ಅಭಿಪ್ರಾಯ / ಸಲಹೆಗಳು

ಅಕ್ರಮ ಜೂಜಾಟ ಹಾಗೂ ಕೊವಿಡ್ 19 ನಿಯಮ ಉಲ್ಲಂಘನೆ  ಪ್ರಕರಣ
ಬಸವನಹಳ್ಳಿ   ಪೊಲೀಸ್  ಠಾಣೆ  
ದಿನಾಂಕ:13/05/2021 ರಂದು ಬಸವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಕೊರೋನಾ ಸಂಬಂಧ ಗಸ್ತು ಮಾಡುತ್ತಿರುವಾಗ ಮೌಂಟೆನ್ಯೂ ಶಾಲೆಯ ಮುಂದಿನ ಗೇಟಿನ ಕಾರಾಗೃಹಕ್ಕೆ ಹೋಗವ ರಸ್ತೆಯಲ್ಲಿ ವಿದ್ಯುತ್ ದೀಪದ ಬೆಳಕಿನಲ್ಲಿ  5 ಜನರು   ಗುಂಪುಕಟ್ಟಿಕೊಂಡು ಕೊವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಇಸ್ಪೀಟ್ ಜುಜಾಟವಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ  ಮೌಂಟೆನ್ಯೂ ಶಾಲೆಯ ಮುಂದಿನ ಗೇಟಿನ ಕಾರಾಗೃಹಕ್ಕೆ ಹೋಗವ ರಸ್ತೆಯಲ್ಲಿ 5 ಜನರು ವಿದ್ಯುತ್ ದೀಪದ ಬೆಳಕಿನಲ್ಲಿ   ಇಸ್ಪೀಟ್ ಜೂಜಾಟವಾಡುತ್ತಿದ್ದ 1)ಕಾಂತರಾಜ 2)ಆರೀಫ್ 3)ಶಂಕರ 4) ಯಶ್ವಂತ್ 5) ಗಿರೀಶ ಇವರುಗಳನ್ನು ವಶಕ್ಕೆ ಪಡೆದು ಅವರ ಬಳಿಯಿದ್ದ 52 ಇಸ್ಪೀಟ್ ಎಲೆಗಳು, ನಗದು ಹಣ 1550 /-ರೂ ಹಾಗೂ ಒಂದು ನ್ಯೂಸ್ ಪೇಪರ್ ನ್ನು ವಶಕ್ಕೆ  ಪಡೆದು  ಅರೋಪಿತರ  ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್ಐ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.


