ಅಭಿಪ್ರಾಯ / ಸಲಹೆಗಳು

ಅಸಿಡ್ ದಾಳಿ ಪ್ರಕರಣದ ಆರೋಪಿತರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 500000/- ರೂ ದಂಡ.

   ಶೃಂಗೇರಿ ಪೊಲೀಸ್ ಠಾಣೆ.

ದಿನಾಂಕ:- 18/04/2015 ರಂದು ಶೃಂಗೇರಿಯ ಮೆಣಸೆಯ ಹತ್ತಿರ ಸಂತ್ರಸ್ಥೆ ಯುವತಿಯ ಮನೆಯ ಹತ್ತಿರ ಇಬ್ಬರು ವ್ಯಕ್ತಿಗಳು  ಬೈಕಿನಲ್ಲಿ ಬಂದು ಸಂತ್ರಸ್ಥ್ತೆಗೆ ಹೊರನಾಡು ಹೋಗುವ ದಾರಿ ಯಾವುದು ಎಂದು ಕೇಳಿ ಬೈಕಿನ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಸಂತ್ರಸ್ಥ್ತೆಯ ಮುಖಕ್ಕೆ ಆಸಿಡ್ ಎರಚಿದ್ದು, ಈ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಠಾಣಾ ಮೊ.ನಂ. 35/2015 ಕಲಂ. 120(ಬಿ), 326 [ಎ] ರೆ/ವಿ 37, 34 ಐ.ಪಿ.ಸಿ. ರಿತ್ಯಾ ಪ್ರಕರಣ ದಾಖಲಾಗಿರುತ್ತೆ. ಶ್ರೀ ಸುಧೀರ ಎಂ ಹೆಗ್ಡೆ ಪೊಲೀಸ್ ನಿರೀಕ್ಷಕರು ಶೃಂಗೇರಿರವರು ಪ್ರಕರಣವನ್ನು ತನಿಖೆ ನಡೆಸಿ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಾದ 01. ಗಣೇಶ @ ಗಣಿ ಬಿನ್ ವಿಠಲ 36 ವರ್ಷ, ವಾಸ ಭಾರತೀನಗರ, ಮೆಣಸೆ,02. ಮಹಮದ್ ಕಬೀರ್ ಬಿನ್ ಅಬ್ದುಲ್ಜಲೀಲ್ 30 ವರ್ಷ, ಹೊಸ್ಕೆರೆ, ಶೃಂಗೇರಿ 03. ವಿನೋದ್ಕುಮಾರ್ ಬಿನ್ ಪೌಲ್ಪಿಂಟೋ 38 ವರ್ಷ, ವೆಲ್ಕಂಗೇಟ್ ಹತ್ತಿರ, ಶೃಂಗೇರಿ 04. ಅಬ್ದುಲ್ಮಜೀದ್ ಬಿನ್ ಎಂ ಕೆ ಇಸ್ಮಾಯಿಲ್ 38 ವರ್ಷ, ದುರ್ಗಾ ದೇವಸ್ಥಾನ ಶೃಂಗೇರಿ ತಾ|| ರವರುಗಳನ್ನು  ಶೀಘ್ರವಾಗಿ ಬಂಧಿಸಿ ತನಿಖೆ ಮಾಡಿ ಆರೋಪಿತರ ವಿರುದ್ದ ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿಕೊಂಡಿದು ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಈ ದಿನ ದಿನಾಂಕ 15/07/2021 ರಂದು ಮಾನ್ಯ ನ್ಯಾಯಾಲಯವು ಎಲ್ಲಾ 04 ಜನ ಆರೋಪಿತರಿಗೂ ಜೀವಾವಧಿ ಶಿಕ್ಷೆ ಮತ್ತು ತಲಾ 500000/- ರೂ ದಂಡ ವಿಧಿಸಿರುತ್ತೆ. ಸದರಿ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿ ಶ್ರೀ ಸುಧೀರ ಎಂ ಹೆಗ್ಡೆ ಪೊಲೀಸ್ ನಿರೀಕ್ಷಕರು , ತನಿಖೆಗೆ ಪಿ.ಎಸ್.ಐ. ಶ್ರೀ ಕುಸುಮಾಧರ , ಹೆಚ್.ಸಿ. ಗಳಾದ ಶ್ರೀ ರಾಜಕುಮಾರಪ್ಪ , ಶ್ರೀ ಶೇಖರಪ್ಪ,  ಶ್ರೀ ರಾಜು ಕೆ.ಜಿ. ಮತ್ತು ಪಿ.ಸಿ. 210 ಶ್ರೀ ಪೂಣರ್ೇಶ್ ಹಾಗೂ ಶ್ರೀ ಆನಂದ ಕೆ.ಎಸ್. ರವರು ಸಹಕರಿಸಿರುತ್ತಾರೆ. 

