ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಅಜ್ಜಂಪುರ  ಪೊಲೀಸ್ ಠಾಣೆ.

ದಿನಾಂಕ:16/02/2022 ರಂದು ಪಿರ್ಯಾಧಿ ಕು:ಜ್ಯೋತಿ ಬಿನ್ ತಿಪ್ಪೇಶಪ್ಪ ಬಾಣೂರು ಶಿವನಿ ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ 15/02/2022 ರಂದು ಸಂಜೆ ಪಿರ್ಯಾದಿ ಅಣ್ಣ ವೆಂಕಟೇಶನು ತಮ್ಮ ಬಾಣೂರು ಮನೆಯಿಂದ ತಮ್ಮ ಬಾವ ತಿಪ್ಪೇಶ ರವರ ಬೈಕ್ ನಂಬರ್ ಕೆಎ-41-ವೈ-564 ಹಿರೋ ಸ್ಲೆಂಡರ್ ಬೈಕ್ ನ್ನು ತೆಗೆದುಕೊಂಡು ಶಿವನಿಗೆ ಹೋಗುತ್ತಿರುವಾಗ  ಬಾಣೂರು-ಶಿವನಿ ಸ್ಟೇಷನ್ ಹತ್ತಿರ ಕೆಎ-08-7622 ಟಾಟಾ ಎಸ್. ವಾಹನ ಚಾಲಕ ವಾಹನವನ್ನು ಅದರ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ವೆಂಕಟೇಶ ಚಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಇಬ್ಬರಿಗೂ ಪೆಟ್ಟಾಗಿ, ವೆಂಕಟೇಶರವರಿಗೆ ಅಸ್ಪತ್ರೆಗೆ  ಚಿಕಿತ್ಸೆ ಕರೆದುಕೊಂಡು ಹೋಗುವಾಗ ಫಲಕಾರಿಯಾಗದೆ ಮಾರ್ಗ ಮದ್ಯ ಮೃತಪಟ್ಟಿದ್ದು , ವೆಂಕಟೇಶರವರ ಸಾವಿಗೆ  ಕಾರಣವಾಗಿರುವ  ಕೆಎ-08-7622 ಟಾಟಾ ಎಸ್. ವಾಹನ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಯಗಟಿ ಪೊಲೀಸ್ ಠಾಣೆ.

ದಿನಾಂಕ;16-02-2022 ರಂದು ಶ್ರೀಮತಿ ರತ್ನಮ್ಮ ಕೊಂ ಲೇಟ್ ಕುಮಾರಬೋವಿ ದೊಣ್ಣೆಕೋರನಹಳ್ಳಿ ಗ್ರಾಮ ವಾಸಿ ರವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಮಗಳು ಕವನ  ದಿನಾಂಕ 14-02-2022 ರಂದು ಬೆಳಿಗ್ಗೆ ಮನೆಯಲ್ಲಿ ಇದ್ದವಳು ಸಂಜೆ ನೋಡಲಾಗಿ ಮನೆಯನ್ನು ಬಿಟ್ಟು ಹೋಗಿದ್ದು ವಾಪಾಸ್ಸು ಮನೆಗೆ ಬಾರದೇ ಇದ್ದು ಕಾಣೆಯಾಗಿದ್ದು ಹುಡುಕಲಾಗಿ ಇಲ್ಲಿಯವರೆಗೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ಕವನ, 19 ವರ್ಷ, 5.6 ಅಡಿ ಎತ್ತರ,  ಸಾದಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ  ಕೋಲುಮುಖ, ಕನ್ನಡ ಮತ್ತು ತೆಲಗು ಭಾಷೆ ಮಾತನಾಡುತ್ತಾಳೆ. ಪಿಂಕ್ ಕಲರ್ ಟಾಪ್, ಲಗಿನ್ಸ್ ಪ್ಯಾಂಟ್ ಮತ್ತು ವೇಲ್ ಧರಿಸಿರುತ್ತಾಳೆ. ಕಾಣೆಯಾಗಿರುವ ತನ್ನ ಮಗಳು ಕವನಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಯಗಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ;16-02-2022 ರಂದು ಶ್ರೀಮತಿ ರುದ್ರಮ್ಮ ಕೊಂ ರಾಮಪ್ಪ ಅಂತರಘಟ್ಟೆ ಗ್ರಾಮ ವಾಸಿ ರವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಮಗಳು ರೇಖಾಳು ದಿನಾಂಕ 14-02-2022 ರಂದು ಬೆಳಿಗ್ಗೆ ಮನೆಯಲ್ಲಿ ಇದ್ದವಳು 11.00 ಗಂಟೆ ಸಮಯದಲ್ಲಿ  ಅಂಗಡಿಗೆ ಹೋಗುವುದಾಗಿ ಮಗ ರಾಘವೇಂದ್ರ ನನ್ನು ಕರೆದುಕೊಂಡು  ಮನೆಯಿಂದ ಹೋಗಿದ್ದು  ವಾಪಾಸ್ಸು ಮನೆಗೆ ಬಾರದೇ ಇದ್ದು ಕಾಣೆಯಾಗಿದ್ದು ಹುಡುಕಲಾಗಿ ಇಲ್ಲಿಯವರೆಗೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ತನ್ನ ಮಗಳು ರೇಖಾ, 30 ವರ್ಷ, ದುಂಡು ಮುಖ ಎಣ್ಣೆಗೆಂಪು ಬಣ್ಣ  ಕಪ್ಪು ಕೂದಲು , ಕನ್ನಡ ಭಾಷೆ ಮಾತನಾಡುತ್ತಾಳೆ. ಮಗು ರಾಘವೇಂದ್ರ 5 ವರ್ಷ, ದುಂಡು ಮುಖ, ಸಾದಾರಣ ಮೈಕಟ್ಟು, ಕಾಣೆಯಾಗಿರುವ ತನ್ನ ಮಗಳು ರೇಖಾ ಮತ್ತು ಮಗು ರಾಘವೇಂದ್ರ ರನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 16-02-2022 08:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080