ಅಭಿಪ್ರಾಯ / ಸಲಹೆಗಳು

ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ.

ಕಡೂರು  ಪೊಲೀಸ್ ಠಾಣೆ.

ದಿನಾಂಕ: 14-12-2021 ರಂದು ಶ್ರೀಮತಿ.ಇಂದ್ರಮ್ಮ ಕೋಂ ರಾಜುರಾವ್ರವರು  ನೀಡಿದ ದೂರಿನಲ್ಲಿ ದಿನಾಂಕ:13-12-2021 ರಂದು ಸಂಜೆ 06-30 ಗಂಟೆ ಸಮಯದಲ್ಲಿ ನನ್ನ ಅತ್ತೆಯವರಾದ ಇಂದ್ರಮ್ಮರವರು ಲೋಕಣ್ಣರವರ ಅಂಗಡಿಯಲ್ಲಿ ಸಾಮಾನು ತೆಗೆದುಕೊಂಡು ವಾಪಾಸ್ ಮನೆಗೆ ಬರಲು ಸಂಜೆ 06-45 ಗಂಟೆ ಸಮಯದಲ್ಲಿ ರಸ್ತೆಯನ್ನು ದಾಟುತ್ತಿರುವಾಗ ಪಟ್ಟಣಗೆರೆ  ಗ್ರಾಮದ ಕಡೆಯಿಂದ ಜಿಗಣೆಹಳ್ಳಿ ಗ್ರಾಮದ ಕಡೆಗೆ  ಹೋಗಲು ಬರುತ್ತಿದ್ದ ಕೆಎ-18 ಡಬ್ಲ್ಯೂ 9317 ಬೈಕಿನ ಚಾಲಕ  ಬೈಕ್ನ್ನು   ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಅತ್ತೆಗೆ ಡಿಕ್ಕಿ ಹೊಡೆಸಿದ ಪರಿಣಾಮ  ತಲೆಗೆ ಬಲವಾದ ಪೆಟ್ಟು ಬಿದ್ದು  ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಅಪಘಾತಗೊಳಿಸಿದ ಕೆಎ-18 ಡಬ್ಲ್ಯೂ 9317 ಬೈಕಿನ ಚಾಲಕ  ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಕಡೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಯಗಟಿ  ಪೊಲೀಸ್ ಠಾಣೆ.

ದಿನಾಂಕ: 14-12-2021 ರಂದು ಶ್ರೀಮತಿ.ರುದ್ರಮ್ಮ  ಕೋಂ ಮಹೇಶ್ವರಪ್ಪರವರು ನೀಡಿದ ದೂರಿನಲ್ಲಿ ದಿನಾಂಕ:14-12-2021 ರಂದು ಬೆಳಗ್ಗೆ 06-00 ಗಂಟೆ ಸಮಯದಲ್ಲಿ ನನ್ನ ಗಂಡನವರಾದ ಮಹೇಶ್ವರಪ್ಪ ರವರು ತಮ್ಮ ಬಾಬ್ತು ಕೆಎ-18 ಜಡ್- 8962 ಇಕೋ ಓಮಿನಿಯಲ್ಲಿ ಇ-ತಿಮ್ಲಾಪುರ ತಾಂಡ್ಯದಿಂದ ಕೆಲಸಗಾರರನ್ನು ಕರೆದುಕೊಂಡು ಚೌಳಹಿರಿಯೂರು ಕಡೆಗೆ ಮಡಗಟ್ಟೆ ಜಾಳಿಯ ಹತ್ತಿರ ಬರುತ್ತಿರುವಾಗ ಚೌಳಹಿರಿಯೂರಿನಿಂದ ಅಂತರಘಟ್ಟೆ ಕಡೆಗೆ ಹುಲ್ಲನ್ನು ತುಂಬಿಕೊಂಡುನಂಬರ್ ಆಗದ ಐಚರ್ ಟ್ರಾಕ್ಟರ್ ಚಾಲಕ ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಓಮಿನಿಗೆ ಡಿಕ್ಕಿ ಹೊಡೆಸಿದ ಪರಿಣಾಮ ನನ್ನ ಗಂಡ ಮಹೇಶ್ವರಪ್ಪರವರಿಗೆ ಎದೆಗೆ ,ತಲೆಗೆ ಬಲವಾದ ಪೆಟ್ಟು ಬಿದ್ದು  ಮೃತಪಟ್ಟಿದ್ದು, ಓಮಿನಿಯಲ್ಲಿದ್ದ ಇತರರಿಗೂ ಸಹ ಪೆಟ್ಟಾಗಿದ್ದು, ಅಪಘಾತಗೊಳಿಸಿದ ಐಚರ್ ಟ್ರಾಕ್ಟರ್ ಚಾಲಕನ  ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಯಗಟಿ   ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಅಕ್ರಮ ಮಟ್ಕಾ ಜೂಜಾಟ  ಪ್ರಕರಣ.

