ಅಭಿಪ್ರಾಯ / ಸಲಹೆಗಳು

ಅಕ್ರಮ ಗಾಂಜಾ ಮಾರಾಟ ಪ್ರಕರಣ

ಸಿ.ಇ.ಎನ್. ಪೊಲೀಸ್ ಠಾಣೆ.

ದಿನಾಂಕ 14/06/2022 ರಂದು ಬೆಳಿಗ್ಗೆ ಚಿಕ್ಕಮಗಳೂರು ನಗರದ ಕೋಟೆ ಸರ್ಕಲ್ ಹತ್ತಿರದ ರಸ್ತೆ ಕ್ರಾಸ್ ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಮಹಮದ್ ಅಫ್ತಬ್ ಯಾನೆ ಚೈನಿ ಬಿನ್ ಸಿಖಂದರ್ , ವಾಸ ಅಕ್ಸಾ ಮಸೀದಿ ಹತ್ತಿರ, ಸಂತೆ ಮಾರ್ಕೇಟ್ ಚಿಕ್ಕಮಗಳೂರು ಟೌನ್ ನನ್ನು ವಶಕ್ಕೆ ಪಡೆದು, ಅರೋಪಿಯು ಅಕ್ರಮವಾಗಿ ಹೊಂದಿದ್ದ   10,000/- ರೂ ಬೆಲೆಯ 320 ಗ್ರಾಂ ಒಣ ಗಾಂಜಾ ಮತ್ತು ಗಾಂಜಾ ಮಾರಾಟದಿಂದ ಸಂಗ್ರಹಿಸಿದ 500/- ರೂ. ನಗದು ಹಣವನ್ನು ಅಮಾನತ್ತುಪಡಿಸಿಕೊಂಡು ಬಂದು, ಅರೋಫಿತನ ವಿರುದ್ದ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಸಿ.ಇ.ಎನ್. ಠಾಣಾ ಪಿ.ಐ. ಮುತ್ತುರಾಜು ಹೆಚ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಕಳಸ ಪೊಲೀಸ್ ಠಾಣೆ.

ದಿನಾಂಕ;14/06/2022 ರಂದು ಪಿರ್ಯಾದಿ ರಾಧ ಕೊಂ ಲೇಟ್ ಚಂದ್ರಶೇಖರ ಸೋಮನಕಟ್ಟೆ ಹೊರನಾಡು ಗ್ರಾಮ ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಮಗಳು ಅಮೃತಾ ಸಿ.  ಇವಳು  ದಿನಾಂಕ; 12/06/2022 ರಂದು ಮನೆಯಿಂದ ಕೆಲಸಕ್ಕೆ ಕಳಸಕ್ಕೆ ಹೋದವಳು ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದು, ಈವರೆಗೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ಅಮೃತಾ ಸಿ, 22 ವರ್ಷ, ಸಾದಾರಣ ಮೈ ಕಟ್ಟು, ಗೋದಿ ಮೈ ಬಣ್ಣ, ಕೋಲುಮುಖ, 165 ಸೆಂಟಿ ಮೀಟರ್ ಎತ್ತರ, ಗುಲಾಬಿ ಕಲರ್ ಚೂಡಿದಾರ ಟಾಪ್ ಮತ್ತು ಬಿಳಿ ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ.  ಇವಳನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಕಳಸ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತಾರೆ. 

ಅಕ್ರಮ  ಮಟ್ಕಾ ಜೂಜಾಟ ಪ್ರಕರಣ.

ಜಯಪುರ ಪೊಲೀಸ್ ಠಾಣೆ.

ದಿನಾಂಕ:13-06-2022 ರಂದು ಜಯಪುರ ಪೊಲೀಸ್ ಠಾಣಾ ಸರಹದ್ದಿನ ಎಲೆಮಡಲು ಗ್ರಾಮದಲ್ಲಿ ಸೋಮಪೂಜಾರಿ ರವರ ಮನೆಯ ಮುಂದೆ ಸಾರ್ವಜನಿಕರ ಸ್ಥಳದಲ್ಲಿ  ಅಕ್ರಮವಾಗಿ ಮಟ್ಕಾ ಜೂಜಾಟ ಆಡಿಸುತ್ತಿದ್ದ  ಚಂದ್ರಶೇಖರ ಬಿನ್ ಬದಿಯ್ಯ, ನಿಡುವಾನ್ ಎಲೆಮಡಲು ವಾಸಿ ಈತನನ್ನು ವಶಕ್ಕೆ ಪಡೆದು, ಅರೋಪಿತನು ಸಾರ್ವಜನಿಕರಿಂದ ಸಂಗ್ರಹಿಸಿದ ಹಣ 2130 ರೂ ನಗದು ಹಣ , ಒಂದು ಮಟ್ಕಾ ಚೀಟಿ , ಒಂದು ಬಾಲ್ ಪೆನ್ ಅನ್ನು ಅಮಾನತ್ತುಪಡಿಸಿಕೊಂಡಿದ್ದು, ಅರೋಪಿಯು ಸಂಗ್ರಹಿಸಿದ ಮಟ್ಕಾದ ಹಣವನ್ನು ಶಿವು ಬಿನ್ ಅರ್ಜುನ್ ಶಾಂತಿಪುರ, ಎಲೆಮಡಲು ವಾಸಿ, ಈತನಿಗೆ ನೀಡುತ್ತಿದ್ದು, ಆರೋಪಿತರ ವಿರುದ್ದ ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಜಯಪುರ ಠಾಣಾ ಪಿ.ಎಸ್.ಐ. ಶ್ರೀಮತಿ ಜ್ಯೋತಿ, ಎನ್. ಎ.  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಸ್ಪೋಟಕ ಕಾಯ್ದೆ ಪ್ರಕರಣ

ಲಿಂಗದಹಳ್ಳಿ ಪೊಲೀಸ್ ಠಾಣೆ.

