ಅಭಿಪ್ರಾಯ / ಸಲಹೆಗಳು

ನಗರ ಪೊಲೀಸ್ ಠಾಣೆ.

ವಂಚನೆ ಪ್ರಕರಣ

ದಿನಾಂಕ:13/11/2021ರಂದು ಮಧ್ಯಾಹ್ನ 2-45 ಗಂಟೆಯಲ್ಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣದ ಹತ್ತಿರ ಅಂಬರ್ ಗ್ರೀಸ್ (ತಿಮಿಂಗಿಲ ವಾಂತಿ) ಅನ್ನು ಕೆಎ 18 ಇಜೆ 4751 ರ ಸ್ಕೂಟಿಯಲ್ಲಿ ತಂದು ಮಾರಾಟ ಮಾಡುತಿದ್ದಾರೆಂದು ಪಿಎಸ್ಐ ನಗರ ಠಾಣೆ ದೇವರಾಜ ಎಸ್ ಬಿರದಾರ ಇವರಿಗೆ ಬಂದ ಖಚಿತ ಮಾಹಿತಿಯಂತೆ ಪಿಎಸೈ ರವರು ಠಾಣಾ ಎಎಸ್ಐ ರಮೇಶ್, ಹೆಚಿ.ಸಿ. 324 ಶಶಿಧರ ಹಾಗು ಪಿಸಿ 607  ಮತ್ತು ಪಂಚರೊಂದಿಗೆ ಸ್ಥಳಕ್ಕೆ ಬಂದು ನೋಡಿದಾಗ 1] ಚಂದ್ರಶೇಖರ್ ಪಾಟೀಲ್, ಶಿವಮೊಗ್ಗ 2] ಮಧು, ಕೆ.ಎಂ. ದಂಟರಮಕ್ಕಿ, ಚಿಕ್ಕಮಗಳೂರು ರವರುಗಳು ಸಾರ್ವಜನಿಕರಿಗೆ ಗೌಪ್ಯವಾಗಿ ಅಂಬರ್ ಗ್ರೀಸ್ (ತಿಮಿಂಗಿಲ ವಾಂತಿ) ಇದಕ್ಕೆ ಬೆಂಗಳೂರು ಮತ್ತು ವಿದೇಶದಲ್ಲಿ ಕೋಟ್ಯಾಂತರ ಬೆಲೆ ಇದೆ ಎಂದು ವಂಚಿಸಿ ಮಾರಾಟ ಮಾಡಲು ಪಯತ್ನಿಸಿದ್ದವರನ್ನು ಹಿಡಿದು ಅವರಲ್ಲಿ ಇದ್ದ 1] ಒಂದು ಕವರ್ನಲ್ಲಿ 1 ಕೆಜಿ 790 ಗ್ರಾಂನಷ್ಟು  ತೂಕದ 2] ಒಂದು ಕವರ್ನಲ್ಲಿ 650 ಗ್ರಾಂನಷ್ಟು  ತೂಕ 3] ಒಂದು ಕವರ್ನಲ್ಲಿ 370 ಗ್ರಾಂ ತೂಕ ಒಟ್ಟು ಎಲ್ಲಾ ಸೇರಿ 2 ಕೆಜಿ 800 ಗ್ರಾಂ ಇರುತ್ತದೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

  ಬೀರೂರು ಪೊಲೀಸ್ ಠಾಣೆ.

