ಅಭಿಪ್ರಾಯ / ಸಲಹೆಗಳು

ಅಕ್ರಮ ಗಾಂಜಾ ಸೇವನೆ ಪ್ರಕರಣಗಳು

ಸಿ.ಇ.ಎನ್. ಪೊಲೀಸ್ ಠಾಣೆ.

ದಿನಾಂಕ:15/06/2022 ರಂದು ಚಿಕ್ಕಮಗಳೂರು ನಗರದ ಕಲ್ಲುದೊಡ್ಡಿ ಬಡಾವಣೆಯ ಲೇ ಔಟ್ ಬಳಿ 1] ಮೊಹಮ್ಮದ್ ರಾಯಿಲ್ ಬಿನ್ ಮೊಹಮ್ಮದ್ ಶಂಶಿದ್, ವಾಸ ನೂರಾನಿ ಮಸೀದಿ ಹಿಂಭಾಗ, ಚಿಕ್ಕಮಗಳೂರು 2] ಶೋಹೇಬ್ ಬಿನ್ ಮೊಹಮ್ಮದ್ ಯೂನಸ್, ವಾಸ ಮೊಹಮ್ಮದ್ದಿಯಾ ಶಾದಿ ಮಹಲ್ ಬಳಿ ರಾಮನಹಳ್ಳಿ ಚಿಕ್ಕಮಗಳೂರು ಇವರುಗಳು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಇವರು ಮಾದಕ ವಸ್ತುವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದು, ಸದರಿ ಅಸಾಮಿಗಳನ್ನು ವಶಕ್ಕೆ ಪಡೆದು, ಸದರಿ ಅಸಾಮಿಗಳು ಮಾದಕ ವಸ್ತುವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಅರೋಫಿತರ ವಿರುದ್ದ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಸಿ.ಇ.ಎನ್. ಠಾಣಾ ಪಿ.ಎಸ್.ಐ ನಾಸೀರ್ ಹುಸೇನ್,  ಎ.ಎಸ್.ಐ. ಎಂ.ಸಿ. ಪ್ರಕಾಶ, ರವರು ಪಾಲ್ಗೊಂಡಿರುತ್ತಾರೆ.

ಸಿ.ಇ.ಎನ್. ಪೊಲೀಸ್ ಠಾಣೆ.

