ಅಭಿಪ್ರಾಯ / ಸಲಹೆಗಳು

ಅಕ್ರಮ ಜೂಜಾಟ  ಹಾಗೂ ಕೊವಿಡ್-19 ನಿಯಮ ಉಲ್ಲಂಘನೆ ಪ್ರಕರಣ

ಅಜ್ಜಂಪುರ  ಪೊಲೀಸ್ ಠಾಣೆ

ದಿನಾಂಕ 15/06/2021 ರಂದು ವೀರಾಪುರ ಹೊಸೂರು ಹಳ್ಳದ ದಡದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ವೀರಾಪುರ ಹೊಸೂರು ಹಳ್ಳದ ದಡದಲ್ಲಿರುವ ಬೇವಿನ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ  ಅಕ್ರಮವಾಗಿ ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ 7 ಜನ ಆರೋಪಿಗಳ ಮೇಲೆ ದಾಳಿ ಮಾಡಿದ್ದು 1) ಲೋಹಿತ್ 2) ಲೋಕೇಶಪ್ಪ 3)ಧನಂಜಯ 4)ಕೃಷ್ಣಮೂರ್ತಿ 5)ನಿಜಗುಣ 6)ಮಂಜಪ್ಪ 7) ರಾಮಕೃಷ್ಣ ರವರುಗಳನ್ನು ವಶಕ್ಕೆ ಪಡೆದಿದ್ದು , ಆರೋಪಿತರುಗಳ ವಶದಲ್ಲಿದ್ದ ಒಂದು ಬಿಳಿ ಬಣ್ಣದ ಟಾರ್ಪೆಲ್  .52 ಇಸ್ಪೀಟ್ ಎಲೆಗಳು,3 ಮೊಬೈಲ್ ಗಳು, 4 ಮೋಟಾರ್ ಸೈಕಲ್ ಗಳು ಹಾಗೂ 52,870 /-ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತರುಗಳ ವಿರುದ್ದ ಅಜ್ಜಂಪುರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಐ. ಲಿಂಗರಾಜು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಪಘಾತ ಪ್ರಕರಣ

ತರೀಕೆರೆ ಪೊಲೀಸ್ ಠಾಣೆ

ದಿನಾಂಕ 16-06-2021 ರಂದು ರಾಜೇಂದ್ರ ಬಿನ್ ಮಾಣಿಕ್ಯ ರವರು ಠಾಣೆಗೆ ಹಾಝರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 12-06-2021 ರಂದು ಪಿರ್ಯಾದುದಾರರ ತಾಯಿಯಾದ ಮುನಿಯಮ್ಮರವರು ಘಂಟಿಕಣಿವೆಯ ತಮ್ಮ ಮನೆಯ ಮುಂದೆ ರಸ್ತೆಯಲ್ಲಿ ನಿಂತುಕೊಂಡಿರುವಾಗ  ಕೆಎ-66 2188ರ ನೀರಿನ ಟ್ಯಾಂಕರ್ ಚಾಲಕ ಭರತ್ ತನ್ನ ವಾಹನವನ್ನು ಹಿಂಬದಿಯಿಂದ ಅತಿವೇಗ ಹಾಗೂ ಅಜಾರೂಕತೆಯಿಂದ ಚಾಲನೆ ಮಾಡಿಕೊಂಡು  ಮುನಿಯಮ್ಮರವರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಬಲಗಾಳಿಗೆ ಹಾಗೂ ಬಲಕೆನ್ನೆಗೆ ತೀವ್ರತರಹದ ಪೆಟ್ಟಾಗಿರುತ್ತೆ  ಎಂದು ನೀಡಿದ ದೂರನ್ನು ಸ್ವೀಕರಿಸಿಕೊಂಡು ಆರೋಪಿ ಭರತನ ವಿರುದ್ದ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಸೈಬರ್ ಪ್ರಕರಣ

ಸಿ.ಇ.ಎನ್ ಪೊಲೀಸ್ ಠಾಣೆ

ದಿನಾಂಕ 16-06-2021 ರಂದು ಶ್ರೀನಿವಾಸರಾವ್ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ15-06-2021 ರಂದು ಮದ್ಯಾಹ್ನ ಮನೆಯಲ್ಲಿರುವಾಗ ನನ್ನ ಮೊಬೈಲ್ ನಂ 8762501715 ಗೆ ಮೆಸೇಜ್ ಬಂದಿದ್ದು ಮೇಸೆಜ್ ನಲ್ಲಿ  QP-ASBLHQ   Dear  Customer, You have received Important message from your S,B,I BANK please click here  http;//tiny.cc/wk62uz ಎಂಬುದಾಗಿದ್ದು ಇದನ್ನು ಕ್ಲಿಕ್ ಮಾಡಿದಾಗ https://bit.ly/3p SEAGC ಎಂಬುದಾಗಿ ಮೆಸೇಜ್ ಬಂದಿದ್ದು  ಬ್ಯಾಂಕಿನವರು ಕಳುಹಿಸಿರಬಹುದೆಂದು ನಂಬಿ ನನ್ನ ಮೊಬೈಲ್ ಗೆ ಬಂದ ಲಿಂಕ್ ನ್ನು ಕ್ಲಿಕ್ ಮಾಡಿದಾಗ ನನ್ನ ಎಸ್ ಬಿಐ ಖಾತೆ ನಂಬರ್  54018293133 ನಿಂದ ಮೊದಲ ಬಾರಿ 97869 /-ರೂ ಹಾಗೂ ಎರಡನೇ ಬಾರಿ 21468/- ರೂ ಒಟ್ಟು 1,19,337/- ರೂ ಹಣ ಖಾತೆಯಿಂದ ಕಟಾವು ಆಗಿರುತ್ತದೆ.  ಎಂದು ನೀಡಿದ ದೂರನ್ನು ಸ್ವೀಕರಿಸಿಕೊಂಡು ಸಿ.ಇ.ಎನ್  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಇತ್ತೀಚಿನ ನವೀಕರಣ​ : 25-06-2021 06:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080