ಅಭಿಪ್ರಾಯ / ಸಲಹೆಗಳು

ಮರಳು ಕಳ್ಳತನ ಪ್ರಕರಣ

ಹರಿಹರಪುರ ಪೊಲೀಸ್ ಠಾಣೆ.

ದಿನಾಂಕ 15-01-2022 ರಂದು ಹರಿಹರಪುರ ಠಾಣಾ ಸರಹದ್ದಿನ ವಗಳೆ ಬಳಿ ಇರುವ ಹೆಬ್ರುಗುಂಡಿಯ ತುಂಗಾನದಿಯಲ್ಲಿ ಮರಳನ್ನು ಕಳ್ಳತನ ಮಾಡಿಕೊಂಡು ಎನ್.ಹೆಚ್.ಪಿ. ಕಡೆಯಿಂದ ಕೋಟೆಗೆ ಕಡೆಗೆ  ಮರಳನ್ನು ಸಾಗಾಣಿಕೆ  ಮಾಡುತ್ತಿದ್ದ ಮಹೇಶ ಬಿನ್ ಸುಂದರ ಪೂಜಾರಿ  ಚಾಲಕ ವೃತ್ತಿ ಗೊಗಲ್ ತಮ್ಮಡವಳ್ಳಿ ಗ್ರಾಮ ಈತನನ್ನು ವಶಕ್ಕೆ ಪಡೆದು ಆತನು ಮರಳು ಸಾಗಿಸಲು ಬಳಸಿದ ಕೆಎ-18-ಬಿ-8406  ಗೂಡ್ಸ್ ಅಟೋವನ್ನು ಮತ್ತು ಅದರಲ್ಲಿದ್ದ 22 ಚೀಲಗಳ 1 ಟನ್ ನಷ್ಟು ಮರಳನ್ನು, ಅಂದಾಜು ಬೆಲೆ 1,500/- ರೂಗಳಾಗಿದ್ದು , ಅಮನತ್ತುಪಡಿಸಿಕೊಂಡು ಬಂದು ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ  ಪಿ.ಎಸ್.ಐ. ವಿಠಲ್ ವಾಡವಾನೆ ಮತ್ತು ಸಿಬ್ಬಂದಿಯವರಾಧ ಮಾರುತಿ ಖರಾತ, ಪ್ರೇಮ್ ಸಾಗರ್ ನಾಯ್ಕ, ಸ್ವರೂಪ ರವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಗಾಂಜಾ ಮಾರಾಟ ಪ್ರಕರಣ

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ15-01-2022  ರಂದು ಮೂಡಿಗೆರೆ ಠಾಣಾ ಸರಹದ್ದಿನ ತತ್ಕೂಳ ರಸ್ತೆಯ ಲೋಕವಳ್ಳಿಯ ಸುದರ್ಶನ್ ಎಸ್ಟೇಟ್ ಬಳಿ ಕೆಎ-47-ಜೆ-0127 ರ ಯಮಹಾ ಮೋಟಾರ್ ಸೈಕಲ್ ನಲ್ಲಿ ಮೂಡಿಗೆರೆ ಜೆ.ಎಂ. ರಸ್ತೆ ವಾಸಿಗಳಾದ  ಸುರೇಶ @ ಸೂರಿ ಮತ್ತು ಅಪ್ಸರ್ ಪಾಷ ಎಂಬುವರು  ಗಾಂಜಾವನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದು ಸದರಿ ಅರೋಪಿಗಳನ್ನು ವಶಕ್ಕೆ ಪಡೆದು ಅರೋಪಿತರು ಅಕ್ರಮವಾಗಿ ಹೊಂದಿದ್ದ 851 ಗ್ರಾಂ ತೂಕದ ಗಾಂಜಾವನ್ನು ಅಂದಾಜು ಬೆಲೆ 15,000/- ರೂ ಗಳಾಗಿದ್ದು , ಅಮಾನತ್ತುಪಡಿಸಿಕೊಂಡು ಬಂದು ಮೂಡಿಗೆರೆ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ  ಪಿ.ಎಸ್.ಐ. ರವಿ ಜಿ.ಎ., ಎ,ಎಸ್,ಐ, ಚಂದ್ರಶೇಖರ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ಬಣಕಲ್ ಪೊಲೀಸ್ ಠಾಣೆ.

ದಿನಾಂಕ:16-01-2022  ರಂದು  ಬಣಕಲ್ ಠಾಣಾ ಸರಹದ್ದಿನ ನಗರದ ಪೇಟೆ ಸುಭಾಷ್ ನಗರದ ವಾಸಿಯಾದ ಉಮೇಶ್ ಬಿನ್ ಚಂದ್ರೇಗೌಡ  ರವರು ಬಣಕಲ್  ನಗರದ  ಸಂತೆ ಮೈದಾನದ ಕಟ್ಟಡದಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದು  ಅರೋಪಿಯನ್ನು ವಶಕ್ಕೆ ಪಡೆದು ಅರೋಪಿತನು ಅಕ್ರಮವಾಗಿ ಹೊಂದಿದ್ದ 90 ಎಂ.ಎಲ್. ನ 42 ಟೆಟ್ರಾಪ್ಯಾಕ್  ಮಧ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಬಣಕಲ್  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ  ಪಿ.ಎಸ್.ಐ. ಶ್ರೀಮತಿ ಗಾಯತ್ರಿ  ಮತ್ತು ಸಿಬ್ಬಂದಿಯವರಾದ ಜಗದೀಶ್ ಹೆಚ್.ಪಿ, ರವರು ಪಾಲ್ಗೊಂಡಿರುತ್ತಾರೆ.

ಯಗಟಿ ಪೊಲೀಸ್ ಠಾಣೆ.

ದಿನಾಂಕ:16-01-2022 ರಂದು ಯಗಟಿ ಠಾಣಾ ಸರಹದ್ದಿನ ದೊಣ್ಣೆಕೋರನಹಳ್ಳಿ ವಾಸಿಯಾದ ಪರಮಶಿವಯ್ಯ ಬಿನ್ ಗಂಗಪ್ಪ  ರವರು ತೋಟದ ಶೆಡ್ಡ್ನಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದು  ಅರೋಪಿಯನ್ನು ವಶಕ್ಕೆ ಪಡೆದು ಅರೋಪಿತನು ಅಕ್ರಮವಾಗಿ ಹೊಂದಿದ್ದ 90 ಎಂ.ಎಲ್. ನ 50 ಟೆಟ್ರಾಪ್ಯಾಕ್ ರಾಜವಿಸ್ಕಿಯ ಮದ್ಯ ವನ್ನು ಅಂದಾಜು ಬೆಲೆ 1756/- ರೂ ಗಳಾಗಿದ್ದು, ಅಮಾನತ್ತುಪಡಿಸಿಕೊಂಡು ಬಂದು ಯಗಟಿ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ  ಪಿ.ಎಸ್.ಐ. ಶಶಿಕುಮಾರ್ ವೈ. ಎಸ್.  ಮತ್ತು ಸಿಬ್ಬಂದಿಯವರಾದ ನಾಗರಾಜ್ ಮತ್ತು  ಬಸವರಾಜ್ ರವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 16-01-2022 07:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080