ಅಭಿಪ್ರಾಯ / ಸಲಹೆಗಳು

ವಂಚನೆ ಪ್ರಕರಣ.

ಸಿ,ಇ,ಎನ್, ಪೊಲೀಸ್ ಠಾಣೆ.

 ದಿನಾಂಕ 14-01-2022 ರಂದು ಕಳಸ ಕಲಕೋಡು ವಾಸಿಯಾದ ಶಿವರಾಮ್ ಕೆ.ಸಿ. ಬಿನ್ ಚಂದಪ್ಪಯ್ಯ ರವರು ನೀಡಿದ ದೂರಿನಲ್ಲಿ    ದಿನಾಂಕ;14-01-2022 ರಂದು ಯಾವುದೋ ಅಪರಿಚಿತ ನಂಬರ್ ನಿಂದ ಪೋನ್ ಮಾಡಿ ಕಳಸ ಕೆನರಾ ಬ್ಯಾಂಕ್ ಮ್ಯಾನೇಜರ್ ಮಾತಾನಾಡುತ್ತಿರುವುದು ನಿಮ್ಮ ಎ.ಟಿ.ಎಂ ಕಾರ್ಡು ಅವಧಿ ಮುಕ್ತಾಯವಾಗಿದೆ ನಿಮಗೆ ಹೊಸ ಎ.ಟಿ.ಎಂ. ಕಾರ್ಡು  ಕೊಡುವುದಾಗಿ ತಿಳಿಸಿ  ಈ ಬಗ್ಗೆ ಪಿರ್ಯಾದಿಯಿಂದ ಎ.ಟಿ.ಎಂ ಕಾರ್ಡು ಮಾಹಿತಿ ಪಡೆದು  ಓ.ಟಿ.ಪಿ. ನಂಬರ್ ಪಡೆದು 91,854/- ರೂ ಗಳನ್ನು ಪಿರ್ಯಾಧಿಯ ಬ್ಯಾಂಕ್  ಖಾತೆಯಿಂದ ಹಣವನ್ನು ಪಡೆದುಕೊಂಡು ಮೋಸ ಮಾಡಿದ್ದು ನಂತರ  ಕಳಸದ ಬ್ಯಾಂಕ್ ಮ್ಯಾನೇಜರ್ ಪೋನ್ ಮಾಡಿ ನಿಮ್ಮ ಬ್ಯಾಂಕ್ ಖಾತೆಯಿಂದ ಪದೆ ಪದೆ ಹಣ ಡ್ರಾ ಅಗುತ್ತಿದೆ ನಿಮಗೆ ಯಾರೋ ಮೋಸ ಮಾಡಿ ಹಣ ಡ್ರಾ ಮಾಡುತ್ತಿದ್ದಾರೆ ಎಂದು ತಿಳಿಸಿದ್ದು , ನನಗೆ ಮೋಸ ಮಾಡಿ ಹಣ ವರ್ಗಾಯಿಸಿಕೊಂಡವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ  ಸಿ,ಇ,ಎನ್, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ 14-01-2022 ರಂದು ಗ್ರಾಮಾಂತರ ಠಾಣಾ ಸರಹದ್ದಿನ ವಾಸಿ ಗಂಗಾಧರ ಕೆ.ಜಿ ರವರು ನೀಡಿದ ದೂರಿನಲ್ಲಿ  ದಿನಾಂಕ; 14-01-2022 ರಂದು  ಪಿರ್ಯಾದಿ ಮನೆಯ ಬೀಗ ಹಾಕಿಕೊಂಡು ದೇವಾಲಯಕ್ಕೆ  ಹೋಗಿದ್ದ ವೇಳೆಯಲ್ಲಿ ಯಾರೋ ಕಳ್ಳರು ಮನೆಯನ್ನು ಬೀಗ ಮುರಿದು ಮನೆಯ ಗಾಡ್ರೇಜ್ ಬೀರುವಿನಲ್ಲಿದ್ದ ಅಡಿಕೆ ವ್ಯಾಪಾರ ಮಾಡಿದ 4,75,000/- ರೂ ಹಣ ಮತ್ತು ಹೆಂಡತಿಯ 10 ಗ್ರಾಂ ತೂಕದ 01 ಜೊತೆ ಚಿನ್ನದ ಕಿವಿಯ ಓಲೆ ಕಳ್ಳತನವಾಗಿದ್ದು ಒಟ್ಟು 5,05,000/- ಬೆಲೆ ಅಗಿದ್ದು ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ವಡವೆ ಮತ್ತು ನಗದು ಹಣವನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಗೋಣಿಬೀಡು ಪೊಲೀಸ್ ಠಾಣೆ.

ದಿನಾಂಕ:15-01-2022 ರಂದು ಪಿರ್ಯಾದಿ ಅಂತೋಣಿ ಲೋಬೋ ಬಿನ್ ಮಾರ್ಟಿಸ್ ಲೋಬೋ ವಾಸ ಅಣಜೂರು ಇವರು ನೀಡಿದ ದೂರಿನಲ್ಲಿ ಪಿರ್ಯಾದಿ ಬಾಬ್ತು ಅಬ್ದರೆ  ಗ್ರಾಮದಲ್ಲಿರುವ ಅಡಿಕೆ ತೋಟದಲ್ಲಿ ದಿನಾಂಕ-24-12-2021 ರಿಂದ ದಿನಾಂಕ 05-01-2022 ರ ಮದ್ಯದ ಅವದಿಯಲ್ಲಿ ಸುಮಾರು 250 ಕೆ.ಜಿ. ಯಷ್ಟು ಸುಮಾರು 13,750/- ರು ಬೆಲೆಬಾಳುವ ಅಡಿಕೆಯನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಅಡಿಕೆಯನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 15-01-2022 07:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080