 ರಸ್ತೆ ಅಪಘಾತ ಪ್ರಕರಣ

ದಿನಾಂಕ:13/11/2021ರಂದು ಮಧ್ಯಾಹ್ನ 12-45 ಗಂಟೆಯಲ್ಲಿ ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯ  ಬಿ.ಕೆ. ಹೊಸೂರು ಗೇಟ್ನ ಸಾರ್ವಜನಿಕ ಬಸ್ನಿಲ್ದಾಣದಿಂದ ಬೀರೂರು ಕಡೆಗೆ ಪಿರ್ಯಾದಿ ಮತ್ತು ಆತನ ಸ್ನೇಹಿತ ಮಾತನಾಡುತ್ತ ನಿಂತಿದ್ದಾಗ, ಅದೇ ಗ್ರಾಮದ ಹಾಲಪ್ಪ ಇವರು ಅವರ ಬಾಬ್ತು  ಕೆಎ 18 ಇಸಿ 1045 ರ ಮೋಟಾರ್ ಬೈಕಿನಲ್ಲಿ ಬೀರೂರು ಕಡೆಗೆ ಹೋಗುತ್ತಿರುವಾಗ ಬೀರೂರು ಕಡೆಯಿಂದ ಯಗಟಿ ಕಡೆಗೆ ಹೋಗಲು ಬರುತ್ತಿದ್ದ ಕೆಎ 09 ಎಂಇ 6346 ರ ಕಾರಿನ ಚಾಲಕನು ತನ್ನ ಕಾರನ್ನು ಅತಿವೇಗ ಹಾಗೂ ಅಜಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹಾಲಪ್ಪ ರವರ ಬೈಕಿಗೆ ಡಿಕ್ಕಿ ಹೊಡೆಯಿಸಿದ ಪರಿಣಾಮ ಹಾಲಪ್ಪನವರಿಗೆ ಬಲಗಾಲಿನ ತೊಡೆಗೆ, ತಲೆಗೆ, ಬಲಕೈಗೆ ಪೆಟ್ಟಾಗಿರುತ್ತದೆ. ಹೆಚ್ಚಿನ ಚಿಕಿತ್ಸೆಗೆ ವೈದ್ಯರ ಸಲಹೆ ಮೇರೆಗೆ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿರುತ್ತಾರೆ. ಇತ್ಯಾದಿ ಈ ಬಗ್ಗೆ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

 ಗೋಣಿಬೀಡು ಪೊಲೀಸ್ ಠಾಣೆ.

 ಮರಳು ಕಳ್ಳತನ ಪ್ರಕರಣ

ದಿನಾಂಕ:13/11/2021ರಂದು ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಅಂಗಡಿ ಗ್ರಾಮದ ರ್ಯಾಂಪ್ ಬಳಿ ಯಾರೋ ಹೇಮಾವತಿ ಹೊಳೆಯಲ್ಲಿ ಅಕ್ರಮವಾಗಿ ಟ್ಯಾಕ್ಟರ್ನಲ್ಲಿ ಮರಳು ತುಂಬುತ್ತಿರುವ ಬಗ್ಗೆ ಮಾಹಿತಿ ಪಡೆದ ಪಿಎಸ್ಐ ರವರು ಸಿಬ್ಬಂದಿಗಳಾದ  ಶಿವಕುಮಾರನಾಯ್ಕ ಪಿಸಿ 52 ಸಂತೋಶಕುಮಾರ್ ಪಿಸಿ 198, ಲೋಕೇಶ ಪಿಸಿ 107 ಹಾಗೂ ಪಾಲಾಕ್ಷ ಎಪಿಸಿ 57 ರ ಜೊತೆಯಲ್ಲಿ  ಇಲಾಖಾ ಜೀಪಿನಲ್ಲಿ ಪಂಚರನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ಸಮವಸ್ತದಲ್ಲಿದ್ದ ಪೊಲೀಸರನ್ನು ನೋಡಿ ಮರಳನ್ನು ತುಂಬುತಿದ್ದವರು ಓಡಿ ಹೋಗಿದ್ದು, ಅಲ್ಲೆ ಇದ್ದ ಮರಳು ತುಂಬಿದ್ದ ಟ್ರಾಕ್ಟರನ್ನು ನೋಡಲಾಗಿ ಹಸಿರು ಬಣ್ಣದ ಜಾನ್ಡಿರ್ 5105 ಕಂಪನಿಗೆ ಸೇರಿದ್ದು ಇಂಜಿನ್ ಮುಂಬಾಗದಲ್ಲಿ ಕೆಎ 29 ಟಿಬಿ 5657 ಎಂದು ಇರುತ್ತದೆ. ಸದರಿ ಮರಳಿನ ಅಂದಾಜು ಮೌಲ್ಯ ಸುಮಾರು 2 ಸಾವಿರ ಇರಬಹುದೆಂದು ಪಂಚರು ಅಭಿಪ್ರಾಯಿಸಿರುತ್ತಾರೆ. ಈ ಬಗ್ಗೆ ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

 ಗ್ರಾಮಾಂತರಪೊಲೀಸ್ ಠಾಣೆ.

