ಎಮ್.ಸಿ. ಹಳ್ಳಿ ಬಳಿಯ ಎರೆಬಯಲು ಹತ್ತಿರ ಗೊಬ್ಬರ ಅನ್ ಲೋಡ್ ಆದ ನಂತರ ಲಾರಿಯ ಹಿಂದೆ ನಿಂತಿದ್ದಾಗ ಸುಮಾರು 3-30 ಗಂಟೆ ಸಮಯದಲ್ಲಿ ಲಾರಿಯ ಚಾಲಕನು ಲಾರಿಯನ್ನು ಅಜಾಗರೂಕತೆಯಿಂದ ಯವುದೇ ಮುನ್ಸೂಚನೆ ನೀಡದೆ ಹಿಂದಕ್ಕೆ ಚಲಿದಾಗ ಲಾರಿಯ ಹಿಂಬಾಗದ ಡೋರ್ ಗೆ ಹೊಂದಿಕೊಂಡಿರುವ ಬಾಡಿಯು ಶಿವಪ್ಪರವರ ಎದೆಗೆ ಭಾಗಕ್ಕೆ ಹೊಡೆದ ಪರಿಣಾಮ ತೀವ್ರ ಗಾಯವಾಗಿ ಅಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು ವೈದ್ಯರು ಪರಿಶಿಲಿಸಿ  ಮೃತಪಟ್ಟಿರುವುದಾಗಿ ತಿಳಿಸಿದ್ದು, ಅಪಘಾತಕ್ಕೆ ಕಾರಣನಾದ ಲಾರಿ ನಂ ಸಿಎನ್.ಪಿ 3047 ವಾಹನ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಕಡೂರು ಪೊಲೀಸ್ ಠಾಣೆ.

ದಿನಾಂಕ 13/03/2022 ರಂದು ಪಿರ್ಯಾದಿ ವಿಜಯೇಂದ್ರ ಬಿನ್ ಲೇಟ್ ರಂಗಾಜೆಟ್ಟಿ,  ಚಿಕ್ಕಿಂಗಳ ಗ್ರಾಮ ಇವರು ನೀಡಿದ ದೂರಿನಲ್ಲಿ ದಿನಾಂಕ 11/03/2022 ರಂದು ಪಿರ್ಯಾದಿಯ ಮಗಳು ಶ್ರೀ ಲಕ್ಷ್ಮೀ, ಇವಳು ಬೆಳಿಗ್ಗೆ 8.30 ಗಂಟೆಗೆ ಮನೆಯಿಂದ ಕಾಲೇಜಿಗೆ ಹೋಗಿದ್ದು ವಾಪಾಸ್ಸು ಮನೆಗೆ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಸಹ ಈ ವರೆಗೂ ನನ್ನ ಮಗಳೂ ಪತ್ತೆ ಅಗಿಲ್ಲವೆಂದು ಕಾಣೆಯಾಗಿರುವ 19 ವರ್ಷ, 5.3 ಅಡಿ ಎತ್ತರ ಚಪ್ಪಟ್ಟೆ ಮುಖ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು ಕಪ್ಪು ಬಣ್ಣದ ಚೂಡಿದಾರ ಧರಿಸಿರುತ್ತಾಳೆ, ಕನ್ನಡ ಬಾಷೆ ಮಾತನಾಡುತ್ತಾಳೆ. ಕಾಣೆಯಾಗಿರುವ ತನ್ನ ಮಗಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ:14/03/2022 ರಂದು ಪಿರ್ಯಾದಿ ನಂಜುಂಡಪ್ಪ ಎಸ್.ಬಿ. ಬಿನ್  ಬಸವರಾಜಪ್ಪ,  ಸಿರಗಳಿಪುರ ಗ್ರಾಮ ಇವರು ನೀಡಿದ ದೂರಿನಲ್ಲಿ ದಿನಾಂಕ:14/03/2022 ರಂದು ಪಿರ್ಯಾದಿಯ ಮಗಳು ಸ್ನೇಹಾ, ಇವಳು ಮನೆಯಿಂದ ಪೂಜೆಗೆ ಹೂವು ತರಲೆಂದು ತೋಟಕ್ಕೆ ಹೋದವಳು ವಾಪಾಸ್ಸು ಮನೆಗೆ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಸಹ ಈ ವರೆಗೂ ನನ್ನ ಮಗಳೂ ಪತ್ತೆ ಅಗಿಲ್ಲವೆಂದು ಕಾಣೆಯಾಗಿರುವ 19 ವರ್ಷ, 5.0 ಅಡಿ ಎತ್ತರ, ಕೋಲು ಮುಖ, ತೆಳ್ಳನೆ ಶರೀರ,  ಕೆಂಪು ಮೈಬಣ್ಣ, ಸಾಧಾರಣ ಕಪ್ಪು  ತಲೆಕೂದಲು, ಕನ್ನಡ ಬಾಷೆ ಮಾತನಾಡುತ್ತಾಳೆ. ಕಾಣೆಯಾಗಿರುವ ತನ್ನ ಮಗಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 14-03-2022 07:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080