ದಿನಾಂಕ:14/06/2022 ರಂದು ಚಿಕ್ಕಮಗಳೂರು ಠಾಣಾ ಸರಹದ್ದಿನ ನಗರದ ಸಂತೇ ಮಾರ್ಕೇಟ್ ನ ಮೀನು ಮಾರ್ಕೇಟ್ ಬಳಿ,1] ಮೊಹಮ್ಮದ್ ಅಶ್ರಫ್ @ ಮೋಣು ಬಿನ್ ಮೊಹಮ್ಮದ್ ರಫೀಕ್ ವಾಸ ಕೋಟೆ, ನೀರಿನ ಟ್ಯಾಂಕ್ ಹತ್ತಿರ ಚಿಕ್ಕಮಗಳೂರು, ಲಾರಿ ಸ್ಯಾಂಡ್ ಬಳಿ 2] ಮೊಹಮ್ಮದ್ ಇಮ್ರೋಜ್ ಬಿನ್ ಮೊಹಮ್ಮದ್ ಯಾಸೀನ್, ವಾಸ ಸಂತೆಮೈದಾನ, ಅಜೀಜ್ ಲೈನ್  ಚಿಕ್ಕಮಗಳೂರು ಮತ್ತು ತಮಿಳು ಕಾಲೊನಿಯಲ್ಲ್ಲಿ 3] ಮೊಹಮ್ಮದ್ ಜುನೈದ್ ಬಿನ್ ಮೊಹಮ್ಮದ್ ಇಮ್ರಾನ್ ವಾಸ ಸಂತೆಮೈದಾನ, ಅಜೀಜ್ ಲೈನ್,  ಚಿಕ್ಕಮಗಳೂರು ಹಾಗೂ ದಂಟರಮಕ್ಕಿ ಕೆರೆ ಬಳಿ 4] ದೇವರಾಜ @ ದೇವು ಬಿನ್ ರಂಗಪ್ಪ ಶೆಟ್ಟರ ಬೀದಿ ಹುಲಿಕೆರೆ ವಾಸಿ ಇವರುಗಳು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಇವರುಗಳು ಮಾದಕ ವಸ್ತುವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಅಸಾಮಿಗಳನ್ನು ವಶಕ್ಕೆ ಪಡೆದು, ಸದರಿ ಅಸಾಮಿಗಳು ಮಾದಕ ವಸ್ತುವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಅರೋಫಿತರ ವಿರುದ್ದ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಸಿ.ಇ.ಎನ್. ಠಾಣಾ ಪಿ.ಎಸ್.ಐ ನಾಸೀರ್ ಹುಸೇನ್,  ಎ.ಎಸ್.ಐ. ಎಂ.ಸಿ. ಪ್ರಕಾಶ, ಸಿಬ್ಬಂದಿಗಳಾದ  ಲೋಕೇಶ್ ಕೆ. ಹೆಚ್. ಹಾಗೂ ಶಶಿಧರ ಜಿ.ಕೆ. ರವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ 14/06/2022 ರಂದು ಸಂಜೆ ಅಜ್ಜಂಫುರ ಠಾಣಾ ಸರಹದ್ದಿನ ಸೊಕ್ಕೆ ತಿಮ್ಮಾಪುರದ ಕೊರಮರ ಬೀದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದ ಸುಗಂದಮ್ಮ ಕೋಂ ತಿಪ್ಪೇಶಪ್ಪ, ವಾಸ ಸೊಕ್ಕೆ ತಿಮ್ಮಾಪುರ ಇವಳನ್ನು ವಶಕ್ಕೆ ಪಡೆದು, ಅರೋಪಿತಳು ಅಕ್ರಮವಾಗಿ ಹೊಂದಿದ್ದ   281/- ರೂ ಬೆಲೆಯ 90 ಎಂ.ಎಲ್. ನ 8 ಟೆಟ್ರಾಪ್ಯಾಕ್ ಮದ್ಯ ಮತ್ತು ಮದ್ಯದಿಂದ ಮಾರಾಟದಿಂದ ಸಂಗ್ರಹಿಸಿದ 100/- ರೂ. ನಗದು ಹಣವನ್ನು ಅಮಾನತ್ತುಪಡಿಸಿಕೊಂಡು ಬಂದು, ಅರೋಫಿತಳ ವಿರುದ್ದ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಅಜ್ಜಂಪುರ. ಠಾಣಾ ಪಿ.ಎಸ್.ಐ. ಶ್ರೀಮತಿ ಮಂಜುಳಾಬಾಯಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ 14/06/2022 ರಂದು ಸಂಜೆ ಅಜ್ಜಂಫುರ ಠಾಣಾ ಸರಹದ್ದಿನ ಸೊಕ್ಕೆ ತಿಮ್ಮಾಪುರದ ಕೊರಮರ ಬೀದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದ ಪ್ರಕಾಶ ಬಿನ್ ರಾಮದಾಸಪ್ಪ ವಾಸ ಸೊಕ್ಕೆ ತಿಮ್ಮಾಪುರ ಇವನನ್ನು ವಶಕ್ಕೆ ಪಡೆದು, ಅರೋಪಿತನು ಅಕ್ರಮವಾಗಿ ಹೊಂದಿದ್ದ  1691/- ರೂ ಬೆಲೆಯ 90 ಎಂ.ಎಲ್. ನ 30 ಟೆಟ್ರಾಪ್ಯಾಕ್ ಮದ್ಯ ಮತ್ತು 180 ಎಂ.ಎಲ್. ನ 6 ಟೆಟ್ರಾಪ್ಯಾಕ್ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು, ಅರೋಫಿತನ ವಿರುದ್ದ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಅಜ್ಜಂಪುರ. ಠಾಣಾ ಪಿ.ಎಸ್.ಐ. ಶ್ರೀಮತಿ ಮಂಜುಳಾಬಾಯಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಗೋ ವಧೆ ಮತ್ತು ಮಾಂಸ ಮಾರಾಟ ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ 14/06/2022 ರಂದು ಚಿಕ್ಕಮಗಳೂರು ನಗರದ ಟಿಪ್ಪುನಗರದ ಬಿಲಾಲ್ ಮಸೀದಿ ರಸ್ತೆಯಲ್ಲಿ ಅಮ್ಜದ್ ಬಿನ್ ಪಿರಾನ್ ಸಾಬ್, ವಾಸ ಅಜೀಜ್ ಗಲ್ಲಿ, ತಮಿಳು ಕಾಲೋನಿ, ಈತನು ಅಕ್ರಮವಾಗಿ ದನದ ಮಾಂಸವನ್ನು ಮಾರಾಟ ಮಾಡುತ್ತಿರುವುದಾಗಿ ಇವನನ್ನು ವಶಕ್ಕೆ ಪಡೆದು, ಆರೋಪಿತನಿಗೆ ಮಾಂಸವನ್ನು ಕಡಿಯಲು ಬಾಡಿಗೆಗೆ ಖಾಲಿದ್ ಎಂಬುವನು ನೀಡಿದ್ದು, ಅರೋಪಿತನು ಅಕ್ರಮವಾಗಿ ಹೊಂದಿದ್ದ 100 ಕೆ.ಜಿ. ಮಾಂಸ, ತೂಕದ ತಕ್ಕಡಿ ಹಾಗೂ ಇತರೆ ಪರಿಕರಗಳನ್ನು  ಅಮಾನತ್ತುಪಡಿಸಿಕೊಂಡು ಬಂದು, ಅರೋಫಿತನ ವಿರುದ್ದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ನಗರ  ಠಾಣಾ ಪಿ.ಎಸ್.ಐ. ಕೆ.ಎಸ್. ಸತೀಶ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಕಡೂರು ಪೊಲೀಸ್ ಠಾಣೆ.

