Feedback / Suggestions

ಅಕ್ರಮ ಮದ್ಯ ಸಾಗಾಟ ಪ್ರಕರಣ.

ಲಕ್ಕವಳ್ಳಿ ಪೊಲೀಸ್ ಠಾಣೆ.

ದಿನಾಂಕ:14-08-2021 ರಂದು ರಾತ್ರಿ 20.15 ಗಂಟೆ ಸಮಯದಲ್ಲಿ ಲಕ್ಕವಳ್ಳಿ ಠಾಣಾ ಸರಹದ್ದಿನ ಹೊಸಮನೆ ಗೇಟ್ ನಿಂದ ಬಸವನಹಳ್ಳಿಯ ಕಡೆ ಹೋಗುವ ರಸ್ತೆಯಲ್ಲಿ ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೆ 2 ರಟ್ಟಿನ ಬಾಕ್ಸ್ ಗಳಲ್ಲಿ 90 ಎಂ.ಎಲ್.ನ ಓರಿಜನಲ್ ಚಾಯ್ಸ್ ಡಿಲಕ್ಸ್ ವಿಸ್ಕಿಯ 192 ಪೌಚ್ ಮದ್ಯ ಸುಮಾರು 7,600/- ರೂ ಗಳನ್ನು ಅಮಾನತ್ತುಪಡಿಸಿಕೊಂಡು, ಅರೋಪಿ ವಸಂತ ಕುಮಾರ್ ಬಿನ್ ನಾಗರಾಜ್ ಬರಗನೇಹಳ್ಳಿ ಈತನನ್ನು ವಶಕ್ಕೆ ಪಡೆದು ಆರೋಪಿತನ ವಿರುದ್ದ ಲಕ್ಕವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ. ಮೇಘ ಟಿ.ಎನ್.  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಮಹಿಳಾ ಪೊಲೀಸ್  ಠಾಣೆ.

ದಿನಾಂಕ ;14/08/2021 ರಂದು ಪಿರ್ಯಾದಿ ಶ್ರೀ ಮಹಿಪಾಲ್ ರವರು ನೀಡಿದ ದೂರಿನಲ್ಲಿ ದಿನಾಂಕ 13/08/2021 ರಂದು 9.00 ಗಂಟೆ ಪಿರ್ಯಾದಿ ಕೃಷ್ಣ ಸ್ಪೈಸಸ್ ಗೆ ಕೆಲಸಕ್ಕೆ ಹೋಗಿದ್ದು ಮದ್ಯಾಹ್ನ 3.00 ಗಂಟೆಗೆ ಹೆಂಡತಿ ಶ್ರೀಮತಿ ಸರಸ್ವತಿ 23 ವರ್ಷ  ಪೋನ್ ಮಾಡಿ ಮಗುವನ್ನು ನಿಮ್ಮ ತಂದೆ ಮನೆಯಗೆ ಬಿಟ್ಟು ಹೋಗುತ್ತೇನೆ ಎಂದು ಮಗುವನ್ನು ತಂದೆ ಹತ್ತಿರ ಬಿಟ್ಟಿದ್ದೇನೆ  ನೀವು ಕೆಲಸ ಮುಗಿಸಿ ಬರುವಾಗ ಕರೆದುಕೊಂಡು ಬನ್ನಿ ಎಂದು ಹೇಳಿದವಳು ನಾಣು ಸಂಜೆ ಮನಗೆ ಬಂದಾಗ ಮನೆಯಲ್ಲಿ ಇಲ್ಲದೆ ಪೋನ್ ಮಾಡಿದರೂ ಪೋನ್ ಸ್ವೀಚ್ ಅಫ್ ಅಗಿದ್ದು ಎಲ್ಲಾ ಕಡೆ ಹುಡುಕಾಡಿದರೂ ಸಹ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ತನ್ನ ಹೆಂಢತಿ ಶ್ರೀಮತಿ ಸರಸ್ವತಿ, 23 ವರ್ಷ, 5.2 ಅಡಿ ಎತ್ತರ, ಪಿ.ಯು.ಸಿ. ವಿದ್ಯಾಭ್ಯಾಸ ದುಂಡುಮುಖ, ಮುಖ ಮೈಬಣ್ಣ -ಕಪ್ಪು ಮೈಬಣ್ಣ, ಬಾಷೆ ಕನ್ನಡ ಮತ್ತು ಹಿಂದಿ, ಮೈಕಟ್ಟು ಸಾದಾರಣ ಧರಿಸಿದ ಉಡುಪು;ಟಾಪ್ ಲೆಗಿನ್ ಧರಿಸಿರುತ್ತಾಳೆ,  ಎಂದು ಕಾಣೆಯಾಗಿರುವ ತನ್ನ ಹೆಂಡಿತಿಯನ್ನು ಪತ್ತೆ ಮಾಡಿಕೊಡುವಂತೆ ಕೋರಿದ ದೂರಿನ ಮೇರೆಗೆ  ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ವಂಚನೆ ಪ್ರಕರಣ

ಸಿ.ಇ.ಎನ್. ಪೊಲೀಸ್ ಠಾಣೆ.

ದಿನಾಂಕ 14/08/2021 ರಂದು ಪಿರ್ಯಾದಿ ಭರತ್ ಎನ್.ಜಿ. ಬಿನ್ ಜಯರಾಮೇಗೌಡ ವಾಸ ನಿಡಗೋಡು ಜನ್ನಾಪುರ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಗೆ ಅವರ ಸ್ನೇಹಿತೆ ವಾಸಂತಿ ರವರು ಮೊಬೈಲ್ ವ್ಯಾಟ್ಸಾಪ್ ಮೇಸೆಜ್ ಮಾಡಿ ಇಸ್ಪೋಸ್ ಕಬ್ಲ್ ಗೆ ಹಣ ಕಟ್ಟಿದರೆ ಹೆಚ್ಚು ಹಣ ಗಳಿಸಬಹುದು ಎಂದು ಹಳೀ ಪಿರ್ಯದಿಯವರಿಗೆ 2,80,000/- ರೂ ಹಣವನ್ನು ಡಿಪಾಸಿಟ್ ಮಾಡಿಸಿದ್ದು ದಿನಾಂಕ 05/08/2021 ರಂದು ಹಣವನವನು ವಿತ್ ಡ್ರಾ ಮಾಡಲು ಹೋದಾಗ ಬಂದಿರುವುದಿಲ್ಲ . ನಂತರ ನಾನು ಮೋಸ ಹೋಗಿರುವ ಬಗ್ಗೆ ತಿಳಿದಿದ್ದು ನನಗೆ ಮೋಸ ಮಾಡಿ ವಾಸಂತಿ , ಇಸ್ಪೋಸ್ ಕಬ್ಲ್ ನ ವ್ಯಾಟ್ಸಾಪ್ ನ್ನು ಕ್ರೀಯೇಟ್ ಮಾಡಿದ್ದ ಅಡ್ಮಿನ್ ಗಳಾದ ಗೀತಾ ಸತೀಶ್ ಮತ್ತು ಧಾರಣಿ ಮಿಶ್ರಾ ಇವರ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಸಿ.ಇ.ಎನ್. ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

Last Updated: 15-08-2021 06:48 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Chikkamagaluru District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080