ಅಭಿಪ್ರಾಯ / ಸಲಹೆಗಳು

ಕಳ್ಳತನ ಪ್ರಕರಣ.

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ 15-08-2021 ರಂದು ರಾಘವೇಂದ್ರರವರು ಆಸ್ಪತ್ರೆಯಲ್ಲಿ ರಾತ್ರಿಪಾಳಿ ಕರ್ತವ್ಯವಿದ್ದುದ್ದರಿಂದ  ಬುಕ್ಕಂಬೂದಿಯ ಪ್ರಾಥಮಿಕ ಆಸ್ಪತೆಯ ಕಾಂಪೌಂಡ್ ಶೆಡ್ನಲ್ಲಿ ಕೆಎ- 66 ಹೆಚ್ -4161 ಬೈಕನ್ನು ನಿಲ್ಲಿಸಿ ಕರ್ತವ್ಯಕ್ಕೆ ಹೋಗಿದ್ದು ದಿನಾಂಕ 16-08-2021 ರಂದು ಬೆಳಗಿನ ಜಾವ 05-30 ಗಂಟೆ ಸಮಯದಲ್ಲಿ ತುರ್ತು ಚಿಕಿತ್ಸೆಗಾಗಿ ಜನರು ಬಂದಾಗ ಹೊರಗಡೆ ಬಂದು ಶೆಡ್ನಲ್ಲಿ  ಬೈಕನ್ನು ನೋಡಿದಾಗ ಯಾರೋ ಕಳ್ಳರು ಬೈಕನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಬೈಕಿನ ಅಂದಾಜು ಬೆಲೆ 50.000/- ರೂಗಳಾಗುತ್ತವೆ. ಕಳ್ಳತನವಾಗಿರುವ ಬೈಕನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣ.

ಬೀರೂರು ಪೊಲೀಸ್ ಠಾಣೆ.

ದಿನಾಂಕ 15-08-2021 ರಂದು  ಶಿವಕುಮಾರ್ರವರು ತಮ್ಮ ಚಿಕ್ಕಮ್ಮ ಮಂಜಮ್ಮರವರೊಂದಿಗೆ ಕೆಎ-14 ಇಎಸ್-4731 ಬೈಕಿನಲ್ಲಿ ತರೀಕೆರೆ ಕಡೆಗೆ ಹೋಗುತ್ತಿದ್ದಾಗ ರಾತ್ರಿ 02-30 ಗಂಟೆ ಸಮಯದಲ್ಲಿ ಶಿವಪುರ ಹಾಗೂ ಕುಡ್ಲೂರು ಮದ್ಯದಲ್ಲಿ ಹೋಗುತ್ತಿರುವಾಗ ಕೆಎ-57-ಎಫ್-1024 ಕೆಎಸ್ಆರ್ಟಿಸಿ ಬಸ್ ಚಾಲಕ ತನ್ನ ವಾಹನವನ್ನು  ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಢಿಕೊಂಡು ಬಂದು ಬೈಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ ರವರಿಗೆ ಹಾಗು ಮಂಜಮ್ಮರವರಿಗೆ ತಲೆಗೆ ಮತ್ತು ಸೊಂಟಕ್ಕೆ ತೀವ್ರತರಹದ ಪೆಟ್ಟಾಗಿರುತ್ತೆ. ಕೆಎಸ್ಆರ್ಟಿಸಿ ಬಸ್ ಚಾಲಕ ವಿರುದ್ದ ಕ್ರಮಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಸಂಚಾರ ಪೊಲೀಸ್ ಠಾಣೆ.

ದಿನಾಂಕ 15-08-2021 ರಂದು ರಾತ್ರಿ 08-00 ಗಂಟೆ ಸಮಯದಲ್ಲಿ ಸವಿನಾರವರು ತಮ್ಮ ಬಾಬ್ತು ಕೆಎ- 18 ಜೆ- 2843 ಬೈಕಿನಲ್ಲಿ ಆರ್ ಜಿ ರಸ್ತೆಯ ಪುಡ್ ಪ್ಯಾಲೇಸ್ ಹತ್ತಿರ ಬರುತ್ತಿರುವಾಗ ಟೌನ್ ಕ್ಯಾಂಟೀನ್ ಕಡೆಯಿಂದ ಬಂದ ಕೆಎ- 18 ಇಜೆ- 1741 ಬೈಕನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ಬೈಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಸವಿನಾರವರಿಗೆ ಮುಖಕ್ಕೆ ಹಾಗೂ ಹಣೆಗೆ ಪೆಟ್ಟಾಗಿರುತ್ತೆ. ಕೆಎ-18 ಇಜೆ-1741 ಬೈಕ್ ಚಾಲಕನ ವಿರುದ್ದ ಕ್ರಮಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

 

 

 

ಇತ್ತೀಚಿನ ನವೀಕರಣ​ : 16-08-2021 06:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080