ಅಕ್ರಮ ಮದ್ಯ ಮಾರಾಟ ಹಾಗೂ ಕೊವಿಡ್ 19 ನಿಯಮ ಉಲ್ಲಂಘನೆ  ಪ್ರಕರಣ
ಪಂಚನಹಳ್ಳಿ    ಪೊಲೀಸ್  ಠಾಣೆ
ದಿನಾಂಕ:13/05/2021 ರಂದು ಪಂಚನಹಳ್ಳಿ  ಠಾಣಾ ವ್ಯಾಪ್ತಿಯಲ್ಲಿ  ಕೊರೋನಾ ಸಂಬಂಧ ಗಸ್ತು ಮಾಡುತ್ತಿರುವಾಗ ಬಿಟ್ಟೇನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಕೆರೆಯ ಹತ್ತಿರ ರಸ್ತೆಯ ಬಳಿ ಯಾರೋಒಬ್ಬ ಆಸಾಮಿಯುಸಾರ್ವಜನಿಕರನ್ನು  ಗುಂಪುಕಟ್ಟಿಕೊಂಡು ಕೊವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆಂದು  ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ  ಆರೋಪಿಯು ಕೋವಿಡ್ ನಿಯಮದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಸಾರ್ವಜನಿಕರನ್ನು ಗುಂಪು ಸೇರಿಸಿಕೊಂಡು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು ಆರೋಪಿಯನ್ನು ವಶಕ್ಕೆ ಪಡೆದು ಹೆಸರು ಕೇಳಲಾಗಿ ಮಲ್ಲಿಕಾಜರ್ುನ ಬಿನ್ ಲಕ್ಷ್ಮಣ್ ಎಂದು ತಿಳಿಸಿದ್ದು  ಆತನ ವಶದಲ್ಲಿದ್ದ 1440/- ರೂ ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಅರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾಯರ್ಾಚರಣೆಯಲ್ಲಿ ಪಿ.ಎಸ್ಐ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಸಿಂಗಟಗೆರೆ    ಪೊಲೀಸ್  ಠಾಣೆ
ದಿನಾಂಕ:13/05/2021 ರಂದು ಸಿಂಗಟಗೆರೆ   ಠಾಣಾ ವ್ಯಾಪ್ತಿಯಲ್ಲಿ  ಕೊರೋನಾ ಸಂಬಂಧ ಗಸ್ತು ಮಾಡುತ್ತಿರುವಾಗ ಕುಂದೂರು ಗೇಟ್ ನ ರಸ್ತೆಯಲ್ಲಿ ಕುಂದೂರು  ಗ್ರಾಮದ ವಾಸಿಯಾದ ರಾಜಪ್ಪ ರವರು ಸಾರ್ವಜನಿಕರನ್ನು  ಗುಂಪುಕಟ್ಟಿಕೊಂಡು ಕೊವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆಂದು  ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ  ಆರೋಪಿಯು ಕೋವಿಡ್ ನಿಯಮದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಸಾರ್ವಜನಿಕರನ್ನು ಗುಂಪು ಸೇರಿಸಿಕೊಂಡು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು ರಾಜಪ್ಪರವರನ್ನು  ವಶಕ್ಕೆ ಪಡೆದು ಆತನ ವಶದಲ್ಲಿದ್ದ  90 ಎಂ.ಎಲ್ ನ 49 ರಾಜಾವಿಸ್ಕಿ ಪ್ಯಾಕೆಟ್ ಗಳನ್ನು ವಶಪಡಿಸಿಕೊಂಡಿದ್ದು ಮದ್ಯದ ಅಂದಾಜು ಬೆಲೆ 1715/- ರೂ ಆಗಿದ್ದು,  ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಅರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್ಐ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಜಯಪುರ   ಪೊಲೀಸ್  ಠಾಣೆ
ದಿನಾಂಕ:13/05/2021 ರಂದು ಜಯಪುರ  ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಮಾಡುತ್ತಿರುವಾಗ ಬಸರಿಕಟ್ಟೆಯ ನಮ್ಮೂರ ಹೋಟೆಲ್  ಮುಂಭಾಗ  ಯಾರೋ ಒಬ್ಬ ಆಸಾಮಿಯು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಯಾರೋ ಒಬ್ಬ ಆಸಾಮಿಯು ಮದ್ಯವನ್ನು ಮಾರಾಟ ಮಾಡುತ್ತಿದ್ದು ಸದರಿ ಆಸಾಮಿಯನ್ನು ಹಾಗೂ ಆತನ  ಬಳಿಯಿದ್ದ ಒಟ್ಟು 983.64 /-  ರೂ ಬೆಲೆಯ ಮದ್ಯವನ್ನು ಹಾಗೂ ಮದ್ಯ ಮಾರಾಟದಿಂದ ಬಂದ 300 ರೂ ಹಣವನ್ನು  ಅಮಾನತ್ತುಪಡಿಸಿಕೊಂಡು ಬಂದು ಅರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್ಐ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಮರಳು ಕಳ್ಳತನ ಪ್ರಕರಣ
ಮೂಡಿಗೆರೆ   ಪೊಲೀಸ್  ಠಾಣೆ
ದಿನಾಂಕ:13/05/2021 ರಂದು ಪಿರ್ಯಾದುದಾರರು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಮಾಡುತ್ತಿರುವಾಗ ಕೆಸವಳಲು ಗ್ರಾಮದ ಶ್ರೀ ರಾಮ ಹರಿಜನ ಕಾಲೋನಿಯ ರಸ್ತೆಯ ಹತ್ತಿರಕೆಸವಳು ಗ್ರಾಮದ ರಮೇಶನ ಮನೆಯ ಹತ್ತಿರ  ತಿರುವಿನಲ್ಲಿ  ಮರಳನ್ನು ಟ್ರಾಕ್ಟರ್ನಲ್ಲಿ ಲೋಡ್ ಮಾಡಿಕೊಂಡು ಬರುತ್ತಿದ್ದು  ನಮ್ಮಗಳನ್ನು ನೋಡಿ ಓಡಿಹೋಗಿ ಪರಾರಿಯಾಗಿರುತ್ತಾನೆ. ಟ್ರಾಕ್ಟರ್ ನಂ ಕೆಎ18 ಟಿಎ- 1549 ಹಾಗೂ  ಟ್ರೆಲರ್ನಂ ಕೆಎ 18 ಟಿಎ 8957 ಆಗಿದ್ದು ಸದರಿ ಟ್ರಾಕ್ಟರ್ ಚಾಲಕ/ಮಾಲೀಕನು ಸರ್ಕಾರದ ಸ್ವತ್ತಾದ ಮರಳನ್ನು ಎಲ್ಲಿಂದಲೋ ಕಳವು ಮಾಡಿಕೊಂಡು ಬಂದು ಅಕ್ರಮ ಸಾಗಾಟ ಮಾಡುತ್ತಿರುವುದು ಕಂಡುಬಂದಿದ್ದು, ಮರಳಿನ ಅಂದಾಜು ಬೆಲೆ 2500/- ರೂ ಆಗಿದ್ದು ಸದರಿ ಟ್ರಾಕ್ಟರ್ ಚಾಲಕ/ಮಾಲೀಕನ ವಿರುದ್ದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.
 

ಇತ್ತೀಚಿನ ನವೀಕರಣ​ : 14-05-2021 07:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080