ಅಕ್ರಮ ಗೋ ಸಾಗಾಣಿಕೆ ಪ್ರಕರಣ
ನಗರ ಪೊಲೀಸ್ ಠಾಣೆ.
ದಿನಾಂಕ;15/05/2022 ರಂದು ಬೆಳಗಿನ 9.20 ಗಂಟೆ ಸಮಯದಲ್ಲಿ ನಗರ ಠಾಣಾ ಸರಹದ್ದಿನ ಟಿಪ್ಪುನಗರದ ಬಿಲಾಲ್ ಮಸೀದಿ ಹತ್ತಿರ ಇರುವ ಮೊಬೈಲ್ ಟವರ್ ಸಮೀಪ ಖಾಲಿ ಜಾಗದಲ್ಲಿ ಮಹೀಂದ್ರಾ ಪಿಕ್ ಗೂಡ್ಸ್ ವಾಹನದ ನಂಬರ್ ಕೆಎ-18-ಸಿ 6474 ರಲ್ಲಿ 8 ಜಾನುವಾರು ಗಳನ್ನು ಕಡಿದು ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಅರೋಪಿತರಾದ 1] ಅಖಿಲ್ ನನ್ನು ವಶಕ್ಕೆ ಪಡೆದಿದ್ದು ಅರೋಫಿತರಾದ 2] ಬಾಬರ್ 3] ಖಾಸೀಫ್ ರವರು ಓಡಿ ಹೋಗಿದ್ದು, ಅರೋಪಿತರು ದನಗಳನ್ನು ಸಾಗಿಸಲು ಉಪಯೋಗಿಸಿದ ವಾಹನ ಸಮೇತ ದನಗಳನ್ನು ಅಂದಾಜು ಬೆಲೆ 50,000/- ರೂ ಗಳಾಗಿದ್ದು, ಅಮಾನತ್ತುಪಡಿಸಿಕೊಂಡು ಬಂದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ನಗರ ಪಿ.ಎಸ್.ಐ. ಶ್ರೀ ಲೋಹಿತ್ ಎಲ್.ಎಸ್. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.
ಮನುಷ್ಯ ಕಾಣೆ ಪ್ರಕರಣ.
ಗ್ರಾಮಾಂತರ ಪೊಲೀಸ್ ಠಾಣೆ.
ದಿನಾಂಕ 15-05-2022 ರಂದು ಅನಿಲ್ ಕುಮಾರ್ ಬಿನ್ ಅಣ್ಣಯ್ಯ , ತೋಟದಮನೆ ಕಳಾಸಪುರ ಚಿಕ್ಕಮಗಳೂರು ವಾಸಿ ರವರು ನೀಡಿದ ದೂರೇನೆಂದರೆ, ಪಿರ್ಯಾದುದಾರರ ಮಗಳು ಕು; ಚಿನ್ಮಯಿ ಇವಳು ದಿನಾಂಕ;14/05/2022 ರಂದು ಬೆಳಿಗ್ಗೆ ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವಳು, ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು ಈವರೆಗೂ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ಚಿನ್ಮಯಿ, , 18 ವರ್ಷ, ದುಂಡುಮುಖ, ಸಾದಾರಣ ಮೈಕಟ್ಟು, ಗೋದಿ ಮೈಬಣ್ಣ , 5 ಅಡಿ ಎತ್ತರ, ಕನ್ನಡ , ಇಂಗ್ಲಿಷ್ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ನೀಲಿಬಣ್ಣದ ಜೀನ್ಸ್ ಪ್ಯಾಂಟ್ ಮತ್ತು ನೀಲಿ ಬಣ್ಣದ ಟಾಪ್ ಧರಿಸಿರುತ್ತಾಳೆ. ಕಾಣೆಯಾಗಿರುವ ತನ್ನ ಮಗಳು ಚಿನ್ಮಯಿ ಇವಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಅಕ್ರಮ ಮದ್ಯ ಮಾರಾಟ ಪ್ರಕರಣ.
ಬಾಳೂರು ಪೊಲೀಸ್ ಠಾಣೆ.
