ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಗ್ರಾಮಾಂತರಪೊಲೀಸ್ ಠಾಣೆ.

ದಿನಾಂಕ:14/03/2022 ರಂದು ಪಿರ್ಯಾದಿ ಶ್ರೀ ಬಸವರಾಜ್ ಬಿನ್ ರಾಮಣ್ಣ ಜಾದವ್, ತೇಗೂರು ವಾಸಿ  ಇವರು ನೀಡಿದ ದೂರಿನಲ್ಲಿ ದಿನಾಂಕ:14/03/2022 ರಂದು ಪಿರ್ಯಾದಿ ಅಣ್ಣ ನಾಗರಾಜ್ ರಾಮಣ್ಣ ಜಾಧವ್ ರವರು ಎಪಿ-02-ಟಿಸಿ-1356 ನಂಬರ್ ಲಾರಿಯಲ್ಲಿ ಲೋಡ್ ಮಾಡಿಕೊಂಡು  ಚಿಕ್ಕಮಗಳೂರು ಕಡೂರು ರಸ್ತೆಯ ಲಕ್ಯಾ ಕ್ರಾಸ್ ಬಳಿ ಹೋಗುತ್ತಿರುವಾಗ ಲಾರಿಯ ಚಾಲಕನು ಲಾರಿಯನ್ನು ದುಡುಕುತನ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಕಡೂರು ಕಡೆಯಿಂದ ಬರುತ್ತಿದ್ದ ಕೆಎ-66-ಟಿ-3764 ಟ್ಯಾಕ್ಟರ್ ಇಂಜಿನ್ ಕೆಎ-66-ಟಿ-3765 ಟ್ರಾಲಿಗೆ ಡಿಕ್ಕಿ ಹೊಡೆಸಿ ಲೋಡ್ ತುಂಬಿದ್ದ ಲಾರಿಯು ಟ್ಯಾಕ್ಟರ್ ಮೇಲೆ ಮಗುಚಿಬಿದ್ದ ಪರಿಣಾಮ ಲಾರಿಯ ಕ್ಯಾಬ್ ನಲ್ಲಿ ಕುಳಿತಿದ್ದ ನಾಗರಾಜ್ ರಾಮಣ್ಣ ಜಾದವ್ ಕೆಳಗೆ ಸಿಲುಕಿ ತಲೆ ಹಗೂ ಎದೆಯ ಭಾಗಕ್ಕೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ. ಅಪಘಾತ ಉಂಟು ಮಾಡಿದ ಲಾರಿ ಚಾಲಕನ ಮೇಲೆ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ:14-03-2022 ರಂದು ಪಿರ್ಯಾದಿ ಮೈನಾ ಕುಮಾರಿ ಕೊಂ ಕುಮಾರ್ ರವರು ನೀಡಿದ ದೂರಿನಲ್ಲಿ ಚಿಕ್ಕಮಗಳೂರು ನಗರದ ಬ್ರಾಡ್ ವೇ ಬಿಲ್ಡಿಂಗ್ ರೋಡ್ ವಿಜಯಪುರದಲ್ಲಿ ದಿನಾಂಕ;13/03/2022 ರಂದು ಪಿರ್ಯಾದಿ ತನ್ನ ಗಂಡನ ಮನೆಯಾದ ಅರಳುಗುಪ್ಪೆಗೆ  ಹೋಗಿದ್ದು, ವಾಪಾಸ್ಸು ಬಂದು ನೋಡಲಾಗಿ ಮನೆಯ ಬೀರುವಿನಲ್ಲಿ ಇಟ್ಟಿದ್ದ ಅಂದಾಜು 2,85,000/-ರೂ ಬೆಲೆಬಾಳುವ 119  ಗ್ರಾಂ ತೂಕದ ಚಿನ್ನದ ವಡವೆಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಕಳ್ಳತನ ಮಾಡಿಕೊಂಡು ಹೋದವರ ವಿರುದ್ದ ಕಾನೂನು ಕ್ರಮ ಕೈಗೊಂಡು ಕಳುವಾಗಿರುವ ಚಿನ್ನಭರಣಗಳನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿದ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ 14/03/2022 ರಂದು ಪಿರ್ಯಾದಿ ಅಶ್ವಿನಿ ಬಿನ್ ಅರವಿಂದ,  ಶಂಕರಪುರ, ಚಿಕ್ಕಮಗಳೂರು ಇವರು ನೀಡಿದ ದೂರಿನಲ್ಲಿ ದಿನಾಂಕ 13/03/2022 ರಂದು ಬೆಳಿಗ್ಗೆ ಪಿರ್ಯಾದಿಯ ಗಂಡ ಅರವಿಂದ ಬಿನ್ ಅಣ್ಣಯ್ಯ ಮನೆಯಿಂದ ಹೊರ ಹೋಗಿದ್ದು ವಾಪಾಸ್ಸು ಮನೆಗೆ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಸಹ ಈ ವರೆಗೂ ನನ್ನ ಗಂಡ ಪತ್ತೆ ಅಗಿಲ್ಲವೆಂದು ಕಾಣೆಯಾಗಿರುವ ತನ್ನ ಗಂಡ ಅರವಿಂದ 22 ವರ್ಷ, 5.5 ಅಡಿ ಎತ್ತರ, ಸಾದಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಗ್ರೀನ್ ಟೀ ಶರಟು, ಬ್ಲಾಕ್ ಕಲರ್ ಪ್ಯಾಂಟ್ ಧರಿಸಿರುತ್ತಾರೆ, ಕಾಣೆಯಾಗಿರುವ ತನ್ನ ಗಂಡನನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ನಗರ ಪೊಲೀಸ್ ಠಾಣೆ.

ದಿನಾಂಕ 14/03/2022 ರಂದು ಪಿರ್ಯಾದಿ ಕಪಿನೋಜಿರಾವ್ ಸರಗಳ್ಳಿ, ಯಸಲೂರು ಸಖಲೇಶಪುರ ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ 11/02/2022 ರಂದು ಪಿರ್ಯಾದಿಯ ಮಗ ಯಶವಂತ್ ಸಂಬಂದಿಕರಾದ ಧರ್ಶನ್ ಹೌಸಿಂಗ್ ಬೋರ್ಡ್ ವಾಸಿ ಇವರ ಮನೆಯಲ್ಲಿ ಇದ್ದವನು ರಾತ್ರಿ ಮನೆಯಿಂದ ಹೋದವನು ಈವರೆಗೂ ವಾಪಾಸ್ಸು ಮನೆಗೆ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಸಹ ಪತ್ತೆ ಅಗಿಲ್ಲವೆಂದು ಕಾಣೆಯಾಗಿರುವ ತನ್ನ ಮಗ ಯಶವಂತ್  21 ವರ್ಷ, ಸಾದಾರಣ ಮೈಕಟ್ಟು, ಎಣ್ಣೆಗೆಂಪು ಮೈ ಬಣ್ಣ, ಕನ್ನಡ ಬಾಷೆ ಮಾತನಾಡುತ್ತಾನೆ. ಕಾಣೆಯಾಗಿರುವ ತನ್ನ ಮಗನನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ 15/03/2022 ರಂದು ಪಿರ್ಯಾದಿ ಜಯಂತಿ ಕೊಂ ದೇವರಾಜ್, ಶಾಂತಿನಗರ ಐ.ಜಿ. ಬಡಾವಣೆ ಚಿಕ್ಕಮಗಳೂರು ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ 11/03/2022 ರಂದು ಪಿರ್ಯಾದಿಯ ಮಗಳು ಕು: ಧನುಶ್ರೀ ರಾತ್ರಿ ಮನೆಯಲ್ಲಿ ಇದ್ದವಳು ರಾತ್ರಿ ಮನೆಯಿಂದ ಹೋದವಳು ಈವರೆಗೂ ವಾಪಾಸ್ಸು ಮನೆಗೆ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಸಹ ಪತ್ತೆ ಅಗಿಲ್ಲವೆಂದು ಕಾಣೆಯಾಗಿರುವ ತನ್ನ ಮಗಳು ಕು: ಧನುಶ್ರೀ, 19 ವರ್ಷ, ಕೋಲುಮುಖ, ಧೃಡಕಾಯ ಶರೀರ, ಕನ್ನಡ ಮತ್ತು ತಮಿಳು ಬಾಷೆ ಮಾತನಾಡುತ್ತಾಳೆ. ಕಾಣೆಯಾಗಿರುವ ತನ್ನ ಮಗಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಗ್ರಾಮಾಂತರ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 15-03-2022 07:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080