ಅಭಿಪ್ರಾಯ / ಸಲಹೆಗಳು

ಕೊಲೆ ಪ್ರಕರಣ  
ಕಳಸ ಪೊಲೀಸ್ ಠಾಣೆ.
ದಿನಾಂಕ 16/05/2021 ರಂದು ಪಿರ್ಯಾದಿ ಶ್ರೀಮತಿ ಚಂದ್ರಮತಿ ಕೊಂ ಅನಂತ ರಾಮಯ್ಯ ರವರು ಕಳಸ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತನ್ನ ಹಿರಿಯಮಗ ಮಹಾವೀರ ಹಿರೇಬೈಲು ಪ್ರಾಥಮಿಕ ಸಹಕಾರ ಬ್ಯಾಂಕಿನಲ್ಲಿ ಕೆಲಸ ಮಾಡಿಕೊಂಡಿದ್ದು, ತನ್ನ ಕಿರಿಯ ಮಗ ಪಾಶ್ರ್ವನಾಥ  ಮಾಹವೀರ ನೊಂದಿಗೆ 3 ವರ್ಷಗಳಿಂದ ಅಸ್ತಿ ವಿಚಾರದಲ್ಲಿ ಜಗಳ ಆಡುತ್ತಿದ್ದು, ದಿನಾಂಕ 15/05/2021 ರಂದು ಸಂಜೆ 7-00 ಗಂಟೆ  ಪಾಶ್ರ್ವನಾಥನು ಮಾಹಾವೀರನನ್ನು ಮನೆಯಲ್ಲಿ ಮಲಗಿದಾಗ ಮರಸಣಿಗೆ ಕಡೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವನು, ರಾತ್ರಿ 8-30 ಗಂಟೆ ಸಮಯಕ್ಕೆ ಮನೆಗೆ ಬಂದು, ಮನೆಯ ಜಗಲಿಯ ಮೇಲೆ  ಮಲಗಿದ್ದ ಮಹಾವೀರನ ಕುತ್ತಿಗೆಯನ್ನು, ಕಾಲಿನಿಂದ ತುಳಿದು, ಕಬ್ಬಿಣದ ಕತ್ತಿಯಿಂದ ತಲೆಗೆ ಮತ್ತು ಮುಖಕ್ಕೆ ಹೊಡೆದಿದ್ದು, ಕತ್ತಿಯನ್ನು ಪಿರ್ಯಾದಿ ಕಿತ್ತುಕೊಂಡಾಗ, ಪಾಶ್ರ್ವನಾಥನು ಮನೆಯಲ್ಲಿ ಇದ್ದ ಸೌದೆ ಕಟ್ಟಿಗೆಯಿಂದ ಮಾಹಾವೀರನ ಮುಖಕ್ಕೆ ಮತ್ತು ಕಿವಿಯ ಬಳಿ ಹೊಡೆದು ಮುಖವೆಲ್ಲಾ ರಕ್ತವಾಗಿದ್ದು, ಪಿರ್ಯಾದಿ ಅಕ್ಕಪಕ್ಕದವರನ್ನು  ಮಹಾವೀರನನ್ನು ಅಸ್ಪತ್ರೆಗೆ ಸೇರಿಸಲು ಸಹಾಯಕ್ಕೆ ಕರೆದು ಬರುವ ವೇಳೆಗೆ ಮಹಾವೀರ ಮೃತಪಟ್ಟಿರುವುದಾಗಿ ಪಿರ್ಯಾದಿ ಶ್ರೀಮತಿ ಚಂದ್ರಮತಿ ರವರು ನೀಡಿದ ದೂರಿನ ಮೇರೆಗೆ ಆರೋಪಿ ಪಾಶ್ರ್ವನಾಥ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಅಕ್ರಮ ಇಸ್ಪೀಟ್ ಜೂಜಾಟ ಪ್ರಕರಣ  ಹಾಗೂ ಕೋವೀಡ್ ನಿಯಮ ಉಲ್ಲಂಘನೆ ಪ್ರಕರಣ
ಕಡೂರು ಪೊಲೀಸ್ ಠಾಣೆ. 
ದಿನಾಂಕ:16/05/2021 ರಂದು ಕಡೂರು ಠಾಣಾ ಸರಹದ್ದಿನ ಹರುವನಹಳ್ಳಿ ಗ್ರಾಮದ ಅಶೋಕ ಬಿನ್ ಗೋವಿಂದಪ್ಪ ರವರ ಜೋಳದ ಹೊಲದ ಬಳಿ ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವ ಬಗ್ಗೆ ಬಂದ ಖಚಿತ ವರ್ತಮಾನದ ಮೇರೆಗೆ ದಾಳಿ ಮಾಡಿ 5 ಜನ ಆರೋಫಿತರನ್ನು ವಶಕ್ಕೆ ಪಡೆದುಕೊಂಡಿದ್ದು ಆರೋಫಿತರು ಕೋವೀಡ್ ನಿಯಮವನ್ನು ಉಲ್ಲಂಘನೆ ಮಾಡಿ ಸಾಮಾಜಿಕ ಅಂತರವನ್ನು ಕಾಪಾಡದೇ ಆರೋಪಿತರು ಇಸ್ಪೀಟ್ ಜೂಜಾಟ ಆಡಲು ಬಳಸಿದ 52 ಇಸ್ಪೀಟ್ ಎಲೆಗಳು, 24,520/- ರೂ ನಗದು ಹಣ ಮತ್ತು 4 ಮೊಬೈಲ್ ಗಳನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಫಿತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಶ್ರೀಮತಿ ಎನ್. ಕೆ. ರಮ್ಯ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.
ಅಕ್ರಮ ಮದ್ಯ ಮಾರಾಟ ಪ್ರಕರಣ
 ಲಕ್ಕವಳ್ಳಿ   ಪೊಲೀಸ್  ಠಾಣೆ
ದಿನಾಂಕ:15/05/2021 ರಂದು ಲಕ್ಕವಳ್ಳಿ  ಠಾಣಾ ವ್ಯಾಪ್ತಿಯ ರಂಗನಾಥಪುರ ,ರಂಗೇನಹಳ್ಳಿ ಗ್ರಾಮದ ಎಂಬುವರು ಮನೆಯ  ಮುಂಭಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ  ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ  ಆರೋಪಿಯು ಓಡಿ ಹೋಗಿದ್ದು, ಆತನು ಬಿಟ್ಟು ಹೋದ ಪ್ಲಾಸ್ಟಿಕ್ ಕವರ್ ನಲ್ಲಿ 90 ಎಂ.ಎಲ್. ನ ಓರಿಜನಲ್ ಚಾಯ್ಸ್ ಡಿಲಕ್ಸ್ ವಿಸ್ಕಿ 30 ಪೌಚ್ ಮದ್ಯವನ್ನು ಮದ್ಯದ ಅಂದಾಜು ಬೆಲೆ 1050/- ರೂ ಆಗಿದ್ದು, ಸದರಿ  ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಅರೋಪಿ ಸುಬ್ಬಣ್ಣ  ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ 'ಕಾರ್ಯಾಚರಣೆಯಲ್ಲಿ ಪಿ.ಎಸ್ಐ. ರಘುನಾಥ್ ಎಸ್.ವಿ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.  