ದಿನಾಂಕ:14-05-2022 ರಂದು ಬಾಳೂರು ಪೊಲೀಸ್ ಠಾಣಾ ಸರಹದ್ದಿನ ಕೂವೆ ಗ್ರಾಮದಲ್ಲಿ ಸುಜಾತ ಕೆ.ವಿ. ಬಿನ್ ಲೇಟ್ ರೇವಣ್ಣ ಇವರು ತಮ್ಮ ದಿನಸಿ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಅರೋಪಿತೆಯನ್ನು ವಶಕ್ಕೆ ಪಡೆದು ಅರೋಪಿತಳ ವಶದಲ್ಲಿ ಇದ್ದ 90 ಎಂ.ಎಲ್. ನ 39 ಮದ್ಯವನ್ನು ಅಮಾನತ್ತುಪಡಿಸಿಕೊಂಡಿದ್ದು, ಮದ್ಯದ ಅಂದಾಜು ಬೆಲೆ 1369/- ರೂ ಗಳಾಗಿರುತ್ತೆ. ಆರೋಪಿತಳ ವಿರುದ್ದ ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಬಾಳೂರು ಠಾಣಾ ಪಿಎಸ್ಐ ಪವನ್ ಕುಮಾರ್ ಸಿ.ಸಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.
ಅಕ್ರಮ ಇಸ್ಪೀಟ್ ಜೂಜಾಟ ಪ್ರಕರಣ.
ನ.ರಾ. ಪುರ ಪೊಲೀಸ್ ಠಾಣೆ.
ದಿನಾಂಕ:14-05-2022 ರಂದು ನ.ರಾ.ಪುರ ಪೊಲೀಸ್ ಠಾಣಾ ಸರಹದ್ದಿನ ಮಲ್ಲಂದೂರು ಗ್ರಾಮದ ಸರ್ಕಾರಿ ಕಾಡಿನಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಆಟ ಆಡುತ್ತಿದ್ದ ಆರೋಪಿತರಾದ 1] ಸಂಜಯ್ ಬಿನ್ ಸದಾನಂದ ವಾಸ ಹಳ್ಳಿ ಬೈಲು ಕೊನೊಡಿ ಗ್ರಾಮ 2] ಸಲ್ಮಾನ್ ಬಿನ್ ರಶೀದ್ ಕುವೆಂಪುನಗರ ಹರಂದೂರು ಗ್ರಾಮ 3] ವಿಜಯ ಬಿನ್ ಸಿದ್ದಯ್ಯ ವಾಸ ಕಾಳಿದಾಸ ರಸ್ತೆ , ಕೊಪ್ಪ ಟೌನ್ 4] ಸತೀಶ ಬಿನ್ ಬಾಲಕೃಷ್ಣ ವಾಸ ಅಲಗೇಶ್ವರ ರಸ್ತೆ ಜಯಪುರ 5] ದಿನೇಶ್ ಬಿನ್ ಶ್ರೀನಿವಾಸ ವಾಸ ತಿಲಕ್ ರಸ್ತೆ , ಕೊಪ್ಪ ಟೌನ್ 6] ಮಂಜುನಾಥ ಬಿನ್ ಸುಂದರನಾಯಕ ವಾಸ ಕಂಡಿಕ ಹತೂರು ಗ್ರಾಮ 7] ಸತೀಶ ಬಿನ್ ಸಂಜಿವ ಪೂಜಾರಿ ವಾಸ ಕಂಡಿಕ ಹತೂರು ಗ್ರಾಮ 8] ಸಚ್ಚಿನ್ ಬಿನ್ ಶ್ಯಾಮ್ , ವಾಸ ಮೂಡ್ಲಿ ಕಮಲಾಪುರ ಗ್ರಾಮ 9] ಭರತ್ ಬಿನ್ರಮೇಶ್ ಪೂಜಾರಿ ವಾಸ ರಾಗೋಡು ತಲಮಕ್ಕಿ, 10] ಶರತ್ ಬಿನ್ ಸುಬ್ಬಣ್ಣ ವಾಸ ತಲಮಕ್ಕಿ ಗ್ರಾಮ,, 11] ಶಿವಪ್ರಸಾದ್ ಬಿನ್ ಗಂಗಾಧರ ವಸ ವಾಟೆಸರ ಬಿಂತ್ರವಳ್ಳಿ ಗ್ರಾಮ ಇವರನ್ನು ವಶಕ್ಕೆ ಪಡೆದು ಆರೋಪಿತು ಇಸ್ಪೀಟ್ ಆಡ ಆಡಲು ಬಳಸಿದ 52 ಇಸ್ಪೀಟ್ ಎಲೆಗಳು, 14530/- ರೂ ನಗದು ಹಣ, ಹಾಗೂ ಒಂದು ಕಾರು, ಒಂದು ಗೂಡ್ಸ್ ವಾಹನ ಮತ್ತು 3 ಬೈಕ್ ಗಳನ್ನು ಅಮಾನತ್ತುಪಡಿಸಿಕೊಂಡಿದ್ದು, ಆರೋಪಿತರ ವಿರುದ್ದ ನ.ರಾ.ಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ನ.ರಾ.ಪುರ ಠಾಣಾ ಪಿಎಸ್ಐ ದಿಲೀಪ್ ಕುಮಾರ್ ವಿ.ಟಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.
ಮರಣಾಂತಿಕ ರಸ್ತೆ ಅಪಘಾತ ಪ್ರಕರಣ
ಅಜ್ಜಂಫುರ ಪೊಲೀಸ್ ಠಾಣೆ.
ದಿನಾಂಕ;14/05/2022 ರಂದು ಪಿರ್ಯಾದಿ ಶಂಕರನಾಯ್ಕ ಬಿನ್ ರಾಮನಾಯ್ಕ ರಾಮಗಿರಿ ಹೊಳಲ್ಕೆರೆ ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ;14/05/2022 ರಂದು ಪಿರ್ಯಾದಿ ಚಿಕ್ಕಮ್ಮ ಜಯಬಾಯಿ ಇವರು ಲತೇಶ್ ನ ಬಾಭ್ತು ಕೆಎ-18-ಇಜಿ-7860 ಹಿರೋಹೊಂಡಾ ಬೈಕಿನಲ್ಲಿ ಬಿಸಿಲುಮನೆ ಗ್ರಾಮ ಭದ್ರಾವತಿಗೆ ಹೋಗಿ ವಾಪಸ್ಸು ಬರುತ್ತಿರುವಾಗ ಕಾರೇಹಳ್ಳಿ ವಡ್ಡರಹಟ್ಟಿ ಬಳಿ ಎದುರುಗಡೆಯಿಂದ ಕೆಎ-17-ಪಿ-7833 ವ್ಯಾಗ್ನರ್ ಕಾರಿನ ಚಾಲಕನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಳನೆ ಂಆಡಿಕೊಂಡು ಬಂದು ಬೈಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಬೈಕ್ ಜಖಂಗೊಂಡು ಬೈಕಿನ ಹಿಂಬದಿಯಲ್ಲಿ ಕೂಳಿತಿದ್ದ ಜಯಬಾಯಿ ಇವರಿಗೆ ತೀವ್ರ ತರವಾದ ಪೆಟ್ಟಾಗಿದ್ದು, ಅಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಅಪಘಾತಕ್ಕೆ ಕಾರಣನಾದ ಕಾರಿನ ಚಾಲಕನ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತಾರೆ.
ಕಳ್ಳತನ ಪ್ರಕರಣ
ತರೀಕೆರೆ ಪೊಲೀಸ್ ಠಾಣೆ.