ಸಿ.ಇ.ಎನ್. ಪೊಲೀಸ್ ಠಾಣೆ.

ದಿನಾಂಕ:13-12-2021 ರಂದು20-45 ಗಂಟೆ ಸಮಯದಲ್ಲಿ ಚಿಕ್ಕಮಗಳೂರು ನಗರದ ಶಾಂತಿನಗರದ ಚಾಮುಂಡಿ ಕಾಫಿಕ್ಯೂರಿಂಗ್ ಕಾಂಪೌಂಡ್ ಪಕ್ಕದ ಅಂಬೇಡ್ಕರ್ ಸರ್ಕಲ್ ಬಳಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಮಟ್ಕಾ ಜೂಜಾಟವಾಡುತ್ತಿದ್ದ 1) ಮಹಮದ್ ಆಲಿ 2) ಆಸೀಫ್ 3) ಯಾಸಿನ್ 4) ಸುರೇಸ 5) ಮೆಹಬೂಬ್ 6) ಜಾಕಿರ್ 7) ಅಜ್ಮಲ್ 8) ಸುಹೀಲ್ ಪಾಷ 9) ಮೋಹನ್ 10) ವಸಂತ 11) ಸಲೀಂ 12) ಅನ್ವರ್ 13) ಕುಮಾರ 14) ಅನಿಲ 15)ಮಂಜುನಾಥ 16 ) ಮುರುಗ ಇವರುಗಳನ್ನು ವಶಕ್ಕೆ ಪಡೆದು  ಆರೋಪಿಗಳ ವಶದಲ್ಲಿದ್ದ 1) ಮಟ್ಕಾ ನಂಬರ್ಗಳನ್ನು ಬರೆದಿರುವ ಒಂದು ಹಾಳೆ 2) ಒಂದು ಪೆನೆ 3) 53,250 ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡು  ಆರೋಪಿಗಳ  ವಿರುದ ್ದಸಿಇಎನ್  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲಿ ಪಿ.ಐ.ಮುತ್ತುರಾಜ್  ಹಾಗೂ ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.      

ಮನುಷ್ಯ ಕಾಣೆ  ಪ್ರಕರಣ.

ಲಕ್ಕವಳ್ಳಿ  ಪೊಲೀಸ್ ಠಾಣೆ.

ದಿನಾಂಕ:13-12-2021 ರಂದು ಲಕ್ಕವಳ್ಳಿ  ಪೊಲೀಸ್ ಠಾಣಾ ಸರಹದ್ದಿನ ಕರಕುಚ್ಚಿ ಗ್ರಾಮದ ವಾಸಿ ಶ್ರೀಮತಿ.ವೀಣಾರವರು ನೀಡಿದ ದೂರಿನಲ್ಲಿ ದಿನಾಂಕ:11-12-2021 ರಂದು ಬೆಳಗ್ಗೆ 09-00 ಗಂಟೆ ಸಮಯದಲ್ಲಿ  ಪಿರ್ಯಾದಿಯವರ ಗಂಡ ಶರಣ್ ಕುಮಾರ್, 38 ವರ್ಷ ಇವರು ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋದವರು  ಇಲ್ಲಿಯವರೆಗೂ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಸಹ ಈವರೆಗೆ ಸಿಕ್ಕಿರುವುದಿಲ್ಲ ವೆಂದು ಕಾಣೆಯಾಗಿರುವ ನನ್ನ ಗಂಡನನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಲಕ್ಕವಳ್ಳಿ   ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಇತ್ತೀಚಿನ ನವೀಕರಣ​ : 14-12-2021 07:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080