   ಬೀರೂರು  ಪೊಲೀಸ್  ಠಾಣೆ
ದಿನಾಂಕ:15/05/2021 ರಂದು ಬೀರೂರು   ಠಾಣಾ ವ್ಯಾಪ್ತಿಯಲ್ಲಿ ಗಸ್ತು ಮಾಡುತ್ತಿರುವಾಗ ಹೊಗರೆಹಳ್ಳಿ ಗೇಟ್ ಬಳಿ ಒಬ್ಬ ಆಸಾಮಿಯು  ಚೀಲದಲ್ಲಿ ಮದ್ಯವನ್ನು ಇಟ್ಟುಕೊಂಡು  ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ  ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ  ಆರೋಪಿಯು ಓಡಿ ಹೋಗಿದ್ದು,ಆರೋಪಿಯ ಹೆಸರು ಮಂಜಾನಾಯ್ಕ ಬಿನ್ ನರಸಾನಾಯ್ಕ ಆಲದಹಳ್ಳಿ  ವಾಸಿ ಎಂದು ತಿಳಿದಿದ್ದು , ಆತನು ಬಿಟ್ಟು ಹೋದ ಪ್ಲಾಸ್ಟಿಕ್ ಚೀಲದಲ್ಲಿ 90 ಎಂ.ಎಲ್. ನ ರಾಜಾವಿಸ್ಕಿ  ವಿಸ್ಕಿಯ 66  ಪೌಚ್ ಗಳಿದ್ದು, ಮದ್ಯದ ಅಂದಾಜು ಬೆಲೆ 2318/- ರೂ ಆಗಿದ್ದು ಸದರಿ  ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಅರೋಪಿ ಮಂಜಾನಾಯ್ಕನ   ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್ಐ. ವಿಶ್ವನಾಥ ಎನ್,ಸಿ.   ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ
    ಬೀರೂರು  ಪೊಲೀಸ್  ಠಾಣೆ
ದಿನಾಂಕ:15/05/2021 ರಂದು ಬೀರೂರು  ಠಾಣಾ ವ್ಯಾಪ್ತಿಯಲ್ಲಿ ಗಸ್ತು ಮಾಡುತ್ತಿರುವಾಗ ಹೊಗರೆಹಳ್ಳಿ  ಗೇಟ್ ನಿಂದ ಆಲದಹಳ್ಳಿ ಕಡೆಗೆ ಹೋಗುವ ರಸ್ತೆಯ ಬದಿಯ ವಾಟರ್ ಟ್ಯಾಂಕ್ ಬಳಿ ಒಬ್ಬ ಆಸಾಮಿಯು  ಚೀಲದಲ್ಲಿ ಮದ್ಯವನ್ನು ಇಟ್ಟುಕೊಂಡು  ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ  ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ  ಆರೋಪಿಯು ಓಡಿ ಹೋಗಿದ್ದು,ಆತನ ಹೆಸರು ಕುಮಾರನಾಯ್ಕ  ಬಿನ್ ಕೃಷ್ಣಾನಾಯ್ಕ  ,ಆಲದಹಳ್ಳಿ  ವಾಸಿ ಎಂದು ತಿಳಿದಿದ್ದು  ಆತನು ಬಿಟ್ಟು ಹೋದ ಪ್ಲಾಸ್ಟಿಕ್ ಚೀಲದಲ್ಲಿ 90 ಎಂ.ಎಲ್. ನ ರಾಜಾವಿಸ್ಕಿ  ವಿಸ್ಕಿಯ 45  ಪೌಚ್ ಗಳಿದ್ದು, ಮದ್ಯದ ಅಂದಾಜು ಬೆಲೆ 1580/- ರೂ ಆಗಿದ್ದು ,ಸದರಿ  ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಅರೋಪಿ ಕುಮಾರನಾಯ್ಕ ನ   ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್ಐ. ವಿಶ್ವನಾಥ ಎನ್,ಸಿ.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ   


 

ಇತ್ತೀಚಿನ ನವೀಕರಣ​ : 16-05-2021 07:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080