ದಿನಾಂಕ:14-05-2022 ರಂದು ಕಾಂತರಾಜ್ ಬಿನ್ ರುದ್ರಪ್ಪ ಚಾಕೋನಹಳ್ಳಿ ಗ್ರಾಮ ವಾಸಿ ರವರು ನೀಡಿದ ದೂರಿನಲ್ಲಿ ಪಿರ್ಯಾದಿ ಸುಮಾರು 250 ಕುರಿಗಳನ್ನು ಸಾಕಿಕೊಂಡಿದ್ದು, ದಿನಾಂಕ; 14/05/2022 ರಂದು ಹಳೀಯೂರು ವಾಸಿ ಲೋಕೇಶಣ್ಣ ರವರ ತೋಟದಲ್ಲಿ ರಾತ್ರಿ ವೇಳೇ ಬಲೆಯೊಳಗೆ 250 ಕುರಿಗಳನ್ನು ಕೂಡಿ ಹಾಕಿದ್ದು ಸದರಿ ಕುರಿಗಳಲ್ಲಿ ರಾತ್ರಿ ವೇಳೆ ಯಾರೋ ಕಳ್ಳರು 11 ಕುರಿ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು , ಕಳ್ಳತನ ಮಾಡಿಕೊಂಡ ಹೋದ ಕುರಿಗಳ ಬಲೆ ಸುಮಾರು 1,10,000/- ರೂ ಗಳಾಗಿದ್ದು , ಕಳ್ಳರನ್ನು ಪತ್ತೆ ಹಚ್ಚಿ ಕಳ್ಳತನವಾಗಿರುವ ಕುರಿಗಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಅಕ್ರಮ ಮಟ್ಕಾ ಜೂಜಾಟ ಪ್ರಕರಣ
ಅಜ್ಜಂಪುರ ಪೊಲೀಸ್ ಠಾಣೆ.
ದಿನಾಂಕ;14-05-2022 ರಂದು ಅಜ್ಜಂಫುರ ಠಾಣಾ ಸರಹದ್ದಿನ ಬುಕ್ಕಾಂಬೂದಿ ಗ್ರಾಮದ ಶಂಕರ್ ಮೊಬೈಲ್ ಶಾಪ್ ಕಟ್ಟೆಯ ಮೇಲೆ ಅಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ನಡೆಸುತ್ತಿದ್ದು ಆರೋಪಿತರಾದ ಹೋಗುವ ರಸ್ತೆ ಬಳಿ ಹೊಂಡದ ಬದಿಯಲ್ಲಿ ಐಪಿಎಲ್ ಕ್ರಿಕೆಟ್ ಮ್ಯಾಚ್ ಗೆ ಅಕ್ರಮವಾಗಿ ಬೆಟ್ಟಿಂಗ್ ಜೂಜಾಟ ಆಡುತ್ತಿದ್ದ 1.] ಶಿವಕುಮಾರ್ ಬಿನ್ ಪರಮೇಶ್ವರಪ್ಪ 2] ನಾಗರಾಜ ಬಿನ್ ಬಿ.ಆರ್. ಮಲ್ಲಪ್ಪ 3] ರಜಿನಿಕಾಂತ್ ಬಿನ್ ನೀಲಕಂಠಪ್ಪ 4] ಅಮಿತ್ ಬಿನ್ ಹನುಂತಪ್ಪ ರವರನ್ನು ವಶಕ್ಕೆ ಪಡೆದು, ಬೆಟ್ಟಿಂಗ್ ಅಡಿಸುತ್ತಿದ ಅರುಣ್ ಎಂಬುವನು ಓಡಿ ಹೋಗಿದ್ದು , ಆರೋಫಿತರಿಂದ 15300/-ರೂ ನಗದು ಹಣವನ್ನು ಮತ್ತು ಒಂದು ಬಾಲ್ ಪೆನ್ನು ಹಾಗು ಬಿಳಿ ಹಾಳೆಯನ್ನು ಆಮಾನತ್ತು ಪಡಿಸಿಕೊಂಡು ಬಂದು ಅಜ್ಜಂಫುರ ಠಾಣೆಯಲ್ಲಿ ಅರೋಫಿತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಅಜ್ಜಂಪುರ ಠಾಣಾ ಪಿ,ಎಸ್ಐ. ಬಸವರಾಜ್ ಜಿ.ಕೆ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.