 ರಸ್ತೆ ಅಪಘಾತ ಪ್ರಕರಣ

ದಿನಾಂಕ:14/11/2021ರಂದು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲಂದೂರು ರಸ್ತೆಯ ಗಡಬನಹಳ್ಳಿ ಗ್ರಾಮದ ಸೇತುವೆಯಿಂದ ಸ್ವಲ್ಪ ಮುಂದೆ ಪಿರ್ಯಾದಿ ಗಾಯಾಳು ಮಹಮ್ಮದ್ ಮತ್ತು ಖಾದರ್ ರವರುಗಳು ಕೆಎ 18 ಇಇ 5676 ರ ಮೋಟಾರ್ ಬೈಕಿನಲ್ಲಿ ಗಡಬನಹಳ್ಳಿಗೆ ಹೋಗುತ್ತಿರುವಾಗ ಎದುರುಗಡೆಯಿಂದ ಚಿಕ್ಕಮಗಳೂರು ಕಡೆಗೆ ಬರುತ್ತಿದ್ದ ಕೆಎ 18 ಎಂಎ 1525 ನಂಬರಿನ  ಕಾರಿನ ಚಾಲಕ ಆವತಿಯ ಕುಲದೀಪ್ನು ಕಾರನ್ನು ಅತಿವೇಗ ಹಾಗೂ ಅಜಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ಬೈಕಿಗೆ ಡಿಕ್ಕಿ ಹೊಡೆಯಿಸಿದ ಪರಿಣಾಮ ಪಿರ್ಯಾದಿ ಮಹಮ್ಮದ್ ಇವರಿಗೆ ಬಲಗಾಲಿಗೆ, ಹಣೆಗೆ ಹಾಗೂ ಎಡಕಾಲಿಗೆ ಮಂಡಿಗೆ ಪೆಟ್ಟಾಗಿ ರಕ್ತ ಬಂದಿರುತ್ತದೆ ಮತ್ತು ಹಿಂಬದಿಯಲ್ಲಿ ಕುಳಿತಿದ್ದ ಖಾದರ್ ರವರಿಗೆ ಬಲಗಾಲಿಗೆ, ಹಣೆಗೆ ಹಾಗೂ ಎಡಕಾಲಿನ ಮಂಡಿಗೆ ಪೆಟ್ಟಾಗಿ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

 ಸಂಚಾರ ಪೊಲೀಸ್ ಠಾಣೆ.

 ರಸ್ತೆ ಅಪಘಾತ ಪ್ರಕರಣ

ದಿನಾಂಕ:14/11/2021ರಂದು ಬೆಳಗ್ಗೆ 9-10 ಗಂಟೆಯಲ್ಲಿ ಪಿರ್ಯಾದಿ ಗಾಯಾಳು  ಚಂದ್ರೇಗೌಡ ಇವರು ಅವರ ಬಾಬ್ತು ಕೆಎ 18 ಕೆ 1548ರ ಟಿವಿಎಸ್ ವಿಕ್ಟರ್ ಬೈಕಿನಲ್ಲಿ ಜಯನಗರ ಸಾಯಿ ಎಂಜಲ್ಸ್ ಶಾಲೆಯ ಮುಂದೆ ಹೋಗುತ್ತಿರುವಾಗ ಎದುರುಗಡೆಯಿಂದ ಚಿಕ್ಕಮಗಳೂರು ಕಡೆಗೆ ಬರುತ್ತಿದ್ದ ಕೆಎ 18 ಪಿ 6942 ನಂಬರಿನ ಕಾರಿನ ಚಾಲಕ ಅತಿವೇಗ ಹಾಗೂ ಅಜಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ಬೈಕಿಗೆ ಡಿಕ್ಕಿ ಹೊಡೆಯಿಸಿದ ಪರಿಣಾಮ ಪಿರ್ಯಾದಿ ಚಂದ್ರೇಗೌಡರಿಗೆ ಎಡಕಾಲಿಗೆ ಮಂಡಿಗೆ, ಎಡಭುಜಕ್ಕೆ  ಪೆಟ್ಟಾಗಿ ರಕ್ತ ಬಂದಿರುತ್ತದೆ. ಕಾರಿನ ಚಾಲಕನು ತನ್ನ ಕಾರನ್ನು ನಿಲ್ಲಿಸದೆ  ಹೋಗಿರುತ್ತಾನೆ. ಈ ಬಗ್ಗೆ  ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

 

ಇತ್ತೀಚಿನ ನವೀಕರಣ​ : 14-11-2021 08:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080