ದಿನಾಂಕ;13/06/2022 ರಂದು ರಾತ್ರಿ ತರೀಕೆರೆ ಶಾಖಾ ವ್ಯಾಫ್ತಿಯ ಅರಣ್ಯಾಧಿಕಾರಿ ಸತೀಶ್ ಹೆಚ್. ಪೂಜಾರ್ ಇವರು ನೀಡಿದ ದೂರಿನಲ್ಲಿ ಪಿರ್ಯಾದಿ ಮತ್ತು ಸಿಬ್ಬಂದಿಯವರು ದ್ಯಾಂಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಗಸ್ತಿನಲ್ಲಿ ಇರುವಾಗ ಒಬ್ಬ ಅಪರಿಚಿತ ಓಡಿ ಹೋಗಿದ್ದು ಇನ್ನೊಬ್ಬ ಲೋಹಿತ್ ಬಿನ್ ಲಿಂಗರಾಜು, ವಿಜಯ ನಗರ ಬಡಾವಣೆ, ತರೀಕೆರೆ. ಈತನನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಕೆಎ-18-ಇಎ-3085 ರ ಬೈಕಿನಲ್ಲಿ ಬಂದು ಅಕ್ರಮವಾಗಿ ಹಂದಿಗಳನ್ನು ಬೇಟೆಯಾಡಲು ಬಂದಿರುವುದಾಗಿ ತಿಳಿಸಿದ್ದು, ಲೋಹಿತ್ ಈತನು 22 ಹಂದಿ ಬಾಂಬ್ (ಕಚ್ಚಾ ಬಾಂಬ್) ಗಳನ್ನು ಹೊಂದಿದ್ದು, ಈತನ ಜೊತೆಗಿದ್ದವನ ಬಗ್ಗೆ ಕೇಳಲಾಗಿ. ನರಸಿಂಹ, ಲಿಂಗದಹಳ್ಳಿ ರಸ್ತೆ ಕೋಡಿ ಕ್ಯಾಂಪ್ ತರೀಕೆರೆ ವಾಸಿ ಎಂದು ತಿಳಿಸಿರುವುದಾಗಿ, ಲೋಹಿತ್ ನನ್ನು ವಶಕ್ಕೆ ಪಡೆದು , ಆತನು ಅಕ್ರಮವಾಗಿ ಹೊಂದಿದ್ದ ಕಚ್ಚಾ ಬಾಂಬ್ ಗಳು ಹಾಗೂ ಬೈಕ್ ಸಮೇತ ಠಾಣೆಗೆ ಬಂದು ನೀಡಿದ ದೂರಿನ ಮೇರೆಗೆ ಲಿಂಗದಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮರಳು ಕಳ್ಳತನ ಪ್ರಕರಣ

ಲಕ್ಕವಳ್ಳಿ ಪೊಲೀಸ್ ಠಾಣೆ;

ದಿನಾಂಕ ;13/06/2022 ರಂದು ಲಕ್ಕವಳ್ಳಿ ಠಾಣಾ ಸರಹದ್ದಿನ ಸಿದ್ಲಿಪುರ ಗೋಂದಿ ಅಣೆಕಟ್ಟೆ ಬಳಿಯ ಭದ್ರಾನದಿಯಲ್ಲಿ ಅಕ್ರಮವಾಗಿ ಮರಳನ್ನು ತೆಗೆದು ಕೆಎ-18-ಎ-1986 ಮತ್ತು ಕೆಎ-31-6719 ರ ಪಿಕಪ್ ವಾಹನಕ್ಕೆ ಲೋಡ್ ಮಾಡುತ್ತಿದ್ದು , ದಾಳಿ ವೇಳೆ ಮರಳನ್ನು ಲೋಡ್ ಮಾಡುತ್ತಿದ್ದವರು ಓಡಿ ಹೋಗಿದು, ಪಿಕಪ್ ವಾಹನ ಚಾಲಕ ಅನಂದ ಬಿನ್ ಸಿದ್ರಾಮಯ್ಯ, ವಾಸ ಕರಕುಚ್ಚಿ  ರೈಲ್ವೇ ಗೇಟ್ ಈತನನ್ನು ವಶಕ್ಕೆ ಪಡೆದು ಓಡಿ ಹೋದವರ ಬಗ್ಗೆ ಕೇಳಲಾಗಿ ಕುಮಾರ, ಅಜಾಮ್, ಗುರು , ಗೋಪಿ, ಸಾಗರ್ ಮತ್ತು ಕುಟ್ಟಿ ಎಂದು ತಿಳಿಸಿದ್ದು,  ಮರಳನ್ನು ತುಂಬುತ್ತಿದ್ದ 2 ವಾಹನಗಳು ಮರಳು ಸಮೇತ ಮತ್ತು  ಪಿಕ್ ಅಪ್ ಚಾಲಕ ನನ್ನು ವಶಕ್ಕೆ ಪಡೆದು ಠಾಣೆಗೆ ಬಂದು ಆರೋಫಿತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಶಂಭುಲಿಂಗಯ್ಯ ಎಂ. ಈ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

 

ಇತ್ತೀಚಿನ ನವೀಕರಣ​ : 14-06-2022 06:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080