ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಬೀರೂರು  ಪೊಲೀಸ್ ಠಾಣೆ

ದಿನಾಂಕ:13/09/2021 ರಂದು ರಾಮಯ್ಯ ಬಿನ್ ಗೋವಿಂದಪ್ಪರವರು ನೀಡಿದ ದೂರಿನಲ್ಲಿ ದಿನಾಂಕ 13-09-2021 ರಂದು ಬೆಳಿಗ್ಗೆ ನಾನು ಹಾಗೂ ನನ್ನ ಮಾವನವರಾದ ಸಣ್ಣಗುರುವಪ್ಪರವರು ಬೀರೂರು ಸರ್ಕಾರಿ ಆಸ್ಪತ್ರೆಯಲ್ಲಿ ಕೊವಿಡ್ ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದು ಆಸ್ಪತ್ರೆಯಲ್ಲಿ ಇಂಜೆಕ್ಷನ್ ಇಲ್ಲವೆಂದು ತಿಳಿಸಿದ ಕಾರಣ ವಾಪಾಸ್ ಊರಿಗೆ ಹೋಗಲೆಂದು ಹೊರಟಿದ್ದು, ನನ್ನ ಮಾವನವರು  ಮಾತ್ರೆ ತರಲು ಕೆ.ಎಲ್.ವಿ ಮೆಡಿಕಲ್ ಶಾಪ್ ಕಡೆಗೆ ಹೋಗುತ್ತಿರುವಾಗ ಎಂ.ಜಿ ಸರ್ಕಲ್ ಕಡೆಯಿಂದ ಬಂದ ಕೆಎ-66 ಜೆ-9386 ಸ್ಕೂಟಿ ಚಾಲಕ ಸ್ಕೂಟಿಯನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ನನ್ನ ಮಾವನಾದ ಸಣ್ಣಗುರುವಪ್ಪರವರಿಗೆ  ಡಿಕ್ಕಿ ಹೊಡೆಸಿದ ಪರಿಣಾಮ  ಪಕ್ಕೆಗೆ ಹಾಗೂ ತಲೆಗೆ  ತೀವ್ರತರಹದ ಪೆಟ್ಟಾಗಿ ಕೆಳಗೆ ಕುಸಿದು ಬಿದ್ದಿದ್ದು  ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಸ್ಕೂಟಿ ಚಾಲಕ ಮನೋಜ್ ರವರ ವಿರುದ್ದ  ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಬೀರೂರು ಠಾಣೆಯಲ್ಲಿ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕರ್ನಾಟಕ ಅರಣ್ಯ ಕಾಯ್ದೆ .

ಗೋಣಿಬೀಡು  ಪೊಲೀಸ್ ಠಾಣೆ

ದಿನಾಂಕ:13/09/2021 ರಂದು 16-50 ಗಂಟೆ ಸಮಯದಲ್ಲಿ ಅಣಜೂರು ಬಸ್ ನಿಲ್ದಾಣದ ಬಳಿ ಅಕ್ರಮವಾಗಿ ಯಾವುದೇ ಪರವಾನಗಿಯನ್ನು ಹೊಂದದೆ , ಗಂಧದ ತುಂಡುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಪ್ಲಾಸ್ಟಿಕ್ ಬ್ಯಾಗಿನಲ್ಲಿ ಇಟ್ಟುಕೊಂಡಿದ್ದ ಮೊಯುದ್ದೀನ್ ಬಿನ್ ಲೇಟ್ ಅಬ್ದುಲ್ ಖಾದರ್, ಹುಂಡುಗಳಿ ಗ್ರಾಮ, ಮೂಡಿಗೆರೆ ತಾಲ್ಲೂಕು ಇತನನ್ನು ವಶಕ್ಕೆ ಪಡೆದು ಆತನ ಬಳಿಯಿದ್ದ  ಅಮಾನತ್ತುಪಡಿಸಿಕೊಂಡು ಆರೋಪಿತನ ವಿರುದ್ದ  ಗೋಣಿಬೀಡು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಧನಂಜಯ ಎಂ.ಆರ್. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ.

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ:-13-09-2021 ರಂದು ಶಂಕರಪ್ಪ ಬಿನ್ ಲೇಟ್ ಚನ್ನಪ್ಪ, ಸೊಕ್ಕೆ ಗ್ರಾಮವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ, ನನ್ನ ತಂದೆಯವರಿಗೆ 4 ಜನ ಗಂಡು ಮಕ್ಕಳಿದ್ದು ಅದರಲ್ಲಿ 3ನೆಯ ಮಗನಾದ ನಾಗರಾಜು , 62 ವರ್ಷ ಈತನು ನನ್ನೊಂದಿಗೆ ವಾಸವಾಗಿದ್ದು ,ದಿನಾಂಕ 11-02-2021 ರಂದು ಬೆಳಗಿನ ಜಾವ ಮನೆ ಬಿಟ್ಟು ಹೋಗಿದ್ದು , ಸಂಬಂಧಿಕರ, ನೆಂಟರಿಷ್ಟರ ಹಾಗೂ ಪೂಜ್ಯ ಸ್ಥಳಗಳಲ್ಲಿ ಎಲ್ಲಾ ಕಡೆ ಹುಡುಕಾಡಲಾಗಿ ಎಲ್ಲಿಯೂ ಪತ್ತೆಯಾಗದೇ ಇರುವುದರಿಂದ ನಾಗರಾಜನನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನನ್ವಯ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 14-09-2021 06:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080