ಅಕ್ರಮ ಮದ್ಯ ಮಾರಾಟ ಪ್ರಕರಣ .

ಗ್ರಾಮಾಂತರ    ಪೊಲೀಸ್ ಠಾಣೆ.

ದಿನಾಂಕ 14/07/2021 ರಂದು ಸಿಂದಿಗೆರೆ ಗ್ರಾಮದ ಹೊಸದಾಗಿ ನಿರ್ಮಾಣವಾಗುತ್ತಿರುವ ಸಮುದಾಯ ಭವನದ ಪಕ್ಕದಲ್ಲಿ ಯಾರೋ ಒಬ್ಬ ಆಸಾಮಿಯು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾನೆಂದ ಮಾಹಿತಿ ಬಂದ ಮೇರೆಗೆ  ದಾಳಿ ನಡೆಸಿದ್ದು ಯಾರೋ ಒಬ್ಬ ಆಸಾಮಿಯು ಸಮುದಾಯ ಭವನದ ಕಟ್ಟಡದ ಮುಂಬಾಗ ರಟ್ಟಿನ ಬಾಕ್ಸ್ ನ್ನು ಇಟ್ಟುಕೊಂಡಿದ್ದು , ನಮ್ಮಗಳನ್ನು ನೋಡಿ ಓಡಿಹೋಗಲು ಪ್ರಯತ್ನಿಸಿದವನನ್ನು  ಸಿಬ್ಬಂದಿಗಳು ಹಿಡಿದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ ದೇವರಾಜ ಬಿನ್ ರಂಗಪ್ಪ, ಸಿಂದಿಗೆರೆ ವಾಸಿ ಎಂದು ತಿಳಿಸಿದ್ದು , ಆತನ ಬಳಿಯಿದ್ದ 2 ರಟ್ಟಿನ ಬಾಕ್ಸ್ ಗಳನ್ನು   ಪರಿಶೀಲಿಸಲಾಗಿ 90 ಎಂ.ಎಲ್.ನ  ಓರಿಜಿನಲ್ ಚಾಯ್ಸ್ ಡಿಲೆಕ್ಸ್ ವಿಸ್ಕಿಯ 77 ಮದ್ಯದ ಟೆಟ್ರಾಪೌಚ್ಗಳಿದ್ದು, ಮದ್ಯದ ಅಂದಾಜು ಬೆಲೆ 6077/- ರೂ ಆಗಿದ್ದು , ಆರೋಪಿತನಾದ ದೇವರಾಜನ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಐ. ಸ್ವರ್ಣ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಅಕ್ರಮ ಮಟ್ಕಾ ಜೂಜಾಟ  ಪ್ರಕರಣ

ಮೂಡಿಗೆರೆ  ಪೊಲೀಸ್ ಠಾಣೆ

ದಿನಾಂಕ 13/07/2021 ರಂದು ಮೂಡಿಗೆರೆ ಗ್ರಾಮದ ಸರ್ವೋದಯ ನಗರಕ್ಕೆ ಹೋಗುವ ಸರ್ಕಲ್ ನಲ್ಲಿರುವ ಸಾರ್ವಜನಿಕ ಬಸ್ ನಿಲ್ದಾಣದ ಒಳಭಾಗದಲ್ಲಿ ಅಕ್ರಮವಾಗಿ ಮಟ್ಕಾ ಜೂಜಾಟವಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿದ್ದು ಮೂಡಿಗೆರೆ ಗ್ರಾಮದ ಸರ್ವೋದಯ ನಗರಕ್ಕೆ ಹೋಗುವ ಸರ್ಕಲ್ ನಲ್ಲಿರುವ ಸಾರ್ವಜನಿಕ ಬಸ್ ನಿಲ್ದಾಣದ ಒಳಭಾಗದಲ್ಲಿ ಅಕ್ರಮವಾಗಿ ಮಟ್ಕಾ ಜೂಜಾಟವಾಡಿಸುತ್ತಿದ್ದ ರಾಜೇಶ್ ಬಿನ್ ಲೇಟ್ ಚಂದ್ರ , ಸರ್ವೋದಯ ನಗರ, ಮೂಡಿಗೆರೆ ತಾಲ್ಲೂಕು ಈತನನ್ನು ವಶಕ್ಕೆ ಪಡೆದು ಜೂಜಾಟಕ್ಕೆ ಬಳಸಿದ 2,115 ರೂ ನಗದು ಹಣ, ಒಂದು ಮಟ್ಕಾಚೀಟಿ, 2 ಬಾಲ್ ಪೆನ್ನು ಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ಆರೋಪಿತನ ವಿರುದ್ದ ಮೂಡಿಗೆರೆ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ.ರವಿ.ಜಿ.ಎ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಹೆಂಗಸು ಕಾಣೆ ಪ್ರಕರಣ .

