ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ  ಪ್ರಕರಣ.

ಕಡೂರು ಪೊಲೀಸ್ ಠಾಣೆ.

ದಿನಾಂಕ;14-05-2022 ರಂದು ಮಂಜುನಾಥ ಬಿನ್ ರುದ್ರಾಚಾರಿ, ವಾಸ ಶಿವಪುರ ಗ್ರಾಮ ಹೊಳಲ್ಕೆರೆ ತಾಲ್ಲೋಕು ರವರು ನೀಡಿದ ದೂರೇನೆಂದರೆ, ಪಿರ್ಯಾದುದಾರರ ಮಗಳು ಅರುಣ್ ಕುಮಾರಿ  ಇವಳು, ಕಡೂರು ಲಕ್ಷ್ಮೀಶ ನಗರದಲ್ಲಿ ಇರುವ ಪಿರ್ಯಾದಿ ತಮ್ಮ ಅಶೋಕ ರವರ ಮನೆಯಲ್ಲಿ ಇದ್ದವಳು, ದಿನಾಂಕ;04/05/2022 ರಂದು ಅರಣ್ ಕುಮಾರಿಯು ತಮ್ಮನ ಮನೆಯಿಂದ ಯಾರಿಗೂ ಹೇಳದೆ ಮನೆಯಿಂದ ಹೋದವಳು, ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು, ಈವರೆಗೂ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲವೆಂದು, ಕಾಣೆಯಾಗಿರುವ ಅರಣ್ ಕುಮಾರಿ ಎಂ. , 5.5 ಅಡಿ ಎತ್ತರ, 26 ವರ್ಷ, ಗೋದಿ ಮೈ ಬಣ್ಣ, ಸಾಧಾರಣ ಮೈ ಕಟ್ಟು, ಗುಲಾಬಿ  ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಕಾಣೆಯಾಗಿರುವ ಅರುಣ್ ಕುಮಾರಿ ಯನ್ನು ಪತ್ತೆ ಮಾಡಿಕೊಡುವಂತೆ, ನೀಡಿದ ದೂರಿನ ಮೇರೆಗೆ,  ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಡೂರು ಪೊಲೀಸ್ ಠಾಣೆ.

ದಿನಾಂಕ;14-05-2022 ರಂದು ಶ್ರೀನಿವಾಸ ಬಿನ್ ಗಿಡ್ಡಪ್ಪ, ವಾಸ ಮತಿಘಟ್ಟ ಕಡೂರು ರವರು ನೀಡಿದ ದೂರೇನೆಂದರೆ, ಪಿರ್ಯಾದುದಾರರ ಹೆಂಡತಿ ಆಶಾ ತನ್ನ ಮಗ ಉಲ್ಲಾಸ್ ನನ್ನು ದಿನಾಂಕ;27/04/2022 ರಂದು ಮನೆಯಿಂದ ಕೆಲಸಕ್ಕೆ ಹೋದವರು, ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು, ಈವರೆಗೂ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲವೆಂದು, ಕಾಣೆಯಾಗಿರುವ ತನ್ನ ಹೆಂಡತಿ ಅಶಾ,  4.5 ಅಡಿ ಎತ್ತರ, 34 ವರ್ಷ, ಗೋದಿ ಮೈ ಬಣ್ಣ , ಕಪ್ಪು ತಲೆ ಕೂದಲು ಮನೆಯಿಂದ ಹೋಗುವಾಗ ಕೆಂಪು ಚೂಡಿದಾ ಧರಿಸಿರುತ್ತಾಳೆ. ಮತ್ತು ಮಗ ಉಲ್ಲಾಸ್ 4 ವರ್ಷ, ಎಣ್ಣೆಗೆಂಪು ಬಣ್ಣ, ಮನೆಯಿಂದ ಹೋಗುವಾಗ ನೀಲಿ ಬಣ್ಣದ ಟೀ ಶರಟು ಮತ್ತು ಚಡ್ಡಿ ಧರಿಸಿರುತ್ತಾನೆ. ಕಾಣೆಯಾಗಿರುವ ತನ್ನ ಹೆಂಡತಿ ಅಶಾ ಮತ್ತು ಮಗ ಉಲ್ಲಾಸ್  ರವರನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ  ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಎನ್.ಆರ್. ಪುರ ಪೊಲೀಸ್ ಠಾಣೆ.

ದಿನಾಂಕ;13-05-2022 ರಂದು ಶ್ರೀಮತಿ ದಾನಮ್ಮ ಕೊಂ ಪರಮೇಶ , ವಾಸ ಸುಗ್ಗಪ್ಪನಮಠ ಹಿಳ್ಳುವಳ್ಳಿ ಗ್ರಾಮ ರವರು, ನೀಡಿದ ದೂರೇನೆಂದರೆ, ಪಿರ್ಯಾದುದಾರರ ಮಗಳು ನಿರ್ಮಲ ಡಿಗ್ರಿ ವಿದ್ಯಾಭ್ಯಾಸ ಮಾಡುತ್ತಿದ್ದು, ಪರೀಕ್ಷೆ  ನಡೆಯುತ್ತಿದ್ದು ಮನೆಯಲ್ಲೇ ಇದ್ದು, ದಿನಾಂಕ;13/05/2022 ರಂದು ಮನೆಯಲ್ಲಿ ಇದ್ದವಳು, ಮನೆ  ಬಿಟ್ಟು ಹೋಗಿದ್ದು, ಹೋದವಳು, ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು ಈವರೆಗೂ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ತನ್ನ ಮಗಳು ನಿರ್ಮಲ ಇವಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ  ಎನ್.ಆರ್. ಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ;13-05-2022 ರಂದು ಶ್ರೀಮತಿ ಶೋಭಾ ಕೊಂ ರಮೇಶ ತುದಿಪೇಟೆ ತರೀಕೆರೆ ಟೌನ್ ರವರು ನೀಡಿದ ದೂರೇನೆಂದರೆ, ಪಿರ್ಯಾದುದಾರರ ಗಂಡ ರಮೇಶ ಇವರು, ಸುಮಾರು 2020 ನೇ ಏಪ್ರೀಲ್ ತಿಂಗಳಿನಲ್ಲಿ ಮನೆಯಿಂದ ಕೆಲಸಕ್ಕೆ ಹೋದವರು,  ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು ಈವರೆಗೂ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲ ವೆಂದು, ಕಾಣೆಯಾಗಿರುವ ರಮೇಶ ಬಿನ್ ಹನುಮಂತಪ್ಪ , 5.6 ಅಡಿ ಎತ್ತರ, 50 ವರ್ಷ, ಎಣ್ಣೆಗೆಂಪು ಬಣ್ಣ , ಬಲ ಕೈ ಮತ್ತು ಎಡ ಕೈ ಯಲ್ಲಿ ಆಂಜನೇಯಸ್ವಾಮಿ ಹಚ್ಚೆ ಗುರುತು, ಕನ್ನಡ, ತಮಿಳು, ತೆಲಗು, ಉರ್ದು ಬಾಷೆ ಮಾತನಾಡುತ್ತಾರೆ. ಕಾಣೆಯಾಗಿರುವ ತನ್ನ ಗಂಡ  ರಮೇಶ ರವರನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ  ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 14-05-2022 07:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080