ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಸಖರಾಯಪಟ್ಟಣ ಪೊಲೀಸ್ ಠಾಣೆ.

ದಿನಾಂಕ:14/04/2022 ರಂದು ಪಿರ್ಯಾದಿ ಶ್ರೀಮತಿ ಮಂಜುಳಾ ಕೋಂ ಈಶ ಸಿಪಿಸಿ ಕಾಲೋನಿ ಕಡೂರು ಟೌನ್ ವಾಸಿ,  ಇವರು ನೀಡಿದ ದೂರಿನಲ್ಲಿ, ದಿನಾಂಕ:13/04/2022 ರಂದು 7.30 ಗಂಟೆಗೆ ಪಿರ್ಯಾದಿಯ ತಮ್ಮ ಮಾರುತೇಶ್ ಇವನು ಊರಿಗೆ ಬರಲು ಜೊಡಿ ಹೋಚಿಹಳ್ಳಿ ಗೇಟ್ ಬಳಿ ನಡೆದುಕೊಂಡು ಬರುವಾಗ ರಾತ್ರಿ ಸುಮಾರು 8.00 ಗಂಟೆ ಸಮಯದಲ್ಲಿ  ಯಾವುದೋ ಅಪರಿಚಿತ ವಾಹನ ಚಾಲಕ ವಾಹನವನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಮಾರುತೇಶನಿಗೆ ಡಿಕ್ಕಿ ಹೊಡೆಸಿದ ಪರಿಣಾಮ, ಮಾರುತೇಶ್ ನಿಗೆ ತಲೆಗೆ ಮುಖ ಕಾಲಿಗೆ ಬಲವಾದ ಪೆಟ್ಟಾಗಿದ್ದು,  ಚಿಕಿತ್ಸೆಗೆ ಅಸ್ಪತ್ರಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆ ಫಲಕಾರಿಯಗದೇ ಮೃತಪಟ್ಟಿರುತ್ತಾರೆ. ಅಪಘಾತ ಉಂಟು ಮಾಡಿದ ಅಪರಿಚಿತ ವಾಹನದ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು, ನೀಡಿದ ದೂರಿನ ಮೇರೆಗೆ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ಬಾಳೆಹೊನ್ನೂರು ಪೊಲೀಸ್ ಠಾಣೆ.

ದಿನಾಂಕ;13/04/2022 ರಂದು ಬಾಳೆಹೊನ್ನೂರು ಠಾಣಾ ಸರಹದ್ದಿನ ಇಟ್ಟಿಗೆ ಶಿವನಗರ ಗ್ರಾಮದ ವಾಸಿ ರಘುರಾಮ್ ಬಿನ್ ಸಾದುಪೂಜಾರಿ ಎಂಬುವರು ತನ್ನ ಅಂಗಡಿ ಮುಂಭಾಗದಲ್ಲಿ ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದು ಆರೋಪಿತನನ್ನು ವಶಕ್ಕೆ ಪಡೆದು, ಅಕ್ರಮವಾಗಿ  ಹೊಂದಿದ್ದ 90 ಎಂ.ಎಲ್ ನ 16 ಟೆಟ್ರಾಪ್ಯಾಕ್ ಹಾಗೂ 180 ಎಂ.ಎಲ್. ನ 6 ಟೆಟ್ರಾಪ್ಯಾಕ್ ಮದ್ಯ ಅಂದಾಜು ಬೆಲೆ ರೂ 984/- ಅಗಿದ್ದು, ಸದರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಬಾಳೆಹೊನ್ನೂರು ಪಿ.ಎಸ್.ಐ. ನಿತ್ಯಾನಂದಗೌಡ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ:14/04/2022 ರಂದು ಪಿರ್ಯಾದಿ ಅಬ್ದುಲ್ ಖಾಯುಮ್ ಬಿನ್ ಲೇಟ್ ಮಹಮ್ಮದ್ ಇಸ್ಮಾಯಿಲ್ ವಿಜಯನಗರ ಬಡಾವಣೆ , ಕೋಡಿ ಕ್ಯಾಂಪ್ ತರೀಕೆರೆ ಟೌನ್ ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ, ದಿನಾಂಕ:08/04/2022 ರಂದು ಮನೆಗೆ ಮುಂದೆ ತನ್ನ ಬಾಬ್ತು ಕೆಎ-66-ಇ-2381 ಅಪಾಚಿ ಬೈಕ್ ಅನ್ನು ನಿಲ್ಲಿಸಿದ್ದು , ದಿನಾಂಕ;09/04/2022 ರಂದು ಬೆಳಿಗ್ಗೆ ನೋಡಿದಾಗ ಯಾರೋ ಕಳ್ಳರು ಬೈಕ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಸದರಿ ಬೈಕಿನ ಅಂದಾಜು ಬೆಲೆ  ಒಟ್ಟು 60,000 ರೂ ಬೆಲೆಬಾಳುವ ಅಗಿರುತ್ತದೆ. ಕಳ್ಳರನ್ನು ಪತ್ತೆ ಮಾಡಿ ಕಳ್ಳತನವಾಗಿರುವ ಬೈಕ್ ಅನ್ನು ಪತ್ತೆ ಮಾಡಿ ಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ದರೋಡೆ ಪ್ರಕರಣ