ಬಣಕಲ್  ಪೊಲೀಸ್ ಠಾಣೆ .

ದಿನಾಂಕ:-14.07.2021ರಂದು ದಿನೇಶ್, ಕೊಳಗೂರು ಕಾಲೋನಿ ವಾಸಿರವರು ಠಾಣೆಗೆ ಹಾಜರಾಗಿ ನೀಡಿದದೂರಿನ ಸಾರಾಂಶವೇನೆಂದರೆ ದಿನಾಂಕ 11-07-2021 ರಂದು ಬೆಳಿಗ್ಗೆ ನಾನು, ನನ್ನ ಹೆಂಡತಿ ಹಾಗೂ ತಂದೆಯವರು ಕೂಲಿಕೆಲಸಕ್ಕೆ  ಹೋಗಿದ್ದು ಮನೆಯಲ್ಲಿ ತಾಯಿ ಸೀತಮ್ಮ ಹಾಗೂ ನನ್ನ ಎರಡು ಜನ ಮಕ್ಕಳಿದ್ದು , ಸಂಜೆ ಕೆಲಸ ಮುಗಿಸಿ ಮನೆಗೆ ಬಂದಾಗ ನನ್ನ ತಾಯಿ ಮನೆಯಲ್ಲಿ ಇರಲಿಲ್ಲ .  ಅಕ್ಕಪಕ್ಕದವರ ಮನೆಗಳಲ್ಲಿ, ಸಂಬಂಧಿಕರ ಹಾಗೂ ನೆಂಟರಿಷ್ಟರ  ಮನೆಗಳಲ್ಲಿ ವಿಚಾರ ಮಾಡಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ  ಆದ್ದರಿಂದ ಕಾಣೆಯಾಗಿರುವ  ನನ್ನ ತಾಯಿಯನ್ನು  ಪತ್ತೆ ಮಾಡಿಕೊಡಿಕೊಡುವಂತೆ ನೀಡಿದ ಪಿರ್ಯಾದಿನ ಮೇರೆಗೆ  ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 ಕಳ್ಳತನ ಪ್ರಕರಣ.

ಆಲ್ದೂರು ಪೊಲೀಸ್ ಠಾಣೆ.

ದಿನಾಂಕ:-14.07.2021ರಂದು ಗ್ರಾಮ ವಾಸಿರವರು ಠಾಣೆಗೆ ಹಾಜರಾಗಿ ನೀಡಿದದೂರಿನ ಸಾರಾಂಶವೇನೆಂದರೆ ನಾನು ಈಗ್ಗೆ 30 ವರ್ಷಗಳಿಂದ ಮಾವಿನಕೆರೆ ಗ್ರಾಮದ ಶ್ರೀ, ಕಲ್ಲೇಶ್ವರ ಸ್ವಾಮಿ ದೇವಸ್ಥಾನದ ಪ್ರಧಾನ ಆರ್ಚಕನಾಗಿದ್ದು ದಿನಾಂಕ 13-07-2021 ರಂದು ಬೆಳಿಗ್ಗೆ ಎಂದಿನಂತೆ ದೇವಸ್ಥಾನದ ಪೂಜೆ ಮುಗಿಸಿ ಮುಂಭಾಗಿಲಿಗೆ ಬೀಗ ಹಾಕಿಕೊಂಡು ಹೋಗಿದ್ದು ಮಾರನೇ ದಿವಸ ಅಂದರೆ ದಿನಾಂಕ 14-07-2021 ರಂದು ಬೆಳಿಗ್ಗೆ  ಪೂಜೆಗೆಂದು ಬಂದಿದ್ದು ದೇವಸ್ಥಾನದ ಬಲಭಾಗದ ಕಭ್ಭಿಣದ ರೈಲಿಂಗ್ ಬಾಗಿಲು ತೆರೆದಿದ್ದು ಚಿಲಕವು  ಮೀಟಿದಂತಿದ್ದು ಗರ್ಭಗುಡಿಯ ಕಾಣಿಕೆ ಹುಂಡಿ ಕಾಣೆಯಾಗಿರುತ್ತೆ. ಅಲ್ಲದೆ ಪಕ್ಕದಲ್ಲಿದ್ದ ಶ್ರೀ ಮಾರಮ್ಮ ದೇವಿ ದೇವಸ್ಥಾನದ ಕಭ್ಭಿಣದ ರೈಲಿಂಗ್ ಬಾಗಿಲು ತೆರೆದಿದ್ದು ಬಾಗಿಲ ಚಿಲಕ ಹಾಗೂ ಕಬ್ಬಿಣದ ಕಾಣಿಕೆ  ಹುಂಡಿ ಕಾಣೆಯಾಗಿರುತ್ತೆ. ಎರಡೂ ದೇವಸ್ಥಾನದ ಬೀಗಗಳನ್ನು ಯಾರೋ ಕಳ್ಳರು ಮೀಟಿ ಜಜ್ಜಿ ಹೊಡೆದು ದೇವಸ್ಥಾನದ ಒಳಗಿದ್ದ ಕಾಣಿಕೆ ಹುಂಡಿಯಲ್ಲಿದ್ದ ಸುಮಾರು  2000/-ರೂ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿರುತ್ತಾರೆ.