ದಿನಾಂಕ;14/06/2022 ರಂದು ಸಂಜೆ ಪಿರ್ಯಾದಿ ಗೌರಮ್ಮ ಬಿನ್ ಲೇಟ್ ಲಕ್ಷ್ಮಬೋವಿ, ವಾಸ ಲಕ್ಷ್ಮೀಪುರ ಕಡೂರು ಟೌನ್ ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ;14/06/2022 ರಂದು ಪಿರ್ಯಾದಿ ಮಗ ಅಜ್ಜಯ್ಯ ಈತನು ಕೆಎ-66-ಕೆ-6583 ಮೋಟಾರ್ ಸೈಕಲ್ ನಲ್ಲಿ  ದೊಡ್ಡಬುಕ್ಕಸಾಗರ ಗ್ರಾಮದಿಂದ ಮುಂದೆ ಹೋಗುತ್ತಿರುವಾಗ ಬೈಕ್ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಪಕ್ಕದ ಮರಕ್ಕೆ ಡಿಕಿ ಹೊಡೆಸಿದ ಪರಿಣಾಮ  ಅಜ್ಜಯ್ಯನ ತಲೆಗೆ ಕೈ ಕಾಲುಗಳಿಗೆ ತೀವ್ರ ಪೆಟ್ಟಾಗಿ ಮೃತಪಟ್ಟಿದ್ದು, ಬೈಕಿನ ಚಾಲಕ ಅಜ್ಜಯ್ಯ ನ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತಾರೆ

ಮನುಷ್ಯ ಕಾಣೆ ಪ್ರಕರಣ

ಮಹಿಳಾ ಪೊಲೀಸ್ ಠಾಣೆ.

ದಿನಾಂಕ;14/06/2022 ರಂದು ಪಿರ್ಯಾದಿ ಔರಂಗ್ ಬಿನ್ ಮುಸ್ತಾಪಾ, ಹಾಲೇನಹಳ್ಳಿ, ಮೌಟೆಂನ್ ವ್ಯೂ ಸ್ಕೂಲ್ ಹಿಂಭಾಗ , ಚಿಕ್ಕಮಗಳೂರು ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಮಗಳು ರುಮಾನಾ  ಇವಳು  ದಿನಾಂಕ; 13/06/2022 ರಂದು ಮನೆಯಿಂದ ಕಾಲೇಜಿಗೆ ಹೋದವಳು ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದು, ಈವರೆಗೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ರುಮಾನಾ, 19 ವರ್ಷ, ಎತ್ತರ 5.4 ಅಡಿ, ಸಾದಾರಣ ಮೈ ಕಟ್ಟು, ಕೋಲುಮುಖ, ಕಪ್ಪು ಬಣ್ಣದ ಜಿನ್ಸ್ , ಪಿಸ್ತಾ ಕಲರ್  ಟಾಪ್ ಮತ್ತು ಬುರ್ಕಾ ಧರಿಸಿರುತ್ತಾಳೆ.  ಇವಳನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಮಹಿಳಾ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತಾರೆ

ಸಿಂಗಟಗೆರೆ ಪೊಲೀಸ್ ಠಾಣೆ.

ದಿನಾಂಕ;15/06/2022 ರಂದು ಪಿರ್ಯಾದಿ ಅರುಣ್ ಕುಮಾರ ಬಿನ್ ಚಂದ್ರಪ್ಪ, ವಾಸ ಚಿಕ್ಕೇನಹಳ್ಳಿ ಗ್ರಾಮ ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ತಂದೆ ಚಂದ್ರಪ್ಪ ಬಿನ್ ಲೆಟ್ ತೋಟಪ್ಪ, ಇವರು  ದಿನಾಂಕ; 04/06/2022 ರಂದು ಮನೆಯಿಂದ ಹೋದವಳು ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದು, ಈವರೆಗೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ಚಂದ್ರಪ್ಪ 43 ವರ್ಷ, ಎತ್ತರ 5 ಅಡಿ, ಕೋಲುಮುಖ, ಎಣ್ಣೆಗೆಂಪು ಬಣ್ಣ, ಇವರನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಸಿಂಗಟಗೆರೆ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತಾರೆ. 

ಇತ್ತೀಚಿನ ನವೀಕರಣ​ : 15-06-2022 07:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080