ಗೋಣಿಬೀಡು ಪೊಲೀಸ್ ಠಾಣೆ.

ದಿನಾಂಕ:13/04/2022 ರಂದು ಪಿರ್ಯಾದಿ ಅಭಿಷೇಕ್ ಆರ್. ಜೆ.ಪಿ.ನಗರ ಬೆಂಗಳೂರು ವಾಸಿ ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ, ದಿನಾಂಕ;01.04.2022 ರಂದು ಪಿರ್ಯಾದಿ ಮತ್ತು 3 ಜನ ಸ್ನೇಹಿತರು ದ್ವಿಚಕ್ರ ವಾಹನದಲ್ಲಿ ಬೆಂಗಳೂರಿಗೆ ಹೋಗುವಾಗ ಮೂಡಿಗೆರೆ ಹ್ಯಾಂಡ್ ಪೋಸ್ಟ್ ಬಳಿ ಕೆಎ-26-ಎಂ-4532 ನಂಬರಿನ ಕಾರ್ ನವರು ನಮ್ಮ ಹತ್ತಿರ ಬೆಂಗಳೂರಿಗೆ ಹೋಗುವ ದಾರಿ ಕೇಳಿದ್ದು ನಾವು ಊಟ ಮುಗಿಸಿ ಬೆಂಗಳೂರಿಗೆ ಹ್ಯಾಂಡ್ ಪೋಸ್ಟ್ ನಿಂದ ಹೋರಟು ದಿನಾಂಕ 02.04.2022 ರಂದು 00-50 ಗಂಟೆ ಸಮಯದಲ್ಲಿ ಗೋಣಿಬೀಡು ಮಸೀದಿ ಬಳಿ ಅದೇ ಕಾರಿನವರು ನಮ್ಮನ್ನು ಅಡ್ಡಗಟ್ಟಿ ನಮ್ಮ ಬಳಿ ಇದ್ದ 5,000/- ರೂ ನಗದು ಎರಡು ಚಿನ್ನದ ಸರ ರೈಡಿಂಗ್ ಜಾಕೇಟ್ ಮತ್ತು ಇಯರ್ ಪೋನ್ ನನ್ನು ಕಸಿದುಕೊಂಡು ಐದು ಜನರು ಡ್ರಾಗರ್ ಹಿಡಿದಿದ್ದರು ನಮ್ಮ ಹೊಟ್ಟೆಗೆ ಡ್ರಾಗರ್ ಚುಚ್ಚಿ ನಮ್ಮ ಪ್ರಾಣ ತೆಗೆಯಲು ಯತ್ನಿಸಿದರು ಕಳ್ಳರು ನಮ್ಮಿಂದ ಕಿತ್ತುಕೊಂಡ ವಸ್ತುಗಳ ಬೆಲೆ ಸುಮಾರು 2,30,464/- ರೂ ಬೆಲೆಯದ್ದಾಗಿದ್ದು ಕಳ್ಳರನ್ನು ಪತ್ತೆ ಮಾಡಿ ನಮ್ಮ ವಸ್ತುಗಳನ್ನು ಕೊಡಿಸುವಂತೆ ಕೋರಿ ನೀಡಿದ ದೂರಿನ ಮೇರೆಗೆ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 14-04-2022 08:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080