ಅಕ್ರಮ  ಗೋ ಕಳ್ಳತನ ಹಾಗೂ ಮಾಂಸ ಮಾರಾಟ ಪ್ರಕರಣ

ಗೋಣಿಬೀಡು  ಪೊಲೀಸ್ ಠಾಣೆ .

ದಿನಾಂಕ: 14/07/2021 ರಂದು ಜನ್ನಾಪುರ ಸರ್ಕಲ್ ಬಳಿ ಚೆಕ್ ಪೋಸ್ಟ್ ನಲ್ಲಿ ವಾಹನಗಳನ್ನು ತಪಾಸಣೆ  ಮಾಡುತ್ತಿರುವಾಗ ಬೇಲೂರು ಕಡೆಯಿಂದ ಒಂದು ಟಾಟಾಸಮೋ ವಾಹನ ಬಂದಿದ್ದು ಅದನ್ನು ತಪಾಸಣೆ ಮಾಡಲು ನಿಲ್ಲಿಸಿದಾಗ ಅದರಲ್ಲಿದ್ದ 3 ಜನರು ಓಡಿಹೋಗಲು ಪ್ರಯತ್ನಿಸಿದ್ದು ಅವರುಗಳನ್ನು ಹಿಡಿದು ಹೆಸರು ಕೇಳಲಾಗಿ ಜಮೀಲ್ ಬಿನ್ ನಿಶಾರ್ ಅಹಮದ್, ಜಾಫರ್ ಸಾದೀಕ್ ಬಿನ್ ಜಮ್ಮದ್ ಪಾಷಾ, ಮುಬಾರಕ್ ಬಿನ್ ಸುಲ್ತಾನ್, ಬಂಟೇನಹಳ್ಳಿ, ಬೇಲೂರು ತಾಲ್ಲೂಕು ವಾಸಿಗಳಾಗಿದ್ದು , ಇವರುಗಳನ್ನು ವಿಚಾರಮಾಡಲಾಗಿ ನಾವುಗಳು ರಸ್ತೆ ಬದಿಯಲ್ಲಿ ಮಲಗಿರುವ ಬೀಡಾಡಿ ದನಗಳನ್ನು ಕಳ್ಳತನ ಮಾಡಿ ಸಾಗಾಟ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಬೇಲೂರಿನಿಂದ ಜನ್ನಾಪುರದವರೆಗೆ  ಬಂದಿದ್ದು ನಮಗೆ ಯಾವುದೇ ದನಗಳು ಸಿಕ್ಕಿರುವುದಿಲ್ಲವೆಂದು ತಿಳಿಸಿದ್ದರಿಂದ ಅಕ್ರಮವಾಗಿ ದನಗಳನ್ನು ಕಳ್ಳತನ ಮಾಡಿ ಸಾಗಾಟ ಮಾಡುವ ಉದ್ದೇಶದಿಂದ ಬಂದಿದ್ದರಿಂದ ಆರೋಪಿತರ ವಿರುದ್ದ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ  ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ. ಗಾಯತ್ರಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಇತ್ತೀಚಿನ ನವೀಕರಣ​ : 15-07-2021 07:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080