ಅಭಿಪ್ರಾಯ / ಸಲಹೆಗಳು

ಕಳ್ಳತನ ಪ್ರಕರಣ

ಎನ್.ಆರ್.ಪುರ ಪೊಲೀಸ್ ಠಾಣೆ.

ದಿನಾಂಕ:15-02-2022 ರಂದು ಪಿರ್ಯಾಧಿ ಎ,ಸಿ.ವೆಂಕಟೇಶ ಬಿನ್ ಎಂ.ಎಸ್. ಚನ್ನಪ್ಪಗೌಡ ಬಿ.ಹೆಚ್. ಕೈಮರ ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯವರ ಬಾಬ್ತು ಸಾಲೂರು ಗ್ರಾಮದಲ್ಲಿರುವ ತೋಟದಲ್ಲಿ ದಿನಾಂಕ:14-02-2022 ರಂದು ಕಾಳು ಮೆಣಸನ್ನು ಒಣಗಿಸಲು ಹಾಕಿದ್ದು ದಿನಾಂಕ 15-02-2022 ರಂದು ನೋಡಲಾಗಿ ಯಾರೋ ಕಳ್ಳರು ಸುಮಾರು 3 1/2  ಕ್ವಿಂಟಾಲ್ ನಷ್ಟು ಕಾಳುಮೆಣಸನ್ನು ಅಂದಾಜು ಬೆಲೆ ಸುಮಾರು 1,75,000/- ರೂ ಅಗಿದ್ದು, ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಕಾಳು ಮೆಣಸನ್ನು ಪತ್ತೆ ಮಾಡಿ ಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ನಗರ ಪೊಲೀಸ್ ಠಾಣೆ.

ದಿನಾಂಕ:14-02-2022 ರಂದು 23.30 ಗಂಟೆಗೆ ಫಿರ್ಯಾದಿ ರವೀಶ್ ಹೆಚ್.ಸಿ. ಬಿನ್ ಲೇಟ್ ಚಿಕ್ಕರಂಗಯ್ಯ ಪಾಯಿಸ್ ಕಾಂಪೌಂಡ್, ಉಂಡೆದಾಸರಹಳ್ಳಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯವರು ದಿನಾಂಕ; 13-02-2022 ರಂದು ಪಿರ್ಯಾದಿ ಮನೆಗೆ ಬೀಗ ಹಾಕಿಕೊಂಡು ಮೈಸೂರಿಗೆ ಹೋಗಿದ್ದು ವಾಪಾಸ್ಸು ದಿನಾಂಕ 14-02-2022 ರಂದು ನೋಡಲಾಗಿ ಯಾರೋ ಕಳ್ಳರು  ಬಾಗಿಲನ್ನು  ಯಾವುದೋ ಅಯುಧ ಮೀಟಿ ಬಾಗಿಲು ಲಾಕ್ ಕಿತ್ತು  ಕಬ್ಬಿಣದ ಬೀರುವಿನಲ್ಲಿ ಇಟ್ಟಿದ್ದ 300 ಗ್ರಾಂ ತೂಕ ವಿರುವ ಬೆಳ್ಳಿಯ ಲಕ್ಷ್ಮಿಯ ಮುಖವಾಡ 15,000/- ಮತ್ತು 14 ಗ್ರಾಂ ತೂಕವಿರುವ ಒಂದು ಜೊತೆ ಚಿನ್ನದ ಓಲೆಯನ್ನು 56,000, ಒಟ್ಟು 71,000/- ಮೌಲ್ಯದ ಸ್ವತ್ತನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಬೆಳ್ಳಿಯ ಲಕ್ಷ್ಮಿಯ ಮುಖವಾಡ ಮತ್ತು ಒಂದು ಜೊತೆ ಚಿನ್ನದ ಓಲೆಯನ್ನು ಪತ್ತೆ ಮಾಡಿ ಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ನಗರ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ;15-02-2022 ರಂದು ಫಿರ್ಯಾದಿ ಪ್ರಕಾಶ್ ಬಿನ್ ರುದ್ರಯ್ಯ, ಸಮತಳ ಗ್ರಾಮ ವಾಸಿ ರವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಹೆಂಡತಿ ಪ್ರೀತಿ ದಿನಾಂಕ 12-02-2022 ರಂದು ಮನೆಯನ್ನು ಬಿಟ್ಟು ಹೋಗಿದ್ದು  ವಾಪಾಸ್ಸು ಮನೆಗೆ ಬಾರದೇ ಇದ್ದು ಕಾಣೆಯಾಗಿದ್ದು ಹುಡುಕಲಾಗಿ ಇಲ್ಲಿಯವರೆಗೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ಪ್ರೀತಿ, 30 ವರ್ಷ, 5.4 ಅಡಿ ಎತ್ತರ,  ಕಪ್ಪು ಕೂದಲು, ಕೋಲುಮುಖ, ಕೆಂಫು ಮೈ ಬಣ್ಣ ತೆಳ್ಳನೆ ಶರೀರ, ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಫಿ ಕಲರ್ ಚೂಡಿದಾರ ಧರಿಸಿರುತ್ತಾಳೆ.  ಕಾಣೆಯಾಗಿರುವ ತನ್ನ ಹೆಂಡತಿ ಪ್ರೀತಿ ಯನ್ನು  ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ತರೀಕೆರೆ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 15-02-2022 07:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080