ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಯಗಟಿ ಪೊಲೀಸ್ ಠಾಣೆ.

ದಿನಾಂಕ:16/03/2022 ರಂದು ಪಿರ್ಯಾದಿ ಶ್ರೀ ಶ್ರೀಮತಿ ರೇಖಾ ಕೋಂ ಗೋವಿಂದಪ್ಪ, ಗುಡ್ಡೇಹಳ್ಳಿ ಯಗಟಿ ಹೋಬಳಿ ವಾಸಿ  ಇವರು ನೀಡಿದ ದೂರಿನಲ್ಲಿ ದಿನಾಂಕ:15/03/2022 ರಂದು ಪಿರ್ಯಾದಿ ಗಂಡ ಗೋವಿಂದಪ್ಪ ಇವರು ಯಗಟಿಗೆ ಹೋಗಿ ಮನೆಗೆ ದಿನಸಿ ತರಲು ಕೆಎ-04-ಹೆಚ್-6572 ಬೈಕಿನಲ್ಲಿ ಹೋಗಿದ್ದು ಯಗಟಿ ಯಿಂದ ಗುಡ್ಡೇಹಳ್ಳಿಗೆ ಬರುತ್ತಿರುವಾಗ ಟ್ಯಾಕ್ಟರ್ ನಂ ಕೆಎ-18-ಟಿಎ-2840 ರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಗೋವಿಂದಪ್ಪ ಚಾಲಾಯಿಸುತ್ತಿದ್ದ  ಬೈಕಿಗೆ ಡಿಕ್ಕಿ ಪರಿಣಾಮ ಗೋವಿಂದಪ್ಪರವರಿಗೆ ಕುತ್ತಿಗೆ ಮತ್ತು ತಲೆಗೆ ಅತಿಯಾಗಿ ಪೆಟ್ಟಾಗಿ ರಕ್ತ ಶ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಅಪಘಾತ ಉಂಟು ಮಾಡಿದ ಟ್ಯಾಕ್ಟರ್ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಗೋ ಹತ್ಯಾ  ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ:16-03-2022 ರಂದು ಪಿರ್ಯಾದಿ ಡಾ: ವಿಶ್ವನಾಥ. ಸಿ.ಎನ್.  ಮುಖ್ಯ ಪಶು ನಿರ್ದೇಶಕರು, ಚಿಕ್ಕಮಗಳೂರು ರವರು ನೀಡಿದ ದೂರಿನಲ್ಲಿ ಚಿಕ್ಕಮಗಳೂರು ನಗರದ ತಮಿಳು ಕಾಲೋನಿಯ ಅಕ್ಸಾ ಮಸೀದಿ ಹತ್ತಿರ ಇರುವ ಸುಹೇಲ್ ಹೋಟೇಲ್ ನಲ್ಲಿ ಅಕ್ರಮವಾಗಿ ದನದ ಮಾಂಸದ ತಿನಿಸುಗಳನ್ನು ಮಾಡಿಕೊಂಡು ಗ್ರಾಹಕರಿಗೆ ಮಾರಾಟ ಮಾಡುತ್ತಿರುವುದಾಗಿ, ಮಾಹಿತಿ ಮೇರೆಗೆ  ಪುರಸಭೆಯ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹೊಟೇಲ್ ನಲ್ಲಿ 5 ಕೆ.ಜಿ ಯಷ್ಟು ದನದ ಮಾಂಸ ಸಿಕ್ಕಿದ್ದು ಹೋಟೇಲ್ ಮಾಲಿಕರಾದ ಮೊಹಮ್ಮದ್ ಸುಹೇಲ್ ಬಿನ್ ಬಾಷಾ ಸಾಬ್ ಈತನನ್ನು ಸದರಿ ಮಾಂಸವನ್ನು ಮೊಹಮ್ಮದ್ ಇಕ್ಬಾಲ್ ಕುರೇಶಿ ಬಿನ್ ಫಜಲೂರ್ ರೆಹಮಾನ್ ಚಿಕ್ಕಮಗಳೂರು ರವರಿಂದ ತಂದಿರುವುದಾಗಿ ತಿಳಿಸಿದ್ದು, ದನದ ಮಾಂಸವನ್ನು ಮಾರಾಟ ಮಾಡಿದ ಇಬ್ಬರು ಅರೋಪಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಮತ್ತು 5 ಕೆ.ಜಿ ದನದ ಮಾಂಸವನ್ನು ಅಮಾನತ್ತುಪಡಿಸಿಕೊಂಡು  ಆರೋಪಿತಯರ ವಿರುದ್ದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮಟ್ಕಾ ಜೂಜಾಟ ಪ್ರಕರಣ

ಸಿ.ಇ.ಎನ್. ಪೊಲೀಸ್ ಠಾಣೆ.

ದಿನಾಂಕ:15-03-2022 ರಂದು ತರೀಕೆರೆ ಪಟ್ಟಣದ ಗಾಳಿಹಳ್ಳಿ ಕ್ರಾಸ್ ನ ಜೈ ಕರ್ನಾಟಕ ಆಟೋ ನಿಲ್ದಾಣದ ಹತ್ತಿರ  ಮಹಮ್ಮದ್ ಗೌಸ್ ಬಿನ್ ಲೇಟ್ ಗೌಸ್ ಮೊಹಿದ್ದಿನ್ ವಾಸ ನಾಗೇನಹಳ್ಳಿ ಈತನು ಅಕ್ರಮವಾಗಿ ಮಟ್ಕಾ ಜೂಜಾಟ ಆಡಿಸುತ್ತಿದ್ದು, ಅರೋಪಿಯನ್ನು ವಶಕ್ಕೆ ಪಡೆದು, ಆರೋಫಿ ಸಾರ್ವಜನಿಕರಿಂದ ಸಂಗ್ರಹಿಸಿದ ನಗದು ಹಣ 3720/- ರೂ ಮಟ್ಕಾ ಬರೆದಿರುವ ಹಾಳೆ ಮತ್ತು ಒಂದು ಪೆನ್ ಅನ್ನು ಅಮಾನತ್ತುಪಡಿಸಿಕೊಂಡು ಆರೋಪಿತನ ವಿರುದ್ದ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆ ಸಿ.ಇ.ಎನ್. ಪಿ.ಎಸ್.ಐ. ನಾಸೀರ್ ಹುಸೇನ್ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 16-03-2022 06:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080