ಅಭಿಪ್ರಾಯ / ಸಲಹೆಗಳು

ಅಕ್ರಮ ಗಾಂಜಾ ಸೇವನೆ ಪ್ರಕರಣ

ಬಸವನಹಳ್ಳಿ  ಪೊಲೀಸ್ ಠಾಣೆ.

ದಿನಾಂಕ:14/10/2021 ರಂದು  ಪಿರ್ಯಾದಿ ಕಿರಣ್ ಕುಮಾರ್. ಪಿ. ಪಿ.ಎಸ್.ಐ. ರವರು ನೀಡಿದ ದೂರಿನಲ್ಲಿ ದಿನಾಂಕ:07/10/2021 ರಂದು ಚಿಕ್ಕಮಗಳೂರು ನಗರದ ವಿಜಯಪುರದ ಉತ್ತಾಯ ಪಾರ್ಕ್ ಹತ್ತಿರ ಆರೋಪಿ ಮಹಮ್ಮದ್ ಅಶ್ರಪ್ ಈತನು ಗಾಂಜಾ ಸೇವನೆ ಮಾಡಿ ತಿರುಗಾಡುತ್ತಿದ್ದವನನ್ನು ವಶಕ್ಕೆ ಪಡೆದು ಆತನ ಗಾಂಜಾ ಸೇವನೆ ಬಗ್ಗೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು ಈ ದಿನ ದಿನಾಂಕ:14/10/2021 ರಂದು ಎಫ್.ಎಸ್.ಎಲ್. ವರದಿ ಬಂದಿದ್ದು ವರದಿ ಆರೋಪಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು ಆರೋಫಿ ವಿರುದ್ದ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿಎಸ್.ಐ. ಕಿರಣ್ ಕುಮಾರ್ ಪಿ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.
 

ಜಾನುವಾರು ಹತ್ಯಾ ಪ್ರಕರಣ

ಎನ್.ಆರ್. ಪುರ ಪೊಲೀಸ್ ಠಾಣೆ.

ದಿನಾಂಕ; 14/10/2021 ರಂದು ಪಿರ್ಯಾಧಿ ಪ್ರೀತಮ್ ಬಿನ್ ಉಪೇಂದ್ರ ಎಂಬುವರು ನೀಡಿದ ದೂರಿನಲ್ಲಿ ಪಿರ್ಯಾದಿಯವರು ಎಂದಿನಂತೆ ತಮ್ಮ ಬಾಬ್ತು 10 ಜಾನುವಾರುಗಳನ್ನು ಮೇಯಲು ಪ್ಲಾಂಟೇಷನ್ ಗೆ ಬಿಟ್ಟಿದ್ದು ,9 ಜಾನುವಾರುಗಳು ಮನೆಗೆ ವಾಪಾಸ್ಸು ಬಂದಿದ್ದು ಅದರಲ್ಲಿ ಒಂದು  ಹಸು ಮನೆಗೆ ಬಾರದೇ ಇದ್ದು ಅದನ್ನು ಹುಡುಕಾಡಲಾಗಿ ಯಾರೋ ಶಿವಮೊಗ್ಗ=ಎನ್.ಆರ್. ರಸ್ತೆ ಯ ಕರಗುಂದ ಗೇಟ್ ಬಳಿ ತಮ್ಮ ಬಾಬ್ತು 3 ವರ್ಷ ಹಸುವನ್ನು ಕತ್ತು ಕೊಯ್ದಿರುವುದು ಕಂಡು ಬಂದಿದ್ದು, ಯಾರೋ ಮಾಂಸ ಮಾರಾಟ ಮಾಡುವ ಉದ್ದೇಶದಿಂದ  ಹಸುವನ್ನು  ಸಾಯಿಸಿರುವುದಾಗಿ  ಸದರಿ ಹಸುವಿನ ಬೆಲೆ 20,000/- ರೂ ಗಳಾಗಿದ್ದು, ಹಸುವನ್ನು ಸಾಯಿಸಿದವರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಎನ್. ಅರ್. ಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಜಾನುವಾರು ಕಳ್ಳತನ ಪ್ರಕರಣ

ಬಣಕಲ್  ಪೊಲೀಸ್ ಠಾಣೆ.

ದಿನಾಂಕ;15/10/2021 ರಂದು ಪಿರ್ಯಾಧಿ  ಗಿರೀಶ್ ಬಿನ್ ಕೃಷ್ಣಪ್ಪ ಸಂತೇಮೈದಾನ ಬಣಕಲ್ ವಾಸಿ ರವರು ನೀಡಿದ ದೂರಿನಲ್ಲಿ ಪಿರ್ಯಾದಿಯವರು ಎಂದಿನಂತೆ ತಮ್ಮ ಬಾಬ್ತು ಹಸು ಮತ್ತು 6 ತಿಂಗಳ ಕರುವನ್ನು ಸಂತೆ ಮೈದಾನದಲ್ಲಿ  ಮೇಯಲು ಬಿಟ್ಟಿದ್ದು ಸಂಜೆ ಕರು ಮಾತ್ರ ಮನೆಗೆ ವಾಪಸ್ಸು ಬಂದಿದ್ದು, ಅದರಲ್ಲಿ  ಹಸು ಮನೆಗೆ ಬಾರದೇ ಇದ್ದು ಯಾರೋ  ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ಹಸುವಿನ ಬೆಲೆ 6,000/- ರೂ ಗಳಾಗಿದ್ದು, ಕಳ್ಳತನವಾದ ಹಸುವನ್ನು  ಪತ್ತೆ ಮಾಡಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 15-10-2021 07:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080